ನಾನು ಆರಂಭದಲ್ಲಿ ಸಿನಿಮಾಗೆ ಎಂಟ್ರಿ ಕೊಡುವಾಗ ನನ್ನ ಹೆಸರನ್ನೇ ಬದಲಾಯಿಸಬೇಕು ಎನ್ನಲಾಗಿತ್ತು. ಪ್ರಸಾದ್ ಎಂದು ಇರುವುದರಿಂದ ಮದ್ವೆಯಾಗಿದೆ ಎಂದು ಜನ ತಿಳಿದುಕೊಳ್ತಾರೆ ಎನ್ನಲಾಗಿತ್ತು.

ಇದನ್ನು ನಟಿಯೇ ಚಾಟ್‌ ಕಾರ್ನರ್‌ನಲ್ಲಿ ರಿವೀಲ್ ಮಾಡಿದ್ದಾರೆ. ನಟಿ ಮ್ಯಾರೀಟ್ ಎಂದುಕೊಳ್ತಾರೆ ಎನ್ನಲಾಗಿತ್ತು. ಇನ್ನು ಮಗನನ್ನು ತಮ್ಮ ಮಗು ಎನ್ನಬೇಡಿ, ತಂಗಿಯ ಮಗನೋ ಇನ್ನೇನೋ ಹೇಳಿ ಎನ್ನಲಾಗಿತ್ತು. ಅದನ್ನು ನಿರಾಕರಿಸಿದ್ದೆ ಎನ್ನುತ್ತಾರೆ ವಿನಯ ಪ್ರಸಾದ್.

ರೀಲ್‌ನಲ್ಲಿ ಜರ್ನಲಿಸ್ಟ್, ರಿಯಲ್‌ನಲ್ಲಿ ಎಂಜಿನಿಯರ್: ಕನ್ನಡತಿಯ ಪೂಜಾ ಇವ್ರೇ

ವಿನಯ ಪ್ರಸಾದ್ ಅನ್ನೋ ಹೆಸರಿನಲ್ಲಿ ಲಕ್ ಇದೆ. ಸಾಧ್ಯವಾದರೆ ಅದನ್ನೇ ಮುಂದುವರಿಸಿ ಎಂದಿದ್ದರಂತೆ ನಟಿ. ಸಿನಿಮಾ ಕ್ಷೇತ್ರದಲ್ಲಿ ನಟಿಯರು ವಿವಾಹ, ಮಗು ಇತ್ಯಾದಿ ವಿಚಾರಗಳನ್ನು ಹೈಡ್ ಮಾಡಲಾಗುತ್ತದೆ.

ಇದು ಇಂದಿಗೂ ಮುಂದುವರಿದಿದೆ. ಆದರೆ ತಮ್ಮ ಮುಂದೆ ಇಂತಹದ್ದೊಂದು ಆಫರ್ ಬಂದಾಗ ಅದನ್ನು ನಟಿ ಹೇಗೆ ಹ್ಯಾಂಡಲ್ ಮಾಡಿದರು ಎಂಬುದನ್ನು ತಿಳಿಸಿದ್ದಾರೆ. ಹಾಗೆಯೇ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡೇ ಹೇಗೆ ಇಮಟರ್‌ವ್ಯೂ ಕೊಡುತ್ತಿದ್ದರು ಎಂಬುದನ್ನೂ ಹೇಳಿದ್ದಾರೆ.