ಶುರುವಾಗ್ತಿದೆ ಐಶ್ವರ್ಯ ಪಿಸ್ಸೆ-ನಾಗಾರ್ಜುನ ಜೋಡಿ 'ಕಸ್ತೂರಿ' ಕಲರವ; ಸೋಮವಾರದಿಂದ ನೋಡಿ ಸ್ಟಾರ್ ಸುವರ್ಣ!
ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ಸಾಕಷ್ಟು ಧಾರಾವಾಹಿಗಳು ಜನಮನ್ನಣೆ ಪಡೆದಿವೆ. ಇದೀಗ ಈ ಸಾಲಿಗೆ ಸೇರ್ಪಡೆಯಾಗಲು ಬರುತ್ತಿದೆ ಹೊಸ ಧಾರಾವಾಹಿ 'ಕಸ್ತೂರಿ '.
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಇದೀಗ ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ 'ಕಸ್ತೂರಿ '. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಧಾರಾವಾಹಿ ಇದೀಗ ಕನ್ನಡದಲ್ಲಿ ಪ್ರಸಾರವಾಗಲಿದೆ. ರಂಜಿತ್ ಎಂಬ ವ್ಯಕ್ತಿ ರಾಜಕೀಯದ ವೃತ್ತಿಯಲ್ಲಿ ಮುನ್ನುಗ್ಗಲು ತಾನು ಪ್ರೀತಿಸಿ ಮದುವೆಯಾಗಿದ್ದ ಹುಡುಗಿಗೆ ಮೋಸ ಮಾಡಿ, ಕೊಲ್ಲಲು ಪ್ರಯತ್ನಿಸುತ್ತಾನೆ, ಆದರೆ ಅದೃಷ್ಟವಶಾತ್ ಆ ಹುಡುಗಿ ಬದುಕಿರುತ್ತಾಳೆ ,ಜೊತೆಗೆ ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವೇ ಕಸ್ತೂರಿ.
ಮುಂದೆ ಆ ಮಗು ತನ್ನ ತಾಯಿಗೆ ಆಗಿರುವ ಅನ್ಯಾಯಕ್ಕೆ ಹೇಗೆ ನ್ಯಾಯ ಒದಗಿಸುತ್ತಾಳೆ ಎಂಬುದು ಈ ಧಾರಾವಾಹಿಯ ಮುಖ್ಯ ಕಥೆ. ಐಶ್ವರ್ಯ ಪಿಸ್ಸೆ ಹಾಗು ನಾಗಾರ್ಜುನ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಕಸ್ತೂರಿ' ಧಾರಾವಾಹಿ ಇದೇ ಸೋಮವಾರದಿಂದ ಮಧ್ಯಾಹ್ನ 1.00 ಗಂಟೆಗೆ ಪ್ರಸಾರವಾಗಲಿದೆ. ಈ ಧಾರಾವಾಹಿಗೆ ದಾರಿ ಬಿಟ್ಟುಕೊಟ್ಟಿರುವ 'ನಾಗಪಂಚಮಿ' ಬದಲಾದ ಸಮಯದಲ್ಲಿ, ಅಂದರೆ ಇದೇ ಸೋಮವಾರದಿಂದ ಬೆಳಗ್ಗೆ 11.00 ಗಂಟೆಗೆ ಪ್ರಸಾರವಾಗಲಿದೆ ಎನ್ನಲಾಗಿದೆ.
ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ಸಾಕಷ್ಟು ಧಾರಾವಾಹಿಗಳು ಜನಮನ್ನಣೆ ಜತೆಗೆ ಉತ್ತಮ ಟಿಆರ್‌ಪಿ ಪಡೆದುಕೊಂಡಿವೆ. ಆಸೆ, ಹೊಂಗನಸು, ನಾಗಪಂಚಮಿ, ಅನುಪಮ, ನೀನಾದೆನಾ, ಅವನು ಮತ್ತೆ ಶ್ರಾವಣಿ, ಲಚ್ಚಿ, ಗೌರಿಶಂಕರ, ಕಥೆಯೊಂದು ಶುರುವಾಗಿದೆ, ಅರಗಿಣಿ-2, ಜತೆಗೆ ಸುವರ್ಣ ಸಂಕಲ್ಪ ಹೀಗೆ ಹಲವು ಧಾರಾವಾಹಿಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ದಿನವಿಡೀ ಪ್ರಸಾರ ಕಾಣುತ್ತವೆ. ಹಲವು ಸೀರಿಯಲ್‌ಗಳು ಭಾರೀ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿವೆ.
ಅವರಿಗೆ ಭಕ್ತಿ ನಟನೆ ಆಗಿರಲಿಲ್ಲ, ಜೀವನವೇ ಆಗಿತ್ತು; ಹುಬ್ಬು ಸುಟ್ಟರೂ ಧ್ಯಾನ ಮಾಡುತ್ತಿದ್ರಾ ಡಾ ರಾಜ್‌ಕುಮಾರ್..!?
ಅಂದಹಾಗೆ, ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಸಿಹಿ ಕಹಿ ಚಂದ್ರು ನೇತೃತ್ವದಲ್ಲಿ ಮೂಡಿ ಬರುತ್ತಿರುವ 'ಬೊಂಬಾಟ್ ಭೋಜನ' ಶೋ ಬರೋಬ್ಬರಿ 1000 ಸಂಚಿಕೆಗಳನ್ನು ಸಾಗಿ ಮುನ್ನುಗ್ಗುತ್ತಿದೆ. ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿ ತನ್ನ ವೀಕ್ಷಕರಿಗೆ ಮನರಂಜನೆಗಳ ಮಹಾಪೂರ ಉಣಬಡಿಸಿದೆ. ಸುವರ್ಣ ಸ್ಪೆಷಲ್ ಭಾನುವಾರ ಹೆಸರಿನಲ್ಲಿ ಬೊಂಬಾಟ್ ಭೋಜನ, 'ಸುವರ್ಣ ಸೂಪರ್ ಸ್ಟಾರ್, 'ಕಥೆಯೊಂದು ಶುರುವಾಗಿದೆ', 'ಸುವರ್ಣ JACKPOT'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ', 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಮಹಾಸಂಚಿಕೆಗಳು ಪ್ರಸಾರವಾಗಲಿವೆ.
ನಾವು ತಲೆ ಬಗ್ಗಿಸದೇ ಇದ್ದಿದ್ದರೆ ಆಸ್ಪತ್ರೆ ಸೇರಿಕೊಳ್ಳಬೇಕಿತ್ತು; ಯಾಕೆ ಹೀಗಂದಿದ್ರು ನಟ ಡಾ ವಿಷ್ಣುವರ್ಧನ್...!?