ಟಗರು ಪಲ್ಯ ಟ್ರೈಲರ್ ಲಾಂಚ್: ರಂಗಾಯಣ ರಘು ಪಾತ್ರ ನನ್ನ ಪಾತ್ರಕ್ಕಿಂತ ಜಾಸ್ತಿ ಇದ್ರೆ ನನಗೆ ಕೋಪ ಬರುತ್ತೆ; ನಟಿ ತಾರಾ
ನಟಿ ತಾರಾ ಅನುರಾಧಾ, ರಂಗಾಯಣ ರಘು, ನೀನಾಸಂ ಸತೀಶ್ ಮುಂತಾದವರು ಈ ಟಗರು ಪಲ್ಯ ಸಿನಿಮಾ ಹಾಗೂ ಕಲಾವಿದರ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸಿದ್ದಾರೆ.

ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಟಗರು ಪಲ್ಯ ಚಿತ್ರತಂಡ ಭಾಗಿಯಾಗಿತ್ತು. ನಟ ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯಾ ಕಾರ್ಯಕ್ರಮಕ್ಕೆ ಡಾಲಿ ಧನಂಜಯ್, ನೆನಪಿರಲಿ ಪ್ರೇಮ್, ರಂಗಾಯಣ ರಘು, ನಾಗಭೂಷಣ್ ಮುಂತಾದವರು ಹಾಜರಿದ್ದರು.
ನಟಿ ತಾರಾ ಅನುರಾಧಾ, ರಂಗಾಯಣ ರಘು, ನೀನಾಸಂ ಸತೀಶ್ ಮುಂತಾದವರು ಈ ಟಗರು ಪಲ್ಯ ಸಿನಿಮಾ ಹಾಗೂ ಕಲಾವಿದರ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸಿದ್ದಾರೆ. ನಾಗಭೂಷಣ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ಟಗರು ಪಲ್ಯ. ಇದು ಅಮೃತಾಗೂ ಸಹ ಮೊಟ್ಟಮೊದಲ ಚಿತ್ರವಾಗಿದೆ. ಟಗರು ಪಲ್ಯ ಚಿತ್ರದ ಟ್ರೈಲರ್ ಲಾಂಚ್ ಮಾಡಿದ್ದು ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್.
ಕಲಾವಿದರ ಸಂಘದಲ್ಲಿ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿಬಹಳಷ್ಟು ಸಿನಿಮಾತಾರೆಯರು ಹಾಜರಿದ್ದರು. ನಟ ದರ್ಶನ್ ಕಾರ್ಯಕ್ರದಲ್ಲಿ ಎಲ್ಲರ ಕೇಂದ್ರಬಿಂದು ಎಂಬಂತಿದ್ದು, ಟಗರು ಪಲ್ಯ ಚಿತ್ರದ ಎಲ್ಲ ಕಲಾವಿದರು ದರ್ಶನ್ ಬಗ್ಗೆಯೇ ಮಾತು ಪ್ರಾರಂಭಿಸಿ ಅದೇ ಭಯದಲ್ಲೇ ಮಾತು ಮುಗಿಸಿದಂತಿತ್ತು. ದರ್ಶನ್ ಹೊಸ ಕಲಾವಿದರಿಗೆ ಶುಭ ಹಾರೈಸಿದರು. ಪ್ರೇಮ್ ಪುತ್ರಿ ಅಮೃತಾ ಹಾಗೂ ನಟ ನಾಯಕ ನಟ ನಾಗಭೂಷಣ್ ಸೇರಿದಂತೆ , ನಿರ್ಮಾಪಕ ಡಾಲಿ ಧನಂಜಯ್, ಪ್ರೇಮ್ ಮೊದಲಾದವರು ಮಾತನಾಡಿ ಚಿತ್ರಕ್ಕೆ ಮತ್ತು ಕಲಾವಿದರಿಗೆ ಶುಭ ಹಾರೈಸಿದರು.
ನವಶಕ್ತಿ ನವರಾತ್ರಿ: ಅನಾಥ ಕಂದನಿಗೆ ಜಗನ್ಮಾತೆಯೇ ತಾಯಿ, ದುಷ್ಟರ ಪಾಲಿಗೆ ಅವಳೇ ಚಂಡಿ - ಚಾಮುಂಡಿ!!
ನಟಿ ತಾರಾ "ನಟ ಧನಂಜಯ್ ಸೀದಾ ಸಾದ ವ್ಯಕ್ತಿ. ಟಗರು ಪಲ್ಯಾಗಾಗಿ ನಾನು ಪ್ರತಿ ದಿನ 300 ಮೆಟ್ಟಿಲು ಹತ್ತಿದ್ದೇನೆ. ರಂಗಾಯಣ ರಘು ಪಾತ್ರ ನನ್ನ ಪಾತ್ರಕ್ಕಿಂತ ಜಾಸ್ತಿ ಇದ್ರೆ ನನಗೆ ಕೋಪ ಬರುತ್ತೆ.." ಎಂದು ಹೇಳಿ ಪಕ್ಕದಲ್ಲೇ ಇದ್ದ ರಂಗಾಯಣ ರಘು ಕಾಲೆಳೆದರು.
ಗೃಹಪ್ರವೇಶ : ಹಾಳಾದ ಧಾರಾವಾಹಿಗಳು ನೆಮ್ಮದಿ ಇಲ್ಲ, ಇಂಥವೆಲ್ಲ ನೋಡಿ ಬಿಪಿ ಶುಗರ್ ಬರುತ್ತೆ..!
ಇನ್ನು ಈ ಬಗ್ಗೆ ಮಾತನಾಡಿರುವ ನಟ ನಾಗಭೂಷಣ್ " ಟಗರು ಪಲ್ಯಾ ಮೊದಲ ದೃಶ್ಯದಿಂದ ಕೊನೆ ವರೆಗೂ ನಗಿಸುತ್ತೆ. ನಾನು ಲೀಡ್ ರೋಲ್ ಮಾಡೋ ಪಾತ್ರ ಮಾಡೋಕೆ ಬಂದವನು. ಆದರೆ ನನಗೆ ಹೀರೋ ಆಗಿ ನಟಿಸೋ ಯೋಗ ಸಿಕ್ತು. ಈ ಸಿನಿಮಾಗೆ ನಾನು ನಾಯಕ, ನಾಯಕಿ ಅಮೃತಾ. ಆದ್ರೆ ನಮ್ಮನ್ನ ಸಿನಿಮಾ ಪೂರ್ತಿ ಎಳೆದುಕೊಂಡು ಹೋಗೋದು ತಾರಮ್ಮ ಮತ್ತು ರಂಗಾಯಣ ರಘು ಸರ್.." ಎಂದಿದ್ದಾರೆ.