Asianet Suvarna News Asianet Suvarna News

ದಾಂಪತ್ಯ ಬದುಕಿನ ಗುಟ್ಟು ಹೇಳಿಕೊಂಡ ಸ್ಮೃತಿ ಇರಾನಿ!

ಯಶಸ್ವಿ ನಟಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ನಟಿ ಸ್ಮೃತಿ ಇರಾನಿಯರ ಕುತೂಹಲದ ಲವ್​ ಸ್ಟೋರಿ ಅವರ ಜನುಮ ದಿನವಾದ ಇಂದು ಬಹಿರಂಗಗೊಂಡಿದೆ. ಏನದು?
 

Actress Minister Smriti Irani who gave her heart to her friends husband revealed on her birthday
Author
First Published Mar 23, 2023, 6:05 PM IST

 ನಟಿ ಕಮ್ ರಾಜಕಾರಣಿ ಸ್ಮೃತಿ ಇರಾನಿ (Smriti Irani) ಅವರ ಹುಟ್ಟಿದ ಹಬ್ಬ ಇಂದು. ಮಾರ್ಚ್​ 23ರ 1976ರಂದು ಹುಟ್ಟಿರೋ ಸ್ಮೃತಿ ಇರಾನಿಯವರು ಇಂದು 47 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.  ನಟಿಯಾಗಿ ಮನೆ ಮಾತಾಗಿದ್ದ ಸ್ಮೃತಿ ಅವರು ಇಂದು ಇಡೀ ದೇಶವೇ ಹೆಮ್ಮೆ ಪಡುವಂಥ ರಾಜಕಾರಣಿಯಾಗಿ ಬೆಳೆದಿದ್ದಾರೆ. ಅವರ ನೇರಾನೇರ ಮಾತುಗಳು, ಹಲವು ವಿಷಯಗಳಲ್ಲಿ ಅವರ ಪ್ರೌಢಿಮೆಗೆ ಜನರು ಬೆಕ್ಕಬೆರಗಾಗುವುದೂ ಇದೆ. ದೆಹಲಿ ಮೂಲದ ಮಧ್ಯಮ ವರ್ಗದ ಪಂಜಾಬಿ ಕುಟುಂಬದಲ್ಲಿ ಜನಿಸಿದ ಸ್ಮೃತಿ ಅವರು  ಭಾರತೀಯ ರಾಜಕೀಯ ರಂಗದ  ಪ್ರಗತಿಪರ  ರಾಜಕಾರಣಿಗಳಲ್ಲೊಬ್ಬರಾಗಿ  ಗುರುತಿಸಿಕೊಂಡಿದ್ದಾರೆ. ಕ್ಯೂಂ ಕಿ ಸಾಸ್​ ಭೀ ಕಭೀ ಬಹೂ ಥಿ ಧಾರಾವಾಹಿಯಲ್ಲಿ ತುಳಸಿಯಾಗಿ ಅಭಿನಯಿಸಿ ಹಲವು ವರ್ಷ ಮನೆಮನೆಗಳಲ್ಲಿನ ಮನಗಳನ್ನು ಗೆದ್ದಿದ್ದ ಸ್ಮೃತಿ ಈಗ ರಾಜಕಾರಣದಲ್ಲಿಯೂ ಸೂಪರ್​ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಆರಂಭದಲ್ಲಿ ಬಿಜೆಪಿಯ ಮಹಿಳಾ ಘಟಕದಲ್ಲಿ ಕೆಲಸ ಮಾಡಿದ ಅವರು ನಂತರ ಗುಜರಾತಿನಿಂದ ರಾಜ್ಯಸಭೆಗೆ (Rajya Sabha) ಆಯ್ಕೆಯಾದರು.  2014 ರಿಂದ 2016ರ ಅವಧಿಯಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದರು. ಪ್ರಸ್ತುತ ಕೇಂದ್ರ ಸರ್ಕಾರದ  ಜವಳಿ ಖಾತೆ ಸಚಿವರಾಗಿದ್ದಾರೆ.

ಇದು ಸ್ಮೃತಿ ಇರಾನಿಯವರ ರಾಜಕಾರಣ ಹಾಗೂ ಧಾರಾವಾಹಿಯ ಮಾತಾಯಿತು. ಆದರೆ ಅವರ ವೈಯಕ್ತಿಕ ಬದುಕಿನ ಕುತೂಹಲದ ಕಥೆಯೊಂದು ತೀರಾ ಕಡಿಮೆ ಜನರಿಗೆ ಮಾತ್ರ ಗೊತ್ತಿದೆ. ಪ್ರೀತಿ, ಪ್ರೇಮಕ್ಕೆ ಕಣ್ಣಿಲ್ಲ ಎನ್ನುತ್ತಾರೆ. ಅದು ಯಾವಾಗ, ಯಾರ ಜೊತೆ, ಹೇಗೆ ಆಗಿ ಹೋಗುತ್ತಿದೆಯೋ ತಿಳಿಯುವುದೇ ಇಲ್ಲ. ಅದೇ ರೀತಿ ಸ್ಮೃತಿ ಅವರ ಜೀವನದಲ್ಲಿಯೂ ಘಟಿಸಿದೆ. ಇವರು ತಮ್ಮ  ಹೃದಯವನ್ನು ವಿವಾಹಿತನಿಗೆ ನೀಡಿಬಿಟ್ಟಿದ್ದರು ನಂತರ ಸ್ಮೃತಿ ಇರಾನಿ ಅವರನ್ನೇ ಅಂದರೆ 2001ರಲ್ಲಿ ಪಾರ್ಸಿ ಉದ್ಯಮಿ ಜುಬಿನ್ ಇರಾನಿ (Jubin Irani) ಅವರನ್ನು ವಿವಾಹವಾದರು. 

ಈ ನಟರೇನು ಮೂರು ತಿಂಗಳ ಮಗುನಾ? ನಟಿ Ratna Pathak Shah ಹೀಗೆ ಹೇಳಿದ್ದೇಕೆ?
 
ಸ್ಮೃತಿ ಇರಾನಿ ತಮ್ಮ ಹುಟ್ಟುಹಬ್ಬದ ಒಂದು ವಾರದ ಮೊದಲು ಅಂದರೆ ಮಾರ್ಚ್ 23ರ ಮೊದಲು ಜುಬಿನ್ ಇರಾನಿ ಅವರನ್ನು ವಿವಾಹವಾಗಿದ್ದರು. ಎರಡು ವರ್ಷಗಳ ಹಿಂದೆ, ಸ್ಮೃತಿ ತಮ್ಮ ವಿವಾಹ ವಾರ್ಷಿಕೋತ್ಸವದಂದು ಮದುವೆಯ ಫೋಟೋಗಳನ್ನು ಮಾಡಿದ ವೀಡಿಯೊವನ್ನು ಸಹ ಹಂಚಿಕೊಂಡಿದ್ದರು. ಸ್ಮೃತಿ ಇರಾನಿ 2001 ರಲ್ಲಿ ಮಗ ಜೋಹರ್‌ಗೆ ಜನ್ಮ ನೀಡಿದರು. ಎರಡು ವರ್ಷಗಳ ನಂತರ, ಅಂದರೆ 2003 ರಲ್ಲಿ,  ಮಗಳು ಜೋಯ್ಶ್  ತಾಯಿಯಾದರೆ,  ಜುಬಿನ್​ ಅವರಿಗೆ ಮೊದಲ ಪತ್ನಿಯಿಂದ ಹುಟ್ಟಿದ ಮಗಳು ಶನೀಲ್ ಕೂಡ ಇದ್ದಾಳೆ.
 
ಸ್ಮೃತಿ ಇರಾನಿಯವರ ತಂದೆ ಪಂಜಾಬಿಯವರು ಮತ್ತು ತಾಯಿ ಅಸ್ಸಾಮಿ (Assamee) ಮೂಲದವರು. ಅವರ ತಂದೆ ಕೊರಿಯರ್ ಕಂಪನಿ ನಡೆಸುತ್ತಿದ್ದರು. ಮನೆಯ ಆರ್ಥಿಕ ಸ್ಥಿತಿಯು ತುಂಬಾ ವಿಶೇಷವಾಗಿರಲಿಲ್ಲ, ಇದರಿಂದಾಗಿ ಸ್ಮೃತಿ ದೆಹಲಿಯಲ್ಲಿ ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಅಷ್ಟರಲ್ಲಿ ಯಾರೋ ಟಿವಿ ಧಾರಾವಾಹಿಯಲ್ಲಿ ಕೆಲಸ ಮಾಡುವಂತೆ ಕೇಳಿದರು. ಅದರ ನಂತರ ಅವರು ಮುಂಬೈಗೆ ಬಂದರು. 1998 ರಲ್ಲಿ, ಅವರು ಮಿಸ್ ಇಂಡಿಯಾಗಾಗಿ ಆಡಿಷನ್ ಮಾಡಿದರು ಮತ್ತು ಆಯ್ಕೆಯಾದರು. ಆದರೆ, ಆಕೆಗೆ ಅದರ ಫೈನಲ್ ಗೆಲ್ಲಲು ಸಾಧ್ಯವಾಗಲಿಲ್ಲ.  ಮುಂಬೈನಲ್ಲಿ ಸಾಕಷ್ಟು ಹೋರಾಟದ ನಂತರ, ಅವರು ಅಂತಿಮವಾಗಿ 2000 ರಲ್ಲಿ 'ಆತೀಶ್' ಮತ್ತು 'ಹಮ್ ಹೇ ಕಲ್ ಆಜ್ ಔರ್ ಕಲ್' ಧಾರಾವಾಹಿಗಳಲ್ಲಿ (Serial) ಕೆಲಸ ಪಡೆದರು. ಏತನ್ಮಧ್ಯೆ, ಏಕ್ತಾ ಕಪೂರ್ ಸ್ಮೃತಿಯನ್ನು ನೋಡಿದರು ಮತ್ತು ತಮ್ಮ  ಧಾರಾವಾಹಿ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' (Kyunki Saas Bhi Kabhi Bahu Thi) ನಲ್ಲಿ ಕೆಲಸ ಮಾಡಲು ಅವಕಾಶ ನೀಡಿದರು. 2000-2008ರ ವರೆಗೆ ಅಂದರೆ ಎಂಟು ವರ್ಷ ನಡೆದ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಧಾರಾವಾಹಿಯಲ್ಲಿ ಕೆಲಸ ಮಾಡಿದ ನಂತರ ಸ್ಮೃತಿ ಹಿಂತಿರುಗಿ ನೋಡಲಿಲ್ಲ. ಈ ಧಾರಾವಾಹಿಯಲ್ಲಿ ಅವರು ನಿರ್ವಹಿಸಿದ ತುಳಸಿ ಪಾತ್ರ ಪ್ರತಿ ಮನೆಯಲ್ಲೂ ಇಷ್ಟವಾಯಿತು.

Poonam Pandey: ಕೌಟುಂಬಿಕ ದೌರ್ಜನ್ಯದ ಬಗ್ಗೆ ಮಾದಕ ನಟಿ ತೆರೆದಿಟ್ಟ ಭಯಾನಕ ರಹಸ್ಯ...

ಸ್ಮೃತಿ ಇರಾನಿ ಅವರಿಗೆ ಮೂವರು ಸಹೋದರಿಯರಿದ್ದಾರೆ. ಅವರ ಅಜ್ಜ ಬಾಲ್ಯದಿಂದಲೂ ಆರ್‌ಎಸ್‌ಎಸ್‌ನ ಸದಸ್ಯರಾಗಿದ್ದರು. 2003ರಲ್ಲಿ ಸ್ಮೃತಿ ಇರಾನಿ ಕೂಡ ಬಿಜೆಪಿ ಸೇರಲು ಇದೇ ಕಾರಣ. 2019ರಲ್ಲಿ ಬಿಜೆಪಿ ಅವರಿಗೆ ಅಮೇಥಿಯಿಂದ ಟಿಕೆಟ್ ನೀಡಿತು, ಅದರಲ್ಲಿ ಅವರು ರಾಹುಲ್ ಗಾಂಧಿಯನ್ನು ಸೋಲಿಸಿದರು.

Follow Us:
Download App:
  • android
  • ios