Aishwarya Rai: ಹಿಟ್‌ ಫಿಲ್ಮ್ಸ್‌ ಕೊಡುತ್ತಿದ್ರೂ ಐದು ಚಿತ್ರಗಳಿಂದ ಐಶ್ವರ್ಯ ರೈ ಅವ್ರನ್ನ ಹೊರದಬ್ಬಿದ್ದೇಕೆ?

ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಫಿಲ್ಮ್‌ ನೀಡುತ್ತಿದ್ದರೂ ನಟಿ ಐಶ್ವರ್ಯ ರೈ ಅವರನ್ನು ಐದು ಚಿತ್ರಗಳಿಂದ ಹೊರಕ್ಕೆ ಇಡಲಾಗಿತ್ತು. ಇದಕ್ಕೆ ಕಾರಣವೇನು?
 

 

Aishwarya Rai was thrown out from these 5 hit films after dispute with Salman Khan

ಇತ್ತೀಚೆಗೆ ಬಾಲಿವುಡ್‌ನ 'ದೇಸಿ ಗರ್ಲ್' ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಬಾಲಿವುಡ್‌ನಿಂದ ಹೇಗೆ ದೂರವಾಗಿದ್ದರು ಮತ್ತು ತಮಗೆ ಚಿತ್ರಗಳು ಸಿಗುತ್ತಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹೀಗಾಗುತ್ತಿರುವುದು ಇದೇ ಮೊದಲಲ್ಲವಾದರೂ. ಇತ್ತೀಚಿನ ದಿನಗಳಲ್ಲಿ, ಇನ್ನೊಬ್ಬ ಶ್ರೇಷ್ಠ ನಟಿಯ ವಿಡಿಯೋ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಈ ನಟಿ ಚಲನಚಿತ್ರಗಳಿಂದ ತಮ್ಮನ್ನು ಹೇಗೆ ಹೊರಕ್ಕೆ ಇಟ್ಟರು ಎಂಬುದನ್ನು ವಿವರಿಸಿದ್ದಾರೆ. ಒಂದರ ಮೇಲೊಂದರಂತೆ ಸೂಪರ್‌ ಹಿಟ್‌ ಚಿತ್ರ ಕೊಡುತ್ತಿದ್ದರೂ, ತಮ್ಮನ್ನು ಹೇಗೆ ಹೊರಕ್ಕೆ ತಳ್ಳಲಾಯಿತು ಎಂಬ ಬಗ್ಗೆ ಅವರು ಮಾತನಾಡಿದ್ದಾರೆ. ಅವರು ಮತ್ತ್ಯಾರೂ ಅಲ್ಲ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ! ಹೌದು. ನಟಿ ಸಿಮಿ ಅಗರ್‌ವಾಲ್‌ ಅವರ ಚಾಟ್‌ ಷೋನಲ್ಲಿ ಈ ವಿಷಯವನ್ನು ಐಶ್ವರ್ಯ (Aishwariya Rai)  ಈ ಹಿಂದೆಯೇ ಬಹಿರಂಗಪಡಿಸಿದ್ದಾರೆ. ಬಾಲಿವುಡ್‌ ತೊರೆದು ಹಾಲಿವುಡ್‌ಗೆ ಕಾಯಂ ಆಗಿ ಹೋಗುವ ನಿರ್ಧಾರ ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರ ವಿಷಯ ಈಗ ಬಹಳ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ನಟಿ ಐಶ್ವರ್ಯ ರೈ ಅವರ ಹಳೆಯ ವಿಡಿಯೋ (Vedio) ಮತ್ತೆ ಸದ್ದು ಮಾಡುತ್ತಿದೆ. ಈ ಚಾಟ್‌ ಷೋನಲ್ಲಿ ನಟಿ ತಮಗಾಗಿರುವ ಕೆಟ್ಟ ಅನುಭವಗಳನ್ನು ಹೇಳಿಕೊಂಡಿದ್ದಾರೆ.  

ಐದು ಸೂಪರ್‌ಹಿಟ್‌ ಚಿತ್ರಗಳಲ್ಲಿ ನಟಿಸಬೇಕಿತ್ತು ನಟಿ ಐಶ್ವರ್ಯ ರೈ. ಆದರೆ ನಿರ್ದೇಶಕರು ಹಾಗೂ ನಿರ್ಮಾಪಕರು ಐಶ್ವರ್ಯ ಹೆಸರನ್ನು ಮೊದಲಿಗೆ ಸೂಚಿಸಿದ್ದಾದರೂ ಕೊನೆಯ ಹಂತದಲ್ಲಿ ಕೈ ಬಿಡಲಾಗಿತ್ತು. ಕೆಲವು ಚಿತ್ರಗಳಲ್ಲಿ ಈ ರೀತಿಯಾಗಿದ್ದರೂ, ಬೇರೆ ನಟಿಯರನ್ನು ಹಾಕಿಕೊಂಡು ತಯಾರು ಮಾಡಲಾಗಿದ್ದ ವೀರ್ ಜರಾ, ಚಲ್ತೇ ಚಲ್ತೆ, ಮೈ ಹೂ ನಾ, ಪಹೇಲಿ, ಮುನ್ನಾಭಾಯ್ ಎಂಬಿಬಿಎಸ್ ಬ್ಲಾಕ್‌ಬಸ್ಟರ್‌ (Blockbuster) ಚಿತ್ರಗಳು ಎನಿಸಿದ್ದವು. ಈ ಎಲ್ಲಾ ಚಿತ್ರಗಳಿಗೂ ನಟಿ ಐಶ್ವರ್ಯ ರೈ ಕೆಲಸ ಮಾಡಲು ಒಪ್ಪಿಕೊಂಡಿದ್ದರು. ಆದರೆ ಏಕಾಏಕಿ ಏನೂ ಕಾರಣ ನೀಡದೇ ಬೇರೆ ನಟಿಯರನ್ನು ಹಾಕಿಕೊಳ್ಳಲಾಗಿತ್ತು. ಈ ಬಗ್ಗೆ ಐಶ್ವರ್ಯ ಸಿಮಿ ಅಗರ್‌ವಾಲ್‌ (Simi Agarwal) ಅವರ ಪ್ರಶ್ನೆಗೆ ಉತ್ತರ ನೀಡುತ್ತಾ ನೆನಪು ಮಾಡಿಕೊಂಡಿದ್ದಾರೆ.

ಸೊಸೆ ಬಗ್ಗೆ ಕೀಳು ಕಮೆಂಟ್: ರೊಚ್ಚೆಗೆದ್ದ ಐಶ್ವರ್ಯಾ ಅತ್ತೆ ಜಯಾ ಬಚ್ಚನ್

ಒಂದಕ್ಕಿಂತ ಒಂದು ಸೂಪರ್‌ಹಿಟ್‌ ಚಿತ್ರ ಕೊಟ್ಟರೂ ಐಶ್ವರ್ಯ ರೈ ಅವರನ್ನು ಹೀಗೇಕೆ ನಡೆಸಿಕೊಂಡರು ಎನ್ನುವುದಕ್ಕೂ ಒಂದು ವಿಚಿತ್ರ ಕಾರಣವೂ ಇದೆ. ಅದೇ ಸಲ್ಮಾನ್‌ ಖಾನ್‌. ಐಶ್ವರ್ಯ, ಅಭಿಷೇಕ್‌ ಬಚ್ಚನ್‌ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ನಲ್ಲಿ ಇದ್ದುದು ಹಾಗೂ ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದದ್ದೇ. 90ರ ದಶಕದಲ್ಲಿ ಸಲ್ಮಾನ್ ಖಾನ್  (Salman Khan) ಮತ್ತು ಐಶ್ವರ್ಯಾ ರೈ ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ  ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್‌ ಹೆಚ್ಚು ಚರ್ಚೆಯಾಗಿತ್ತು.  ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು. ಐಶ್ವರ್ಯಾ ಸಲ್ಮಾನ್ ಜೊತೆ ವಿವಾದವನ್ನು ಹೊಂದಿದ್ದಾಗ, ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಬ್ರೇಕಪ್ ನಂತರ, 2002 ರಲ್ಲಿ, ಐಶ್ವರ್ಯಾ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದರು.  ನನ್ನ ವಿವೇಕ, ನನ್ನ ಘನತೆ ಮತ್ತು ನನ್ನ ಕುಟುಂಬದ ಘನತೆಯನ್ನು ಪರಿಗಣಿಸಿ, ಇದು ಸಾಕು. ನಾನು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವುದಿಲ್ಲ' ಎಂದು ಐಶ್ವರ್ಯ ಹೇಳಿದ್ದರು.

ಇಷ್ಟೆಲ್ಲಾ ಗಲಾಟೆಯಾದ ಬಳಿಕ ಐಶ್ವರ್ಯ ರೈ ಅವರ ವಿರುದ್ಧ ನಿರ್ಮಾಪಕರು ಗರಂ ಆಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ನೀವೇ ಬೇಕು ಎಂದು ಒಪ್ಪಿಸಿಕೊಂಡು ಬಂದ ನಿರ್ಮಾಪಕರು (Producers) ಐದು ಹಿಟ್‌ ಚಿತ್ರಗಳಿಂದ ಐಶ್ವರ್ಯ ಅವರ ಕೈ ಬಿಟ್ಟಿದ್ದರು. ಈ ಬಗ್ಗೆ ಖುದ್ದು ಐಶ್ವರ್ಯ ಹೇಳಿಕೊಂಡರು.

ಆಕೆ I Love You ಎಂದ್ರೆ ಲೈಫ್ ಬರ್ಬಾದ್​​​.... ಸಲ್ಮಾನ್​ ಹೇಳಿಕೆಗೆ ಮಹಿಳೆಯರು ಕಿಡಿಕಿಡಿ

Latest Videos
Follow Us:
Download App:
  • android
  • ios