ನವಶಕ್ತಿ ನವರಾತ್ರಿ: ಅನಾಥ ಕಂದನಿಗೆ ಜಗನ್ಮಾತೆಯೇ ತಾಯಿ, ದುಷ್ಟರ ಪಾಲಿಗೆ ಅವಳೇ ಚಂಡಿ - ಚಾಮುಂಡಿ!!

ಮುಗುಳ್ನಗುತ್ತಿರುವ ಮುಗ್ಧ ಮಗುವನ್ನು ರಕ್ಷಿಸಲು ತಾಯಿ ದುರ್ಗೆ ಚಂಡಿ-ಚಾಮುಂಡಿಯಾಗಿ ಅವತಾರ ಎತ್ತುತ್ತಾಳೆ. ಆ ದುಷ್ಟ ಶಕ್ತಿಯಿಂದ ಮಗುವನ್ನು ಕಾಪಾಡುತ್ತಾಳೆ. ಮುಂದೆ ಅದೇ ಮಗು ಸಮಾಜಕ್ಕೆ ಕಂಟಕವಾಗಿರುವ ಎಲ್ಲ ದುಷ್ಟ ಶಕ್ತಿಗಳನ್ನು ಸದೆ ಬಡಿಯಲಿದೆ' ಎಂದ ಸಂದೇಶ ಈ ಸಂಚಿಕೆಯಲ್ಲಿ ಇದೆಯಾ?

Navashakti Navarathri program telecasts at Colors Kannada on 19 Oct 2023 4 PM srb

ಕಲರ್ಸ್ ಕನ್ನಡದಲ್ಲಿ ಇಂದು ಸಂಜೆ 4ಕ್ಕೆ 'ನವಶಕ್ತಿ ನವರಾತ್ರಿ' ಕಾರ್ಯಕ್ರಮ ಪ್ರಸಾರವಾಗಲಿದೆ. ನವರಾತ್ರಿ ಸ್ಪೆಷಲ್ ಕಾರ್ಯಕ್ರಮ ಇದಾಗಿದ್ದು, ದೇವಿಯ ವೈಭವ, ಹಿರಿಮೆ-ಗರಿಮೆಗಳನ್ನು ಸಾರುವ ಈ ಕಾರ್ಯಕ್ರಮ ವೀಕ್ಷಕರಿಗೆ ಇಷ್ಟವಾಗಬಹುದು ಎನ್ನಲಾಗಿದೆ. ಈ ನವರಾತ್ರಿ ಸಮಯದಲ್ಲಿ, 9 ದಿನಗಳನ್ನು ದೇವಿಯ ಪೂಜೆಗಾಗಿಯೇ ಮೀಸಲಾಗಿ ಇಡಲಾಗಿದೆ. 9 ದಿನಗಳು ದೇವಿಯ 9 ಅವತಾರಗಳನ್ನು ಭಕ್ತಿಯಿಂದ ಪೂಜಿಸಿ ದೇವಿಯ ಕೃಪೆಗೆ ಪಾತ್ರರಾಗಲು ಸನಾತನಿಗಳು ಇಷ್ಟಪಡುತ್ತಾರೆ. 

ನವರಾತ್ರಿ ಹೆಸರೇ ಸೂಚಿಸುವಂತೆ 9 ರಾತ್ರಿಗಳು ದೇವಿಯ ಆರಾಧನೆಗೆ ಮೀಸಲಾಗಿದೆ. ದುರ್ಗೆ, ಚಂಡಿ, ಚಾಮುಂಡಿ, ಹೀಗೆ ಹಲವು ಹೆಸರುಗಳನ್ನು ದೇವಿಗೆ ಕರೆಯುವುದು ವಾಡಿಕೆ. ಆದರೆ, ನವರಾತ್ರಿಗಳಲ್ಲಿ ಕೂಷ್ಮಾಂಡ ದೇವಿ ಸೇರಿದಂತೆ ದುರ್ಗೆಯ 9 ಹೆಸರುಗಳಲ್ಲಿ ದೇವಿಯನ್ನು ಅಲಂಕರಿಸಿ ಆರಾಧಿಸುತ್ತದೆ ಭಕ್ತವೃಂದ. ಇದೀಗ, ನವರಾತ್ರಿ ಸ್ಪೆಷಲ್ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ಚಾನೆಲ್ 'ನವಶಕ್ತಿ ನವರಾತ್ರಿ' ಹೆಸರಿನ ಕಾರ್ಯಕ್ರಮದ ಮೂಲಕ ಆಚರಿಸಲು ಮುಂದಾಗಿದೆ. ಈ ಕಾರ್ಯಕ್ರಮದ ಮೂಲಕ ದುಷ್ಟರಿಗೆ ಒಳ್ಳೆಯದಾಗಲು ಸಾಧ್ಯವಿಲ್ಲ. ಸ್ವಲ್ಪ ದಿನಗಳು ಅಥವಾ ಕಾಲ ಅವರು ಮೈಮರೆತು ಮೆರಯಬಹುದು ಅಷ್ಟೇ ಎಂಬ ಸಂದೇಶವನ್ನು  ಈ ಕಾರ್ಯಕ್ರಮದ ಮೂಲಕ ಹೇಳಹೊರಟಿದೆ ಈ ಸಂಚಿಕೆ ಎನ್ನಬಹುದು.

400 ಸಿನಿಮಾದಲ್ಲಿ ನಟನೆ, ಒಂದೇ ಒಂದು ಮೂವಿ 100 ಕೋಟಿ ಕ್ಲಬ್ ಸೇರಿಲ್ಲ, ಆದ್ರೂ ಜನ ಸೂಪರ್​ಸ್ಟಾರ್ ಅಂತಾರೆ!

'ಅನಾಥ ಕಂದನಿಗೆ ಜಗನ್ಮಾತೆಯೇ ತಾಯಿ; ದುಷ್ಟರ ಪಾಲಿಗೆ ಅವಳೇ ಚಂಡಿ - ಚಾಮುಂಡಿ!' ಎಂದು ಪ್ರೊಮೋದಲ್ಲಿ ಹೇಳಲಾಗಿದ್ದು, ಟಿವಿ ವೀಕ್ಷಕರು ಕುತೂಹಲದಿಂದ ಈ ಸಂಚಿಕೆಗಾಗಿ ಕಾಯುವಂತಾಗಿದೆ. "ಈ ಕಂದನನ್ನು ನಿನ್ನ ಮಡಿಲಿಗೆ ಹಾಕುತ್ತಿದ್ದೇನೆ, ದಯವಿಟ್ಟು ಸ್ವೀಕರಿಸಿ ಕಾಪಾಡು ತಾಯೆ.. " ಎಂಬ ತಾಯಿಯೊಬ್ಬಳ ಮನವಿಯೊಂದಿಗೆ ಶುರುವಾಗುವ ಪ್ರೊಮೋದಲ್ಲಿ, ಮುಂದೆ ದುಷ್ಟಶಕ್ತಿ ಎನಿಸಿರುವ ಹೆಣ್ಣೊಂದು 'ನೀನು ಬದುಕಿದ್ದರೆ ನಾನು ಸಾಯಬೇಕಾಗುತ್ತದೆ' ಎಂದು ಮಗುವಿನ ಮೇಲೆ ತ್ರಿಶೂಲ ಪ್ರಯೋಗಕ್ಕೆ ಮುಂದಾಗುವ ದೃಶ್ಯವಿದೆ. 

UT 69: ಜೈಲಲ್ಲಿ ರಾಜ್​​ಕುಂದ್ರಾ- ಪೊಲೀಸ್ರು ನಗ್ನಗೊಳಿಸಿದ್ರು, ಕೈದಿಗಳು ಛೀಮಾರಿ ಹಾಕಿದ್ರು! ವಿಡಿಯೋ ರಿಲೀಸ್

ಮುಗುಳ್ನಗುತ್ತಿರುವ ಮುಗ್ಧ ಮಗುವನ್ನು ರಕ್ಷಿಸಲು ತಾಯಿ ದುರ್ಗೆ ಚಂಡಿ-ಚಾಮುಂಡಿಯಾಗಿ ಅವತಾರ ಎತ್ತುತ್ತಾಳೆ. ಆ ದುಷ್ಟ ಶಕ್ತಿಯಿಂದ ಮಗುವನ್ನು ಕಾಪಾಡುತ್ತಾಳೆ. ಮುಂದೆ ಅದೇ ಮಗು ಸಮಾಜಕ್ಕೆ ಕಂಟಕವಾಗಿರುವ ಎಲ್ಲ ದುಷ್ಟ ಶಕ್ತಿಗಳನ್ನು ಸದೆ ಬಡಿಯಲಿದೆ' ಎಂದ ಸಂದೇಶ ಈ ಸಂಚಿಕೆಯಲ್ಲಿ ಇದೆ ಎನ್ನಬಹುದು. ಒಟ್ಟಿನಲ್ಲಿ, 'ನವಶಕ್ತಿ ನವರಾತ್ರಿ' ಕಾರ್ಯಕ್ರಮದಲ್ಲಿ ನವರಾತ್ರಿ ಸ್ಲೋಗನ್ ಎನ್ನಬಹುದಾದ 'ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ' ಎಂಬುದನ್ನು ಈ ಕಾರ್ಯಕ್ರಮದ ಮೂಲಕ ನಿರೂಪಿಸಲಾಗುವುದು ಎನ್ನಬಹುದು. ಸಂಜೆ 4.00 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರ ಕಾಣಲಾಗಿದೆ. 

Latest Videos
Follow Us:
Download App:
  • android
  • ios