ಜೀ ಕನ್ನಡದಲ್ಲಿ ಮತ್ತೊಂದು ಮಧ್ಯ ವಯಸ್ಸಿನ ಲವ್‌ಸ್ಟೋರಿ ಅಮೃತಧಾರೆ
ಅಮೃತಧಾರೆ ಅನ್ನೋ ಹೊಸ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೊ ಹೊರಬಂದಿದೆ. ಅಷ್ಟಕ್ಕೂ ಈ ಸೀರಿಯಲ್ ನ ಕಥೆ ಏನು? ಯಾಕಿದು ಅಷ್ಟೊಂದು ಮಹತ್ವ ಪಡೀತಿದೆ?
ಅಮೃತಧಾರೆ ಅನ್ನೋ ಸಿನಿಮಾ ಬಹಳ ಹಿಂದೆ ಬಂದಿತ್ತು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚೆಂದದ ಸಿನಿಮಾದಲ್ಲಿ ರಮ್ಯಾ ಮತ್ತು ಧ್ಯಾನ್ ನಟಿಸಿದ್ದರು. ಈ ಬ್ಯೂಟಿಫುಲ್ ಲವ್ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಇದೇ ಹೆಸರಿನ ಸೀರಿಯಲ್ ಬರ್ತಿದೆ. ಇದು ಜೀ ಕನ್ನಡದಲ್ಲಿ ಪ್ರಸಾರವಾಗಬೇಕಿರೋ ಸೀರಿಯಲ್. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಾಯಕ, ನಾಯಕಿ. ರಾಜೇಶ್ ಮತ್ತು ಛಾಯಾ ಇಬ್ಬರೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದವರು. ರಾಜೇಶ್ ನಟರಂಗ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರ, ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದರೆ, ಛಾಯಾಸಿಂಗ್ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ತೆಲುಗಿನ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಇಬ್ಬರ ಕಾಂಬಿನೇಶನ್ ಐಡಿಯಾ ಯಾರಿಗೆ ಹೊಳೀತೋ ಗೊತ್ತಿಲ್ಲ. ಸ್ವಲ್ಪ ನೆಗೆಟಿವ್ ಕಮೆಂಟ್ಸ್ ಬಂದರೂ ಈ ಸೀರಿಯಲ್‌ನ ಮೊದಲ ಪ್ರೋಮೋ ವೀಕ್ಷಕರ ಗಮನಸೆಳೆಯೋದರಲ್ಲಿ ಯಶಸ್ವಿಯಾಗಿದೆ.
ಅಷ್ಟಕ್ಕೂ ಇದೊಂದು ಸ್ವತಂತ್ರ ಕಥೆಯಾ ಅಂದರೆ ಅಲ್ಲ. ಇದು ಹಿಂದಿಯ ಜನಪ್ರಿಯ ಸೀರಿಯಲ್ ಒಂದರ ರೀಮೇಕ್. 'ಬಡೆ ಅಚ್ಛೇ ಲಗ್ತಾ ಹೈ' ಅನ್ನೋ ಸೀರಿಯಲ್‌ನ ಕನ್ನಡ ಅವತರಣಿಕೆ. ಇದರಲ್ಲಿ ಭೂಮಿಕಾ ಮತ್ತು ಗೌತಮ್ ನಾಯಕ ನಾಯಕಿ. ಇಲ್ಲಿ ಗೌತಮ್ ಪಾತ್ರದಲ್ಲಿ ರಾಜೇಶ್ ಕಾಣಿಸಿಕೊಂಡರೆ, ಛಾಯಾ ಸಿಂಗ್ ನಾಯಕಿ ಭೂಮಿಕಾ ಪಾತ್ರದಲ್ಲಿ ನಟಿಸಲಿದ್ದಾರೆ. 'ಹುಡುಗ-ಹುಡುಗಿ ಹೊಂದ್ಕೊಂಡಿದ್ರೆ ಅದೊಂದು ಚೆಂದದ ಕಥೆ. ಅವರಿಬ್ರೂ ಕಿತ್ತಾಡ್ಕೊಂಡಿದ್ರೆ ಅದು ಬೇರೇನೇ ಕಥೆ. ಶೀಘ್ರದಲ್ಲಿ ಬರ್ತಿದೆ ಒಂದು ಬೊಂಬಾಟ್ ಕಥೆ, ಅಮೃತಧಾರೆ’ ಎಂಬ ವಿವರಣೆ ಪ್ರೋಮೋ ಮೂಲಕ ಸಿಕ್ಕಿದೆ. ಇದರಲ್ಲಿ ಗೊತ್ತಾಗಿರೋ ಇನ್ನೊಂದು ಅಂಶ ಅಂದರೆ ರಾಜೇಶ್ ನಟರಂಗ ಅವರು ಶ್ರೀಮಂತ ಉದ್ಯಮಿ ಆಗಿ ಕಾಣಿಸಿಕೊಳ್ತಿದ್ದಾರೆ. ಛಾಯಾ ಸಿಂಗ್ ಮಧ್ಯಮ ವರ್ಗದ ಮಧ್ಯ ವಯಸ್ಸಿನ ಅವಿವಾಹಿತ ಹೆಣ್ಣಾಗಿ ಕಾಣಿಸಿಕೊಳ್ಳಲಿದ್ದಾರೆ.
ಸೆಟ್ ಬಿಟ್ಟು ಮೈಸೂರು ವಿಮಾನ ನಿಲ್ದಾಣದಲ್ಲಿ ಶೂಟಿಂಗ್ ಮಾಡಿದ ಒಲವಿನ ನಿಲ್ದಾಣ
ಜೀ ಕನ್ನಡದಲ್ಲಿ ಮಧ್ಯ ವಯಸ್ಸಿನ ಲವ್‌ಸ್ಟೋರಿಗಳು ಹೆಚ್ಚೆಚ್ಚು ಬರ್ತಿವೆ ಅನ್ನೋದು ಈ ಚಾನಲ್ ವೀಕ್ಷಕರ ದೊಡ್ಡ ಕಂಪ್ಲೇಟ್(Complaint). ಅದ್ಕೆ ಸಾಕ್ಷಿ ಅನ್ನೋ ಹಾಗೆ ಈ ಚಾನಲ್‌ನಲ್ಲಿ ಒಂದು ಕಾಲದಲ್ಲಿ ಬಲು ಜನಪ್ರಿಯವಾಗಿದ್ದ ಸೀರಿಯಲ್ 'ಜೊತೆ ಜೊತೆಯಲಿ'. ಅನಿರುದ್ಧ ಮತ್ತು ಮೇಘಾ ಶೆಟ್ಟಿ ಜೋಡಿ ಭಲೇ ಕಮಾಲ್ ಮಾಡಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಅನಿರುದ್ಧ ಸೀರಿಯಲ್‌ನಿಂದ(Serial) ಹೊರ ಹೋದರು. ಈಗ ಹರೀಶ್ ರಾಜ್ ಆ ಪಾತ್ರದಲ್ಲಿ ಮುಂದುವರಿದಿದ್ದಾರೆ. ಇನ್ನೊಂದು ಇಂಥದ್ದೇ ಪೆಪ್ಪರ್ ಸಾಲ್ಟ್ ಕಥೆ 'ಹಿಟ್ಲರ್ ಕಲ್ಯಾಣ'. ಇದರಲ್ಲಿ ನಲವತ್ತರ ಹರೆಯದ ಶ್ರೀಮಂತ ಉದ್ಯಮಿ ಜೆಕೆ ಹಾಗೂ ಮುಗ್ಧ ಮನಸ್ಸಿನ ಮಧ್ಯಮ ವರ್ಗದ ಹುಡುಗಿ ಲೀಲಾ ನಡುವಿನ ಪ್ರೇಮ, ವಿರಸ, ವಿರಹದ ಕಥೆ ಇದೆ. ಇನ್ನೊಂದು ಸೀರಿಯಲ್ 'ಶ್ರೀರಸ್ತು ಶುಭಮಸ್ತು' ಇದರಲ್ಲೂ ಮಧ್ಯ ವಯಸ್ಕರ ಪ್ರೇಮ ಕಥೆ(Love story) ಇದೆ.
ಈ ನಡುವೆ ಇನ್ನೊಂದು ಮಧ್ಯ ವಯಸ್ಕರ ಪ್ರೇಮ ಕಥೆ ಬರೋ ಸೂಚನೆ ಸಿಕ್ಕಿದೆ. ಇದರ ವಿಶೇಷತೆ ಅಂದರೆ ಈ ಸೀರಿಯಲ್ ನಾಯಕ ನಾಯಕಿ ಇಬ್ಬರೂ ಮಧ್ಯ ವಯಸ್ಸಿನವರು. ಇಬ್ಬರಿಗೂ ಮದುವೆ(Marriage) ಆಗಿಲ್ಲ. ಕಾರಣ ಏನು ಅಂತ ಗೊತ್ತಾಗಬೇಕಿದ್ದರೆ ಸೀರಿಯಲ್ ನೋಡದೇ ವಿಧಿಯಿಲ್ಲ. ಈ ಇಬ್ಬರೂ ಮದುವೆ ಆಗದೇ ಇದ್ದಿದ್ದಕ್ಕೆ ಕಾರಣ ಏನು, ಹಾವು ಮುಂಗುಸಿ ಥರ ಕಚ್ಚಾಡೋ ಇವರ ಮಧ್ಯೆ ಪ್ರೀತಿ ಹುಟ್ಟೋದು ಹೇಗೆ, ಬೆಳೆಯೋದು ಹೇಗೆ ಅನ್ನೋದೇ ಕಥೆ. ಸದ್ಯಕ್ಕಂತೂ ಪ್ರೋಮೋ (Promo)ಕಲರ್‌ಫುಲ್ ಆಗಿ ಬಂದಿದೆ. ಸೀರಿಯಲ್ ಬಗ್ಗೆ ಜನ ಎಷ್ಟೇ ಗೊಣಗಿದರೂ ಅವರ ನಿರೀಕ್ಷೆ ಅಂತೂ ಇದ್ದೇ ಇದೆ. ಈ ನಡುವೆ ಇನ್ನೊಂದು ಹೊಸ ಸೀರಿಯಲ್ ಪ್ರೋಮೋ ಬಿಟ್ಟು ಯಾವ್ದೋ ಕಾಲ ಆಯ್ತು, ಅದಿನ್ನೂ ಪ್ರಸಾರ ಶುರು ಮಾಡಿಲ್ಲ. ಆ ನಡುವೆಯೇ ಈ ಸೀರಿಯಲ್ ಪ್ರೋಮೋ ಬಂದಿದೆ. ಸೋ, ಯಾವ ಸೀರಿಯಲ್ ಮೊದಲು, ಯಾವುದು ನಂತರ ಅನ್ನೋ ಕನ್‌ಫ್ಯೂಶನ್ನೂ ಇದೆ.
ಹೊಸ ಲುಕ್‌ನಲ್ಲಿ ಸಾನ್ಯಾ ಅಯ್ಯರ್ : ಬೇಜಾರ್ ಮಾಡ್ಕೊಂಡ ಹುಡುಗ್ರು