ಲಾಕ್‌ಡೌನ್‌ ಸಡಿಲಿಕೆ ನಂತರ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ದರ್ಶಕ್‌ ಹಾಗೂ ನಟಿ ಶಿಲ್ಪಾ ಸೋಷಿಯಲ್ ಮೀಡಿಯಾದಲ್ಲಿ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಾಗಿ ಹಂಚಿಕೊಂಡವರಲ್ಲ. ಆದರೆ ಗೋವಾ ಟ್ರಿಪ್‌ನಿಂದ ಹಿಂದಿರುಗಿದ ದರ್ಶಕ್‌ ತಮ್ಮ ಬೆಡ್‌ರೂಮ್‌ ನೋಡಿ ಶಾಕ್ ಆಗಿದ್ದಾರೆ. ಬ್ಯಾಚುಲರ್‌ ಲೈಫ್‌ ಈಗ ಬದಲಾಗಿದೆ ಎನ್ನುತ್ತಿದ್ದಾರೆ. 

ಈ ದಿನ ನನ್ನ ಪಾಲಿಗೆ ಅವಿಸ್ಮರಣೀಯ, ದೇವರ ಬಳಿ ಇನ್ನೇನೂ ಕೇಳಲು ಉಳಿದಿಲ್ಲ: ಭಾವುಕರಾದ ತಾರಾ ಅನುರಾಧಾ 

ದರ್ಶಕ್ ಪೋಸ್ಟ್: 
'ನಾನು ಮಾಡುವ ಕೆಲಸಕ್ಕೆ ಮೊದಲು ಧನ್ಯವಾದಗಳು. ಈ ವರ್ಷ ನನ್ನ ಹೆಂಡತಿ ಹುಟ್ಟುಹಬ್ಬ ಮಿಸ್ ಮಾಡಿಕೊಂಡರೆ, ವ್ಯಾಲೆಂಟೈನ್ಸ್ ಡೇ ಮಿಸ್ ಆಯ್ತು ಅಷ್ಟೇ ಅಲ್ಲ ಈ ವರ್ಷ ನನ್ನ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿಲ್ಲ. ಏರ್ಪೋರ್ಟ್‌ನಿಂದ ಹೊರ ಬರುತ್ತಿದ್ದಂತೆ ನಾನು ಮೊದಲು ಯೋಚನೆ ಮಾಡಿದ್ದು, ಈ  ಸಲವಾದರೂ ನನ್ನ ಹೆಂಡತಿಗೆ ಸಮಯ ನೀಡಬೇಕೆಂದು. ಆದರೆ ನಾನು ಮನೆಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ನಡೆದದ್ದೇ ಬೇರೆ,' ಎಂದಿದ್ದಾರೆ ದರ್ಶಕ್.

ನೀವು ಕೊಟ್ಟ ನಗು ಧಿರಿಸಿರುವೆ; ವ್ಯಾಲೆಂಟೈನ್ಸ್ ಡೇ ಆಚರಿಸಿದ ರಾಕಿಂಗ್ ದಂಪತಿ! 

'ರೂಮ್‌ ಎಂಟರ್‌ ಆಗುತ್ತಿದ್ದಂತೆ ಅಬ್ಬಾ!! ಕನಸು ನನಸಾಗಿತ್ತು. ನನ್ನ ಹೆಂಡತಿ ಕೋಪ ಮಾಡಿಕೊಂಡಿರಲಿಲ್ಲ, ಪುಟ್ಟ ಹುಡುಗಿಯಂತೆ ಮುಖದ ತುಂಬಾ ಪ್ಲಾಸ್ಟರ್ ಹಾಕಿಕೊಂಡು ಎದುರು ನಿಂತಳು. ನಾನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಾಗದ ಬೆಸ್ಟ್‌ ಗಿಫ್ಟ್‌ ಕೊಟ್ಟಿದ್ದಾಳೆ. ನನ್ನ ರೂಮ್ 'dirty bachelor lives here' ರೀತಿ ಇರಲಿಲ್ಲ. ಸ್ವರ್ಗದ ರೀತಿ ಕಾಣಿಸುತ್ತಿತ್ತು. ಗೋವಾದಲ್ಲಿದ್ದ ನಂತರ ಇಲ್ಲಿಗೆ ಬಂದು ನಿಜಕ್ಕೂ ಸ್ವೀಟ್‌ ಹೋಮ್‌ ಅಂದ್ರೆ ಇದಪ್ಪ ಎನ್ನುವ ರೀತಿ ಇತ್ತು. ನಿನ್ನ ಶ್ರಮಕ್ಕೆ  ನಾನು ಏನೂ ಹೇಳಲಾರೆ. ಅದೃಷ್ಟ ಮಾಡಿದ್ದೆ ನಿನ್ನನ್ನು ಪಡೆಯಲು. ಲವ್ ಯು.  ನೀನೇ ಸದಾ ಹೇಳುವ ಹಾಗೆ in the end it's Him & I' ಎಂದು ದರ್ಶಕ್ ಬರೆದುಕೊಂಡಿದ್ದಾರೆ.

ಚಂದನ್-ನಿವೇದಿತಾ ಗೌಡ ವ್ಯಾಲೆಂಟೈನ್ಸ್ ಡೇಗೆ ಕೇಕ್‌ ಮೇಲೆ ಬರೆಸಿದ ಹೆಸರೇನು ಗೊತ್ತಾ? 

ಹೌದು! ಪತಿ ಮನೆಯಲ್ಲಿಲ್ಲದ ಸಮಯ ನೋಡಿಕೊಂಡು ಶಿಲ್ಪಾ ಇಡೀ ರೂಮ್‌ ಪೇಂಟ್ ಮಾಡಿದ್ದಾರೆ. ರೂಮಿನ ಮೂರು ಗೋಡೆಗೂ ಮೂರು ರೀತಿಯಲ್ಲಿ ಬಣ್ಣ ಹಾಕಲಾಗಿದೆ. ಶಿಲ್ಪಾ ಮಾಡಿರುವ ಕೆಲಸಕ್ಕೆ ನೆಟ್ಟಿಗರು 'ನಮಗೂ ಇಂಥ ಹೆಂಡತಿ ಬೇಕು. ದುಬಾರಿ ಖರ್ಚು ಮಾಡಿಸೋರಿಗಿಂತ, ಇಂಥ ಸಣ್ಣ ಪುಟ್ಟ ವಿಚಾರದ ಬಗ್ಗೆ ಗಮನ ಕೊಡುವೆ ಹೆಣ್ಣೇ ಬೆಸ್ಟ್‌,' ಎಂದು ಕಾಮೆಂಟ್ ಮಾಡಿದ್ದಾರೆ.