ಬಿಗ್ ಬಾಸ್‌ ರಿಯಾಲಿಟಿ ಶೋನಿಂದ ಹೊರ ಬಂದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡುತ್ತಿರುವ ಕನ್ನಡ rapper ಚಂದನ್ ಶೆಟ್ಟಿ, ನಿವೇದಿತಾ ಗೌಡ  ಸಾರ್ವಜನಿಕವಾಗಿ ಪ್ರಪೋಸ್‌ ಮಾಡಿ, ಹಿರಿಯರ ಅಪ್ಪಣೆ ಪಡೆದು ಅದ್ಧೂರಿಯಾಗಿ ವೈವಾಹಿಕ ಜೀವಕ್ಕೆ ಕಾಲಿಟ್ಟರು. ಈ ಜೋಡಿ ಸರಳವಾಗಿ ವ್ಯಾಲೆಂಟೈನ್ಸ್‌ ಡೇ ಆಚರಿಸಿದ್ದಾರೆ.

ಪ್ರೇಮಿಗಳ ದಿನದಂದ ಇಬ್ಬರೂ ಮನೆಯಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ. ರೆಡ್ ಡ್ರೆಸ್‌ ಧರಿಸಿ ಕಂಗೊಳ್ಳಿಸುತ್ತಿರುವ ನಿವೇದಿತಾ ಗೌಡ ರೆಡ್‌ ಕಲರ್ ಕೇಕ್‌ ಹಿಡಿದು, ಚಂದನ್‌ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಫೋಟೋ ಹಂಚಿಕೊಂಡ ಚಂದನ್ ನೆಟ್ಟಿಗರಿಗೆ ವ್ಯಾಲೆಂಟೈನ್ಸ್‌ ಡೇ ಶುಭ ಹಾರೈಸಿದ್ದಾರೆ.

ನಿವೇದಿತಾ ಗೌಡ ಮೇಲೆ ಹಲ್ಲೆ; ಮಾಲೀಕರಿಗೆ ಸಹಾಯ ಮಾಡಿದ ನಾಯಿ! 

ಕೇಕ್‌ ಮೇಲೆ ಏನಿದೆ?
ಹಾರ್ಟ್‌ ಶೇಪ್‌ನಲ್ಲಿರುವ ಈ ಕೇಕ್‌ ಮೇಲೆ 'To My Love Chanvi' ಎಂದು ಬರೆಯಲಾಗಿದೆ. ಚಂದನ್ ಮತ್ತು ನಿವೇದಿತಾ ಹೆಸರು ಸೇರಿಸಿದರೆ ಈ ಹೆಸರು ಬರುತ್ತದೆ. ಹೆಸರು ನೋಡಿ ಸಂಭ್ರಮಿಸಿದ್ದಾರೆ ನೆಟ್ಟಿಗರು, ಮತ್ತೊಂದು ವಿಚಾರವನ್ನು ಗೆಸ್ ಮಾಡಿದ್ದಾರೆ. ನಿಮ್ಮ ಮಗುವಿಗೆ ಇದೇ ಹೆಸರಿಟ್ಟರೆ ಚೆನ್ನಾಗಿರುತ್ತದೆ ಎಂಬ ಪುಕ್ಕಟೆ ಸಲಹೆಯನ್ನೂ ನೀಡಿದ್ದಾರೆ.  ವ್ಯಾಲೆಂಟೈನ್ ಜೊತೆ ಚಂದನ್ ಮಾತ್ರ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆದರೆ ನಿವೇದಿತಾ ಗೌಡ ಮಾತ್ರ ಗಂಡನ ಆಲ್ಬಂ 'ಪಾರ್ಟಿ ಫ್ರೀಕ್' ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯಾಕ್ಹಿಂಗೆ ಎಂದು ನೆಟ್ಟಿಗರು ಗೇಲಿ ಮಾಡಿದ್ದಾರೆ.