Asianet Suvarna News Asianet Suvarna News

‘ಅಗ್ನಿಸಾಕ್ಷಿ’ ವಿಜಯ್‌ ಸೂರ್ಯಗೆ ಇವರ ಮೇಲಿತ್ತು ಕ್ರಶ್!

'ಅಗ್ನಿಸಾಕ್ಷಿ' ವಿಜಯ್‌ಗೆ ಇವರ ಮೇಲೆ ಸಿಕ್ಕಾಪಟ್ಟೆ ಕ್ರಶ್ | ‘ಶ್ವೇತಾ ಚೆಂಗಪ್ಪ’ ಕಾದಂಬರಿ ಧಾರಾವಾಹಿಯಲ್ಲಿ ಅವರನ್ನು ನೋಡಿ ಇಷ್ಟಪಟ್ಟಿದ್ದರಂತೆ!  ‘ಶಕ್ತಿಮಾನ್’ ಅಂದರೆ ಈಗಲೂ ವಿಜಯ್‌ಗೆ ಇಷ್ಟ 

My first crush on a TV personality was Swetha Chengappa says Vijay Surya
Author
Bengaluru, First Published Jul 23, 2019, 11:39 AM IST
  • Facebook
  • Twitter
  • Whatsapp

ಕಲರ್ಸ್ ಕನ್ನಡದ ಖ್ಯಾತ ಧಾರಾವಾಹಿ 'ಅಗ್ನಿಸಾಕ್ಷಿ'ಯ ಮೋಸ್ಟ್ ಹ್ಯಾಂಡ್ಸಮ್ ಆ್ಯಂಡ್ ಸ್ಮಾರ್ಟ್ ಮ್ಯಾನ್ ಸಿದ್ದಾರ್ಥ್ ಉರುಫ್ ವಿಜಯ್ ಸೂರ್ಯ ಹುಡುಗಿಯರ ಹಾಟ್ ಫೇವರೇಟ್. 

ವಿಜಯ್ ಸೂರ್ಯಗೆ ಟೆಲಿವಿಷನ್ ಕಡೆ ಒಲವು ಬರಲು ಕಾರಣವೇನು ಎಂಬುದನ್ನು ಅವರೇ ಹೇಳಿದ್ದಾರೆ. 

ತಾಯಿಯಾಗುತ್ತಿದ್ದಾರೆ ‘ಮಜಾ ಟಾಕೀಸ್’ ರಾಣಿ

‘ನಾವು ಚಿಕ್ಕವರಿದ್ದಾಗ ನಮ್ಮ ತಂದೆ ಪಕ್ಕದ ಲೈಬ್ರರಿಯಿಂದ ವಿಸಿಆರ್, ವಿಡಿಯೋ ಕ್ಯಾಸೆಟ್ ಗಳನ್ನು ತಂದು ವಾರಕ್ಕೊಮ್ಮೆ ಸಿನಿಮಾ ತೋರಿಸುತ್ತಿದ್ದರು. ನಮ್ಮ ಮನೆಯಲ್ಲಿ ಚಿಕ್ಕ ಬ್ಲಾಕ್ ಅಂಡ್ ವೈಟ್ ಟಿವಿ ಇತ್ತು. 90 ರ ದಶಕದಲ್ಲಿ ನಾವು ಕಲರ್ ಟಿವಿ ತಂದೆವು’ ಎಂದು ಹಿಂದಿನ ದಿನಗಳನ್ನು ನೆನೆಸಿಕೊಂಡಿದ್ದಾರೆ. 

‘ಶಕ್ತಿಮಾನ್’ ಧಾರಾವಾಹಿ ಈಗಲೂ ನೆನಪುಳಿಯುವ ಧಾರಾವಾಹಿ. ವೀಕೆಂಡ್ ಗಳಲ್ಲಿ ಬರುತ್ತಿದ್ದ ಡೊನಾಲ್ಡ್ ಡಕ್ ಸೀರಿಸ್ ಗಾಗಿ ಕಾಯುತ್ತಿದ್ದೆ. ನಂತರ ಕೇಬಲ್ ಟಿವಿ ಬಂತು. ಆಗ ನಮ್ಮಮ್ಮ  'ಕಾದಂಬರಿ' ಧಾರಾವಾಹಿ ನೋಡುತ್ತಿದ್ದರು.ಶ್ವೇತಾ ಚೆಂಗಪ್ಪ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾನಾವಾಗ ಚಿಕ್ಕವನಿದ್ದೆ. ಅವರೇ ನನ್ನ ಫಸ್ಟ್ ಕ್ರಶ್ ಎಂದು ವಿಜಯ್ ಸೂರ್ಯ ಹೇಳಿದ್ದಾರೆ. 

ಗಂಡ ಹೀಗಿದ್ರೆ ಭಾರೀ ಖುಷಿ ಮರ್ರೆ ರಶ್ಮಿಕಾಗೆ !

ಹೊಸದಾಗಿ ಸಿನಿಮಾ ಇಂಡಸ್ಟ್ರಿಗೆ ಬರುವವರಿಗೆ ಕಿವಿ ಮಾತು ಹೇಳಿದ್ದಾರೆ. ಅದು ಸಿನಿಮಾವೇ ಇರಲಿ, ಕಿರುತೆರೆಯೇ ಇರಲಿ, ತಾಳ್ಮೆ ಬಹಳ ಮುಖ್ಯ. ಯಾರೂ ಕೂಡಾ ರಾತ್ರೋ ರಾತ್ರಿ ಸೂಪರ್ ಸ್ಟಾರ್ ಆಗಿಬಿಡುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡಬೇಕು. ವೃತ್ತಿಯ ಬಗ್ಗೆ ಗೌರವವಿರಬೇಕು ಆಗ ಮಾತ್ರ ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ. 
 

Follow Us:
Download App:
  • android
  • ios