ಮೋಹಕ ತಾರೆ ರಮ್ಯಾಗೆ ಪ್ರಾಣ ಕಂಟಕ ಎದುರಾಗಿತ್ತಾ? ಏನದು ಘಟನೆ?
ಒಂದು ಟೈಮಲ್ಲಿ ರಾಜಕಾರಣದಲ್ಲಿ ಮುಳುಗಿದ್ದ ರಮ್ಯಾ ಇದೀಗ ಚಿತ್ರರಂಗಕ್ಕೆ ಮರಳಿದ್ದಾರೆ. ಆದರೆ ಅವರಿಗೆ ಪ್ರಾಣ ಕಂಟಕ ಎದುರಾಗಿತ್ತಂತೆ. ಆ ಘಟನೆ ಈಗಲೂ ರಮ್ಯಾ ಅವರಿಗೆ ನಡುಕ ಹುಟ್ಟಿಸುತ್ತಂತೆ.
ಸ್ಯಾಂಡಲ್‌ವುಡ್ ನಟಿ ರಮ್ಯಾ ಅಂದರೆ ಇವತ್ತಿಗೂ ಹೆಚ್ಚಿನವರಿಗೆ ಫೇವರಿಟ್. ರಿಷಬ್ ಶೆಟ್ಟಿ ರಮ್ಯಾ ನನ್ನ ಕಾಲೇಜ್ ಡೇಸ್ ಕ್ರಶ್ ಅಂದಿದ್ದರು. ರಕ್ಷಿತ್ ಶೆಟ್ಟಿ ಅವರಿಗೂ ರಮ್ಯಾ ಅಂದರೆ ಭಾಳ ಇಷ್ಟ. ಇತ್ತೀಚೆಗೆ ಹೊಯ್ಸಳ ಸಿನಿಮಾ ಪ್ರಮೋಶನ್‌ಗೆ ಟಿವಿ ಚಾನಲ್ ರಿಯಾಲಿಟಿ ಶೋಗೆ ನಟ ಧನಂಜಯ ಹೋಗಿದ್ರು. ನಿಮ್ಮ ಫೇವರಿಟ್ ನಟಿ ಯಾರು ಅನ್ನೋ ಪ್ರಶ್ನೆ ಅವರಿಗೆ ಎದುರಾಗಿತ್ತು. ಆಗ ಅವರು ಸ್ಲೇಟಲ್ಲಿ ಬರೆದ ಹೆಸರು ರಮ್ಯಾ. ಇದೀಗ ರಮ್ಯಾ ಜೀ ಕನ್ನಡದಲ್ಲಿ ರಮೇಶ್ ಅರವಿಂದ್ ನಡೆಸಿಕೊಡೋ 'ವೀಕೆಂಡ್ ವಿಥ್ ರಮೇಶ್ ಸೀಸನ್ 5' ಶೋನಲ್ಲಿ ಮೊದಲ ಸಾಧಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಮೊದಲ ಎಪಿಸೋಡ್ ಆಗಿ ರಮ್ಯಾ ಅವರ ಲೈಫ್ ಜರ್ನಿ ಪ್ರಸಾರ ಆಗಲಿದೆ. ಈಗಾಗಲೇ ರಮ್ಯಾ ಕುರಿತ ಪ್ರೋಮೋ ರಿಲೀಸ್ ಆಗಿದೆ. ಬಹಳ ಇಂಟರೆಸ್ಟಿಂಗ್ ವಿಚಾರ ಅಂದರೆ ರಮ್ಯಾ ಅವರಿಗೆ ಪ್ರಾಣ ಕಂಟಕ ಎದುರಾದದ್ದು. ಅದು ಎಲ್ಲಿ? ಅವತ್ತು ಏನಾಗಿತ್ತು ಅನ್ನೋ ಡೀಟೇಲನ್ನೂ ರಮ್ಯಾ ಈ ಶೋನಲ್ಲಿ ಹೇಳಿಕೊಂಡಿದ್ದರು.
ಅಂದಹಾಗೆ ಈ ಘಟನೆ ನಡೆದದ್ದು ಅಮೃತಧಾರೆ ಸಿನಿಮಾ ಶೂಟಿಂಗ್ ಟೈಮಲ್ಲಿ. ಅಮೃತಧಾರೆ ಒಂದು ಕಾಲದ ಹಿಟ್ ಸಿನಿಮಾಗಳಲ್ಲೊಂದು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಸಿನಿಮಾದಲ್ಲಿ ರಮ್ಯಾ ಜೊತೆಗೆ ಧ್ಯಾನ್ ಎಂಬ ಸಾರ್ತ್ ಇಂಡಿಯನ್ ಹುಡುಗ ನಟಿಸಿದ್ದರು. ಈ ಸಿನಿಮಾ ಮಾತ್ರ ಅಲ್ಲ, ಈ ಸಿನಿಮಾದ ಹಾಡುಗಳೂ ಸೂಪರ್ ಹಿಟ್ ಆಗಿದ್ದವು. ಸದಾ ಜಗಳ ಆಡ್ತ ಇರೋ ಟಾಮ್ ಆಂಡ್ ಜೆರ್ರಿ ಥರದ ಕ್ಯೂಟ್ ಕಪಲ್ ರಮ್ಯಾ ಮತ್ತು ಧ್ಯಾನ್. ಮದುವೆ ಆಗಿರೋ ಇವರಿಗೆ ಮನೆ ಕಟ್ಟೋ ವಿಚಾರದಲ್ಲೂ ಜಗಳ. ಮನೆ ಬೇಡ, ಜಗತ್ತೇ ನಮ್ಮ ಮನೆ ಅಂತ ರೊಮ್ಯಾಂಟಿಕ್ ಆಗಿ ಮಾತಾಡೋ ರಮ್ಯಾ, ಸಂಸಾರ ಅಂತಾದ್ಮೇಲೆ ಮನೆ ಎಲ್ಲ ಇರಬೇಕು ಅನ್ನೋ ಪ್ರಾಕ್ಟಿಕಲ್ ಹುಡುಗ ಧ್ಯಾನ್. ಆದರೆ ಇವರಿಬ್ಬರ ಬದುಕಲ್ಲಿ ನಡೆಯೋ ಒಂದು ಘಟನೆ ಧ್ಯಾನ್ ಮನಸ್ಥಿತಿಯನ್ನೇ ಬದಲಿಸುತ್ತೆ. ತನ್ನ ಪ್ರೀತಿಯ ಹುಡುಗಿ ಇಷ್ಟದಂತೆ ಅವಳನ್ನು ಜಗತ್ತು ಸುತ್ತಿಸಲು ಹೊರಡೋ ಹೀರೋ ಇದನ್ನೆಲ್ಲ ಯಾಕೆ ಮಾಡ್ತಾನೆ, ಮುಂದೇನಾಗುತ್ತೆ ಅನ್ನೋದು ಸಿನಿಮಾದ ಕಥೆ.
ಅಯ್ಯಯ್ಯೋ, ವಸುಗೆ ಕೈ ಕೊಟ್ಟು ಕಾಂತಾರದ ಲೀಲಾಗೆ ಪ್ರೊಪೋಸ್ ಮಾಡಿದ್ರಲ್ಲಾ ರಿಷಿ ಸಾರ್!
ಅಂದ ಹಾಗೆ ರಮ್ಯಾ ಪ್ರಾಣ ಹೋಗೋ ಥರದ ಘಟನೆ ನಡೆದದ್ದು ಇದೇ ಸಿನಿಮಾ ಶೂಟಿಂಗ್‌ನಲ್ಲಿ. ಇದನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಪ್ರಸ್ತಾಪ ಮಾಡಿದರು. ಆಗ ಲಡಾಖ್‌ನಲ್ಲಿ ಶೂಟಿಂಗ್. ಹಿಮಾಲಯ ಪರ್ವತ(Moutain) ಶ್ರೇಣಿಗಳ ನಡುವೆ ಇರೋ ಲಡಾಖ್‌ನ ಎತ್ತರದ ಜಾಗಗಳಲ್ಲಿ ಆಕ್ಸಿಜನ್ ಕೊರತೆ ಬಹಳ ಇರುತ್ತೆ. ಇತ್ತೀಚೆಗೆ ಕನ್ನಡದ ಒಬ್ಬ ನಟ ಲಡಾಕ್ ನಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಇಂಥದ್ದೇ ಸಂಕಷ್ಟಕ್ಕೆ ರಮ್ಯಾ ಸಿಲುಕಿದ್ದರಂತೆ. ಲಡಾಖ್ ಶೂಟಿಂಗ್ ವೇಳೆ ರಮ್ಯಾಗೆ ಆಕ್ಸಿಜನ್(Oxigen) ಕೊರತೆಯಿಂದ ಅಸ್ವಸ್ಥತೆ ಉಂಟಾಗಿತ್ತು. ಅದೃಷ್ಟವಶಾತ್ ಕೂಡಲೇ ಆರ್ಮಿಯವರು ಇವರ ಸಹಾಯಕ್ಕೆ ಧಾವಿಸಿ ಬಂದರು. ಕೂಡಲೇ ಆಕ್ಸಿಜನ್ ಕೊಟ್ಟು ರಮ್ಯಾ ಅವರನ್ನು ಉಳಿಸಿಕೊಂಡರಂತೆ.
ಈ ಕಾರ್ಯಕ್ರಮದಲ್ಲಿ ಎಷ್ಟೋ ಜನರಿಗೆ ಗೊತ್ತಿಲ್ಲದ ವಿಚಾರವೊಂದು ಹೊರಬಂತು. 'ಅಮೃತಧಾರೆ' ಸಿನಿಮಾದ ಕತೆ ರಮೇಶ್ ಅರವಿಂದ್ ಅವರದೇ ಆಗಿತ್ತು ಅನ್ನೋದು. ಈ ವಿಚಾರ ಸ್ವತಃ ರಮ್ಯಾ ಅವರಿಗೇ ಗೊತ್ತಿರಲಿಲ್ಲ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ಸ್ಯಾಂಡಲ್ ವುಡ್(Sandalwood) ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಚಿತ್ರ ತೆಲುಗು ಭಾಷೆಯಲ್ಲಿ ಕೂಡ ಡಬ್(Dubbing) ಆಗಿತ್ತು.
ಸ್ನೇಹಿತೆಯ ಪತಿಗೇ ಹೃದಯ ಕೊಟ್ಟ ನಟಿ, ಸಚಿವೆ ಸ್ಮೃತಿ ಇರಾನಿ