ಅಯ್ಯಯ್ಯೋ, ವಸುಗೆ ಕೈ ಕೊಟ್ಟು ಕಾಂತಾರದ ಲೀಲಾಗೆ ಪ್ರೊಪೋಸ್ ಮಾಡಿದ್ರಲ್ಲಾ ರಿಷಿ ಸಾರ್!
ಸೋಷಿಯಲ್ ಮೀಡಿಯಾದಲ್ಲೀಗ 'ಹೊಂಗನಸು' ಸೀರಿಯಲ್ ಹೀರೋ ಮುಕೇಶ್ ವೀಡಿಯೋ ಸಖತ್ ವೈರಲ್ ಆಗ್ತಿದೆ. ಸೀರಿಯಲ್‌ನಲ್ಲಿ ರಿಷಿ ಸಾರ್ ಆಗಿ ವಸುಧಾ ಜೊತೆ ರೊಮ್ಯಾಂಟಿಕ್ ಆಗಿರೋ ಇವ್ರು ಸ್ಟಾರ್ ಸುವರ್ಣ ಯುಗಾದಿ ಕಾರ್ಯಕ್ರಮದಲ್ಲಿ ಕಾಂತಾರದ ಲೀಲಾಗೆ ಪ್ರೊಪೋಸ್ ಮಾಡೋದಾ?
ಸ್ಟಾರ್ ಸುವರ್ಣದಲ್ಲಿ ಯುಗಾದಿ ಕಾರ್ಯಕ್ರಮಗಳು ನಿನ್ನ ಭರ್ಜರಿಯಾಗಿ ನಡೆದವು. ಇದರಲ್ಲಿ ಬಹಳ ಗಮನ ಸೆಳೆದದ್ದು ಮುಖೇಶ್ ಪರ್ಫಾಮೆನ್ಸ್. ತೆಲುಗಿನ ಸ್ಟಾರ್ ಮಾ ಚಾನಲ್‌ನಲ್ಲಿ ಪ್ರಸಾರವಾಗ್ತಿರೋ 'ಗುಪ್ಪೆಡಂಥಾ ಮನಸು' ಟಿಆರ್‌ಪಿಯಲ್ಲಿ ಟಾಪ್ ೩ ಲಿಸ್ಟ್‌ನಿಂದ ಹಿಂದೆ ಸರಿದದ್ದೇ ಇಲ್ಲ. ಈ ಸೀರಿಯಲ್ ಕನ್ನಡಕ್ಕೆ 'ಹೊಂಗನಸು' ಸೀರಿಯಲ್ ಆಗಿ ಡಬ್ ಆಇದೆ. ಇದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದೆ. ಡಬ್ಬಿಂಗ್ ಸೀರಿಯಲ್ ಆಗಿದ್ದರೂ ಕೂಡ ಇದಕ್ಕೆ ಸಾಕಷ್ಟು ಜನಪ್ರಿಯತೆ ಇದೆ. ಈ ಸೀರಿಯಲ್‌ನಲ್ಲಿ ಬಡತನ ಹಿನ್ನೆಲೆಯಿಂದ ಬಂದ ವಸುಧಾರ ಎಂಬ ಹುಡುಗಿ ಹಾಗೂ ತನ್ನ ತಾತ ಕಟ್ಟಿದ ಡಿಬಿಎಸ್ ಟಿ ಅನ್ನೋ ಕಾಲೇಜಿನ ಎಂಡಿ, ಮ್ಯಾಥ್ಸ್ ಲೆಕ್ಚರರ್ ರಿಷಿ ನಡುವಿನ ಸಿಟ್ಟು, ಜಗಳ, ಕಿತ್ತಾಟ, ಪ್ರೇಮದ ಕಥೆ ಇದೆ. ವಸುಧಾರ ಎಂಬ ಪ್ರತಿಭಾವಂತ ಹುಡುಗಿ ಏನೇ ಕಷ್ಟ ಬಂದರೂ ಎದುರಿಸಿ ಜೀವನದಲ್ಲಿ ಏಳಿಗೆ ಸಾಧಿಸೋ ಕಥೆಯೂ ಹೌದು. ಈ ರಿಷಿ ಪಾತ್ರವನ್ನು ಸಖತ್ತಾಗಿ ನಟಿಸ್ತಿರೋದು ಮೈಸೂರು ಹುಡುಗ ಮುಖೇಶ್. ವಸುಧಾರ ಪಾತ್ರದಲ್ಲಿ ಮಿಂಚುತ್ತಿರೋ ಹುಡುಗಿ ಕನ್ನಡತಿ ರಕ್ಷಾ. ಇವರಿಬ್ಬರ ಕಾಂಬಿನೇಶನ್, ಕೆಮೆಸ್ಟ್ರಿ ಸಖತ್ ಕ್ಲಿಕ್ ಆಗಿರೋದು ಮತ್ತೊಂದು ಪ್ಲಸ್ ಪಾಯಿಂಟ್.
ಸ್ಕ್ರೀನ್ ಮೇಲೆ ರಿಷಿ ಮತ್ತು ವಸು ಪಾತ್ರದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿರೋ ಮುಖೇಶ್ ಮತ್ತು ರಕ್ಷಾ ರಿಯಲ್ ಲೈಫಲ್ಲೂ ಒಂದಾಗ್ಬೇಕು ಅಂತ ಅವರ ನೂರಾರು ಅಭಿಮಾನಿಗಳು ನಿತ್ಯವೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ. ಅವರಿಬ್ಬರೂ ಜೊತೆಯಾಗಿರೋ ಫೋಟೋ ಕಾಣಿಸಿಕೊಂಡರೆ ಕ್ಷಣದಲ್ಲಿ ವೈರಲ್ ಆಗುತ್ತೆ. ಈ ನಡುವೆ ನಮ್ ರಿಷಿ ಸರ್ ತನ್ನ ಹುಡುಗಿ ವಸುನ ಬಿಟ್ಟು ಕಾಂತಾರದ ಬೆಡಗಿ ಲೀಲಾಗೆ ಐ ಲವ್ ಯೂ ಹೇಳಿರೋ ವೀಡಿಯೋ ಸಖತ್ ವೈರಲ್ ಆಗಿದೆ.
ಸ್ಟಾರ್ ಸುವರ್ಣದ ಯುಗಾದಿ ವಿಶೇಷ ಕಾರ್ಯಕ್ರಮದಲ್ಲಿ ಈ ಬಾರಿ ಸ್ಯಾಂಡಲ್‌ವುಡ್‌ನ ಅನೇಕ ನಟ, ನಟಿಯರು ಭಾಗವಹಿಸಿದ್ದರು. ಕಿರುತೆರೆಯ ಅನೇಕ ಮಂದಿಯೂ ಜೊತೆಗಿದ್ದರು. ನಿರೂಪಕ ಅಕುಲ್ ಬಾಲಾಜಿ ತನ್ನ ಎಂದಿನ ಕಾಮಿಡಿ ಸ್ಟೈಲಲ್ಲಿ ಇಡೀ ಕಾರ್ಯಕ್ರಮ ನಡೆಸಿಕೊಟ್ಟರು. ಬಹಳ ಅಪರೂಪಕ್ಕೆ ಡಬ್ಬಿಂಗ್ ಸೀರಿಯಲ್‌ನಿಂದ ರಿಷಿ ಸರ್ ಬಂದಿದ್ದು ಅವರ ಕನ್ನಡದ ಅಭಿಮಾನಿಗಳಿಗೆ ಸಖತ್ ಖುಷಿ ಆಯ್ತು. ಇದರಲ್ಲಿ ಅನೇಕ ಟಾಸ್ಕ್‌ಗಳಿದ್ದವು. ಆದರೆ ಬಹಳ ಗಮನ ಸೆಳೆದದ್ದು ಮುಕೇಶ್ ಸಪ್ತಮಿ ಗೌಡ ಅವರಿಗೆ ಪ್ರೊಪೋಸ್ ಮಾಡಿದ ರೀತಿ.
ಟಿವಿ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಗೆ ಅದ್ದೂರಿ ತೆರೆ; ಗೆದ್ದು ಬೀಗಿದ ಹರ್ಷ ಸಿ.ಎಂ ಗೌಡ ತಂಡ
ಸಪ್ತಮಿ ಅವರ ಎದುರು ಮುಕೇಶ್ ನಿಂತು, 'ನಾನು ಮುಕೇಶ್ ಅಂದಾಗ ಸಿನಿಮಾದ ಮೊದಲಲ್ಲಿ ಬರೋ ಮುಕೇಶ್ ನೆನಪಾಗಿ ಎಲ್ಲರೂ ಬಿದ್ದೂ ಬಿದ್ದೂ ನಕ್ಕರು. ಆ ಬಳಿಕ ಮುಕೇಶ್, 'ಸಿನಿಮಾ ಬರೋಕೆ ಮುಂಚೆ ಬರೋ ಆ ಮುಕೇಶ್ ಅಲ್ಲ. ಸಿನಿಮಾದಲ್ಲಿ ನಿಮ್ಮ ಜೊತೆ ಬರೋ ಮುಕೇಶ್ ಆಗ್ತಿನಿ. ಈ ಕೈಲಾಸದ ಶಿವಂಗೆ ನೀವು ಲೀಲಾ ಆಗ್ತೀರಾ?' ಅಂತ ಸಖತ್ ಸ್ಮಾರ್ಟ್(Smart) ಆಗಿ ಕೇಳಿದಾಗ, ಲೀಲಾ ಐ ಮೀನ್ ಸಪ್ತಮಿ ಗೌಡ. 'ನಸು ನಕ್ಕು ಆಗ್ತೀನಿ..' ಅಂದುಬಿಟ್ಟರು. ಅಲ್ಲಿಗೆ ಮುಕೇಶ್ ಪ್ರೊಪೋಸ್ ಮಾಡಿದ್ದು ಇಲ್ಲೂ ಸಕ್ಸಸ್.
ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೆಲವರು ರಿಷಿ ಸರ್ ನೀವು ಹೀಗೆಲ್ಲ ಮಾಡಬಹುದಾ? ವಸು ಬಿಟ್ಟು ಲೀಲಾಗೆ ಐ ಲವ್ ಯೂ(I Love you) ಹೇಳಬಹುದಾ ಅಂತೆಲ್ಲ ಕಾಲೆಳೀತಾ ಇದ್ದಾರೆ.
ಲೆಕ್ಕಚಾರ ಮಾಡ್ಕೊಂಡು ಜೀವನ ಮಾಡೋಕೆ ಅಗಲ್ಲ, ಬಿಗ್ ಬಾಸ್‌ಗೆ ಮತ್ತೆ ಕಾಲಿಡಲ್ಲ: ಮಯೂರ್ ಪಟೇಲ್