ಕೇವಲ 15 ನಿಮಿಷಗಳ ವೋಟಿಂಗ್‌ನಲ್ಲಿ ಭರ್ಜರಿ 2.13 ಲಕ್ಷ ಮತಗಳನ್ನು ಪಡೆದುಕೊಳ್ಳುವ ಮೂಲಕ ಲಾಯರ್‌ ಜಗದೀಶ್‌ ಬಿಗ್‌ ಬಾಸ್‌ ಮನೆಯಲ್ಲಿ ಸ್ವರ್ಗಕ್ಕೆ ಎಂಟ್ರಿ ಪಡೆದುಕೊಂಡಿದ್ದಾರೆ.

ಬೆಂಗಳೂರು (ಸೆ.29): ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಸಿಟ್ಟಿನ ವ್ಯಕ್ತಿತ್ವ, ರಾಜಕೀಯ ನಾಯಕರೊಂದಿಗಿನ ಮನಸ್ತಾಪದ ಕಾರಣದಿಂದಾಗಿ ಸುದ್ದಿಯಲ್ಲಿದ್ದ ಲಾಯರ್‌ ಜಗದೀಶ್‌ ಕುಮಾರ್‌ ಬಿಗ್‌ ಬಾಸ್‌ ಮನೆಯ 7ನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ. ಜಗದೀಶ್‌ ಅವರು ಬಿಗ್‌ ಬಾಸ್‌ ಮನೆಗೆ ಹೋಗುವ ಬಗ್ಗೆ ಶನಿವಾರ ನಡೆದ ರಾಜ ರಾಣಿ ರೀಲೋಡೆಡ್‌ ಫೈನಲ್‌ನಲ್ಲಿಯೇ ಗೊತ್ತಾಗಿತ್ತು. ಬಿಗ್‌ ಬಾಸ್‌ ಲಾಯರ್‌ ಜಗದೀಶ್‌ ಅವರ ಹೆಸರನ್ನು ಘೋಷಿಸಿ ಇವರು ಬಿಗ್‌ ಬಾಸ್‌ ಮನೆಯಲ್ಲಿ ಸ್ವರ್ಗಕ್ಕೆ ಹೋಗಬೇಕೋ? ನರಕಕ್ಕೆ ಹೋಗಬೇಕೋ? ಎಂದು ವೋಟಿಂಗ್‌ ನಡೆಸಲಾಗಿತ್ತು. ಇಂದು ಬಿಗ್‌ ಬಾಸ್‌ ಗ್ರ್ಯಾಂಡ್‌ ಓಪನಿಂಗ್‌ನಲ್ಲಿ ವೇದಿಕೆಗೆ ಬಂದ ಇವರನ್ನು ಎಲ್ಲಿ ಕಳಿಸಬೇಕು ಎನ್ನುವ ಬಗ್ಗೆ ಮನೆಯ ಒಳಹೊಕ್ಕ ಮೊದಲ ಎರಡು ಸ್ಪರ್ಧಿಗಳಾಗಿದ್ದ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರನ್ನು ಕೇಳಲಾಗಿತ್ತು. ಈ ವೇಳೆ ಅವರು ಸ್ವರ್ಗಕ್ಕೆ ಬರಬೇಕು ಎಂದು ಹೇಳಿದ್ದರು.
ಈ ನಡುವೆ ಮಧ್ಯಪ್ರವೇಶ ಮಾಡಿದ ಕಿಚ್ಚ ಸುದೀಪ್‌, ಇವರನ್ನು ಕೂಡ ಅಭಿಮಾನಿಗಳು ಎಲ್ಲಿ ಹೋಗಬೇಕು ಎಂದು ತೀರ್ಮಾನ ಮಾಡಿದ್ದಾರೆ ಎಂದಿದ್ದರು. ಅದರಂತೆ ಇವರು ಒಟ್ಟು 2.13 ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. ಕೊನೆಗೆ ಬಿಗ್‌ ಬಾಸ್‌ ಮನೆಯ ಬಳಿ ಅವರ ಕೈಯನ್ನು ಇರಿಸಿದಾಗ, ಸ್ವರ್ಗದ ಬಾಗಿಲು ತೆರೆದುಕೊಂಡಿತ್ತು.

ಇತ್ತೀಚೆಗೆ ಅವರು ನಟ ದರ್ಶನ್‌ ಬಿಡುಗಡೆಗೆ ಆಗ್ರಹಿಸಿ ಫ್ರೀಡಮ್‌ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಬಿಜೆಪಿಯ ನಾಯಕರಾದ ಮುನಿರತ್ನ, ರಮೇಶ್‌ ಜಾರಕಿಹೊಳಿ ಕೇಸ್‌ನಲ್ಲಿ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧವೂ ಅವರು ದೊಡ್ಡ ಆರೋಪವೊಂದನ್ನು ಇತ್ತೀಚೆಗೆ ಮಾಡಿದ್ದರು. ಲಾಯರ್‌ ಜಗದೀಶ್‌ ಎಂಟ್ರಿಯಿಂದ ಈ ಬಾರಿ ಹೆಚ್ಚು ಗಲಾಟೆ ಆಗೋದು ಖಚಿತ ಎನ್ನಲಾಗ್ತಿದೆ. ಈ ಬಾರಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ದೊಡ್ಡ ಬಾಯಿಯಿಂದ, ಜಗಳ ಮಾಡಿಕೊಳ್ಳುವ ವ್ಯಕ್ತಿತ್ವದಿಂದಲೇ ಚಿರಪರಿಚಿತರಾದ ವ್ಯಕ್ತಿ ಲಾಯರ್‌ ಜಗದೀಶ್‌ ಅವರನ್ನ ಬಿಗ್​ಬಾಸ್ ಮನೆಯ ಒಳಗೆ ಕಳಿಸುತ್ತಿದೆ.

ಬಿಗ್ ಬಾಸ್ 6ನೇ ಸ್ಪರ್ಧಿ ಧರ್ಮ ಕೀರ್ತಿರಾಜ್ ಹುಡಗಿಯರಷ್ಟು ಸಾಫ್ಟ್ ಇದ್ದಾರಾ? ವೈರಲ್ ಆಯ್ತು ಅನುಷಾ ರೈ ಟಚ್!

ಪುನೀತ್‌ ಕೆರೆಹಳ್ಳಿ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಇವರ ಗಲಾಟೆ ಸಾಕಷ್ಟು ಜನಪ್ರಿಯವಾಗಿತ್ತು. ಏಕವಚನದಲ್ಲಿಯೇ ಇಬ್ಬರೂ ಬೈದಾಡಿಕೊಂಡಿದ್ದರು. ರಮೇಶ್‌ ಜಾರಕಿಹೊಳಿ ಕೇಸ್‌ನಲ್ಲಿ ಸಂತ್ರಸ್ಥೆಯನ್ನು ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಕರೆತರುವ ಕೆಲಸ ಮಾಡಿದ್ದರು.

BBK11: ಬಿಗ್‌ಬಾಸ್‌ಗೆ ಕಾಲಿಟ್ಟ ಗಂಡಿನ ಸ್ಪರ್ಶವನ್ನೂ ಅರಿಯದ ಇಂಜಿನಿಯರ್‌ ಬ್ಯೂಟಿ ಅನುಷಾ ರೈ!