Asianet Suvarna News Asianet Suvarna News

ಗರ್ಭಿಣಿ ಆಗಿದ್ದಾಗ ಹೆಣ್ಣು ಮಗುನೇ ಬೇಕು ಅನಿಸಿತ್ತು: ರಕ್ಷಿತಾ ಪ್ರೇಮ್

ಸರಿಗಮಪ ರಿಯಾಲಿಟಿ ಶೋನಲ್ಲಿ ಹೆಣ್ಣು ಮಗು ಬೇಕು ಅನ್ನೋ ಆಸೆ ಹಂಚಿಕೊಂಡ ರಕ್ಷಿತಾ ಪ್ರೇಮ್...

Actress Rakshitha Prem wanted baby girl to dress up vcs
Author
First Published Dec 19, 2022, 1:38 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮನ ಲಿಟಲ್ ಚಾಂಪ್ಸ್‌  ಸೀಸನ್ 19 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ 4ರ ಮಹಾಸಂಗಮ ಡಿಸೆಂಬರ್ 17 ಮತ್ತು 18ರಂದು ನಡೆಯಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಕ್ಷಿತಾ ಪ್ರೇಮ್ ದಿಯಾ ಹಾಡನ್ನು ಕೇಳಿ ಫಿದಾ ಆಗಿದ್ದಾರೆ. ಅಲ್ಲದೆ ದಿಯಾ ಅಲಂಕಾರ ಮಾಡಿಕೊಂಡಿದ್ದ ರೀತಿ ನೋಡಿ ತಮ್ಮಗೂ ಹೆಣ್ಣು ಮಗು ಹುಟ್ಟಬೇಕು ಅನ್ನೋ ಆಸೆ ಇತ್ತು ಎಂದು ಹೇಳಿಕೊಂಡಿದ್ದಾರೆ. 

ರಕ್ಷಿತಾ ಅಭಿನಯಿಸಿರುವ ಕಲಾಸಿಪಾಳ್ಯ ಸಿನಿಮಾದ ಓ ಕೆಂಚ ಓ ಕೆಂಚ ಹಾಡನ್ನು ಸರಿಗಮಪ ಸ್ಪರ್ಧಿ ದಿಯಾ ಹಾಡಿದ್ದಾರೆ. ಕೆಂಪು ಬಣ್ಣದ ಫ್ರಾಕ್‌ ಧರಿಸಿ ಅದಕ್ಕೆ ಮ್ಯಾಚ್ ಆಗುವಂತ ಶೋ ಮತ್ತು ಕಲರ್‌ಫುಲ್‌ ಹೇರ್‌ಬ್ಯಾಂಡ್‌ ಧರಿಸಿದ್ದಾರೆ. ಹಾಡುತ್ತ ಕುಣಿದಿರುವ ದಿಯಾ ನೋಡಿ ರಕ್ಷಿತಾ ಫುಲ್ ಖುಷ್ ಅಗಿದ್ದಾರೆ. ಹಾಡನ್ನು ಎಂಜಾಯ್ ಮಾಡಿದ ನಂತರ ದಿಯಾ ಬಗ್ಗೆ ಮಾತನಾಡಿದ್ದಾರೆ.

'ನಾನು ಪ್ರೆಗ್ನೆಂಟ್ ಆಗಿದ್ದಾಗ ನನಗೆ ಹೆಣ್ಣು ಮಗು ಬೇಕು ಅನಿಸುತ್ತಿತ್ತು..ಯೋಚನೆ ಮಾಡಿದ್ದಾಗ ಬೇಬಿ ಗರ್ಲ್ ಬೇಕು ಅನಿಸುತ್ತಿತ್ತು. ಯಾಕೆ ಹೆಣ್ಣು ಮಕ್ಕಳು ಬೇಕು ಅನಿಸುತ್ತಿತ್ತು ಅಂದ್ರೆ ಹೆಣ್ಣು ಮಕ್ಕಳು ಮನೆಯಲ್ಲಿದ್ದರೆ ಚೆನ್ನಾಗಿರುತ್ತದೆ ಅದರಲ್ಲೂ ಶಾಪಿಂಗ್ ಹೋದಾಗ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳ ವಸ್ತುಗಳು ನೋಡಲು ಸೂಪರ್ ಅಗಿರುತ್ತದೆ. ಅವರಿಗೆ ಪಿಂಕ್ ಫ್ರಾಕ್ ಪರ್ಪಲ್ ಫ್ರಾರ್ಕ್‌ ಕಲರ್ ಕಲರ್ ಹೇರ್‌ ಬ್ಯಾಂಡ್‌ಗಳು ಆ ಹೂವುಗಳ ಡಿಸೈನ್‌ ಕ್ಲಿಪ್‌ಗಳು ಆ ಫ್ರೀಲ್ ಫ್ರೀಲ್‌ ಫ್ರಾಕ್‌ಗಳು ನನಗೆ ತುಂಬಾನೇ ಇಷ್ಟ ...ಇದೆಲ್ಲಾ ಖರೀದಿಸಿ ಹೆಣ್ಣುಮಕ್ಕಳಿಗೆ ಅಲಂಕಾರ ಮಾಡಬಹುದು ಎನ್ನುವ ಒಂದೇ ಕಾರಣಕ್ಕೆ ನನಗೆ ಹೆಣ್ಣು ಮಕ್ಕಳು ಬೇಕು ಅನಿಸುತ್ತಿತ್ತು. ಇವತ್ತು ನನಗೆ ಈ ಯೋಚನೆ ಬಂತು..ನನ್ನ ಮಗ ಸೂರ್ಯನಿಗೆ ಈಗ 14 ವರ್ಷ ನನಗೆ ಏನಾದ್ದರೂ ಮಗಳಿದ್ದರೆ ಅಕೆ ನೋಡಲು ದಿಯಾ ರೀತಿ ಇರುತ್ತಿದ್ದಳು. ನಿಜವಾಗಲೂ ಹಾಗೆ ಅನಿಸುತ್ತಿದೆ.' ಎಂದು ರಕ್ಷಿತಾ ಹೇಳಿದ್ದಾರೆ. 

Actress Rakshitha Prem wanted baby girl to dress up vcs

ದಿಯಾಗೂ ರಕ್ಷಿತಾ ಅಂದ್ರೆ ತುಂಬಾ ಇಷ್ಟ ಅನ್ನೋ ಕಾರಣಕ್ಕೆ ಅನುಶ್ರೀ ಮತ್ತೊಂದು ಬೇಡಿಕೆ ಮುಂದಿಡುತ್ತಾರೆ. ದಿಯಾ ಮತ್ತು ರಕ್ಷಿತಾ ಮೇಡಂ ತಬ್ಬಿಕೊಳ್ಳಬೇಕು ಹಾಗೂ 'ಕಾಫಿಲ್ಲೂ ಟಿವಿಲ್ಲೂ ಕಾದಂಬರಿ ಸ್ಟೋರಿಲ್ಲೂ ನೀನೆ' ಎನ್ನುವ ಸಾಲಿಗೆ ಇಬ್ಬರು ಒಟ್ಟಿಗೆ ಆಕ್ಟಿಂಗ್ ಮಾಡಿದ್ದಾರೆ. ಕ್ರೇಜಿ ಕ್ವೀನ್‌ ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ನನಗೆ ತಿಳಿದಿರುವ ಅತ್ಯಂತ ಕರುಣಾಳು ಆತ್ಮ: ರಕ್ಷಿತಾ ಪ್ರೇಮ್

'ನೀನು ಪುಟ್ಟಾಣಿ ಆಗಿರಬಹುದು ನಾನು ಜಡ್ಜ್‌ ಆಗಿರಬಹುದು ಆದರೆ ನಿನ್ನ ಬಗ್ಗೆ ಕಾಮೆಂಟ್ ಮಾಡುವಷ್ಟು ದೊಡ್ಡವನು ನಾನಲ್ಲ. ನಿಮ್ಮ ಹಾಡು ಔಟ್‌ ಸ್ಟ್ಯಾಂಡಿಂಗ್' ಎಂದು ಲವ್ಲಿ ಸ್ಟಾರ್ ಪ್ರೇಮ್ ಹೇಳಿದ್ದಾರೆ. 'ದಿಯಾ ನಿನಗೆ ಒಬ್ಬರನ್ನು ಗೆಲ್ಲುವುದಕ್ಕೆ ಒಂದು ಸೆಕೆಂಟ್ ಸಾಕು. ಒಂದು ಸ್ಮೈಲ್‌ನಲ್ಲಿ ಗೆದ್ದು ಬಿಡುತ್ತೀಯಾ' ಎಂದು ವಿಜಯ್ ಪ್ರಕಾಶ್ ಹೇಳಿದ್ದಾರೆ.

15 ವರ್ಷ ವೈವಾಹಿಕ ಜೀವನ:

ಪ್ರೇಮ್ ಸರ್ ಸಿನಿಮಾದಲ್ಲಿ ಖರ್ಚು ಒಂದೇ ಮಾಡೋದು ಅಲ್ಲ. ಸಿನಿಮಾದಲ್ಲಿ ಇರುವ ಕ್ವಾಲಿಟಿ, ಕೊನೆಯಲ್ಲಿ ರೆಡಿಯಾಗುವ ಪ್ರಾಡೆಕ್ಟ್ ತುಂಬಾನೇ ಮುಖ್ಯ. ಅದನ್ನ ಚೆನ್ನಾಗಿ ತೋರಿಸುತ್ತಾರೆ. ಮದ್ವೆ ಆದಾಗ ಕ್ವಾಲಿಟಿ ಗೊತ್ತಿರಲಿಲ್ಲ. ಆಮೇಲೆ ಗೊತ್ತಾಯ್ತು. ನಾವು ಮದ್ವೆಯಾಗಿ 15 ವರ್ಷ ಆಯ್ತು. ಈಗಲೂ ಯೋಚನೆ ಮಾಡ್ತಿದ್ದೀನಿ, ಅದು ಹೇಗೆ  ನಾನು ಇವರ ಜೊತೆ  15 ವರ್ಷ ಕಳೆದೆ.'ನಾವು ಪ್ರೀತಿಸುತ್ತಿದ್ದ ದಿನಗಳು ಕ್ರೇಜಿಯಾಗಿತ್ತು. ಪ್ರೇಮ್‌ಗೆ ತುಂಬಾನೇ ಭಯವಿತ್ತು. ಯಾರಾದರೂ ನಾವಿಬ್ಬರೂ ಒಟ್ಟಿಗೆ ಇರುವ ಫೋಟೋ ಕ್ಲಿಕ್ ಮಾಡಿಕೊಂಡು ಬರೆದು ಬಿಡುತ್ತಾರೆಂದು. ತುಂಬಾ ಎಕ್ಸಟ್ರಾ ಎಫರ್ಟ್ ಹಾಕಿ ನನ್ನ ಮನೆಗೆ ಬಂದು ಭೇಟಿ ಮಾಡುತ್ತಿದ್ದರು. ಕೆಲವೊಮ್ಮೆ ಮೂರನೇ ವ್ಯಕ್ತಿಯನ್ನು ಕರೆದುಕೊಂಡು ಬರುತ್ತಿದ್ದರು. ಆಗ ನಾವು ಹೋಟೆಲ್‌ಗೆ ಹೋಗುತ್ತಿದ್ದೆವು. ಆದರೆ ಏನೇ ಮಾಡಿದರೂ ನನ್ನ ಪಕ್ಕ ಕುಳಿತುಕೊಳ್ಳುತ್ತಿರಲಿಲ್ಲ.' ಎಂದು 2009ರಲ್ಲಿ ಡೆಕ್ಕನ್ ಹೆರಾಲ್ಡ್ ನೀಡಿದ ಸಂದರ್ಶನದಲ್ಲಿ ತಮ್ಮ ಪ್ರೀತಿ ಬಗ್ಗೆ ಹಂಚಿಕೊಂಡಿದ್ದರು. 

'ಪ್ರೇಮ್ ನನಗೆ ಮೊದಲು ಕರೆ ಮಾಡಿದಾಗ ಬೈದಿದ್ದೆ. ಅವರ ಸಿನಿಮಾದಲ್ಲಿರುವ ಸ್ಪೆಷಲ್ ಹಾಡಿಗೆ ನಾನು ಡ್ಯಾನ್ಸ್ ಮಾಡಬೇಕಂತೆ. ಆದರೆ ನಾಯಕಿ ಮಾತ್ರ ಬಾಲಿವುಡ್‌ನವರು ಅಂದಿದಕ್ಕೆ,' ಎಂದು ರಕ್ಷಿತಾ ಹೇಳಿದಾಗ 'ಸಾಮಾನ್ಯವಾಗಿ ನಾನು ಯಾವ ಹೀರೋಯಿನ್‌ಗೂ ಕಾಲ್ ಮಾಡುವುದಿಲ್ಲ. ಆದರೆ ಕೆಲವರು ಹೇಳಿದರೆ, ನೀವೇ ಕರೆ ಮಾಡಿ,  ವೈಯಕ್ತಿಕವಾಗಿ ಇನ್ವೈಟ್ ಮಾಡಿ ಎಂದು. ಅವ್ರು ಬೈತಾರೆ ಅಂತ ಮಾತ್ರ ಅಂದು ಕೊಂಡಿರಲಿಲ್ಲ. ಆಕೆಗೆ ಸಮಾಧಾನ ಮಾಡಿ ಸಿನಿಮಾ ನೋಡಲು ಕರೆದೆ,' ಎಂದಿದ್ದರು ಪ್ರೇಮ್.

Follow Us:
Download App:
  • android
  • ios