ನಟಿ ತಾರಾ ಅನುರಾಧ ಪ್ರೇಮಿಗಳ ದಿನವನ್ನು ಕುಟುಂಬದ ಜೊತೆ ಕೂರ್ಗ್‌ನಲ್ಲಿ ಕಳೆದಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಪೆಷಲ್ ವಿಡಿಯೋ ಶೇರ್ ಮಾಡುವ ಮೂಲಕ ಭಾವುಕರಾಗಿದ್ದಾರೆ.

ಅರಣ್ಯ ಅಭಿವೃದ್ಧಿ ಅಧ್ಯಕ್ಷೆಯಾಗಿ ನಟಿ ತಾರಾ ಅನುರಾಧ! 

ತಾರಾ ಪೋಸ್ಟ್:
'ಈ ದಿನ ನನ್ನ ಪಾಲಿಗೆ ಅವಿಸ್ಮರಣೀಯ. ಇದೇ ದಿನ 2005ರಲ್ಲಿ ನಾನು ವೇಣು ಎಂಗೇಜ್‌ ಆದೆವು. 15 ವರ್ಷಗಳ togetherness. ವೇಣು ಅವರನ್ನು ಗಂಡನಾಗಿ, ಶ್ರೀಕೃಷ್ಣನನ್ನು ಮಗನಾಗಿ ಪಡೆಯಲು ಅದೃಷ್ಟ ಮಾಡಿದ್ದೆ. ದೇವರ ಬಳಿ ಇನ್ನೇನೂ ಕೇಳಲು ಉಳಿದಿಲ್ಲ,' ಎಂದು ತಾರಾ ಬರೆದುಕೊಂಡಿದ್ದಾರೆ. ತಮಗೆ ತಿಳಿಯದಂತೆ ಸರ್ಪ್ರೈಸ್‌ ನೀಡಿದ ಕೂರ್ಗ್‌ನ ಖಾಸಗಿ ರೆಸಾರ್ಟ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

2005ರಲ್ಲಿ ತಾರಾ ಹಾಗೂ ಛಾಯಾಗ್ರಾಹಕ ವೇಣು ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2013ರಲ್ಲಿ ಕುಟುಂಬಕ್ಕೆ ಶ್ರೀಕೃಷ್ಣನ ಅಗಮನವಾಯಿತು. 1984ರಿಂದ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುತ್ತಿರುವ ತಾರಾ ಕರ್ನಾಟಕ ರಾಜ್ಯ ಆಯೋಗ ಮಕ್ಕಳ ಹಕ್ಕುಗಳ ರಕ್ಷಣಾ ಅಧ್ಯಕ್ಷೆ, ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. 

ರಮ್ಯಾ, ರಾಧಿಕಾ ಜೊತೆ ತಾರಾ; ಮೂವರು ನಟಿಯರನ್ನು ಒಟ್ಟಾಗಿ ಕಂಡ ನೆಟ್ಟಿಗರು ಶಾಕ್! 

ಪೋಷಕರ ಪಾತ್ರದಲ್ಲಿ ಮನೋರಂಜಿಸುತ್ತಿರುವ ತಾರಾ ಸದ್ಯಕ್ಕೆ 'ಮುಗಿಲ್ಟೇಟೆ' ಹಾಗೂ 'ಸಾವಿತ್ರಿ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.