ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿ ಆಟ ಮುಂದುವರೆಸಿದ್ದಾರೆ. ಕಾವು ಕಾವು ಎನ್ನುತ್ತಿರುವ ಗಿಲ್ಲಿ, ಕಾವ್ಯಾ ಪ್ರೇತಿ ಮಾಡ್ತಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು.ಈ ಮಧ್ಯೆ ನಯನಾ ಹಳೆ ವಿಡಿಯೋ ವೈರಲ್ ಆಗಿದ್ದು, ಅದ್ರಲ್ಲಿ ಗಿಲ್ಲಿ ಬಗ್ಗೆ ನಯನಾ ಹೇಳಿದ್ದೇನು?

ಬಿಬಿಕೆ 12 (BBK 12) ರಲ್ಲಿ ಗಿಲ್ಲಿ (Gilli) ನಟನ ಆಟ ಜೋರಾಗಿದೆ. ಪ್ರತಿಯೊಂದು ಕ್ಷಣವನ್ನೂ ತಮಾಷೆ ಮಾಡ್ತಾ ಬಿಗ್ ಬಾಸ್ ಮನೆಯವರನ್ನು ನಗಿಸ್ತಿರುವ ಗಿಲ್ಲಿ ಆಗಾಗ ಇರಿಟೇಟ್ ಕೂಡ ಮಾಡ್ತಿದ್ದಾರೆ. ಅತಿಯಾದ್ರೆ ಅಮೃತನೂ ವಿಷ ಅನ್ನೋ ಹಾಗೆ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಕೂಡ ತಮಾಷೆಯಾದರೆ ಕಷ್ಟ. ಅದ್ರ ಬಗ್ಗೆ ಗಮನ ಹರಿಸಿ ಅಂತ ಈಗಾಗ್ಲೇ ಕಿಚ್ಚ ಸುದೀಪ್ ಎಚ್ಚರಿಕೆ ಕೂಡ ನೀಡಿಯಾಗಿದೆ. ಸದ್ಯ ನಾಮಿನೇಟ್ ಆಗಿರುವ ಹಾಗೂ ನಾಮಿನೇಟ್ ಆಗದೆ ಇರುವ ಟೀಂ ಮಧ್ಯೆ ಹಣಾಹಣಿ ನಡೆಯುತ್ತಿದ್ದು, ಈ ಬಾರಿ ಗಿಲ್ಲಿ ನಾಮಿನೇಟ್ ಆಗಿಲ್ಲ. ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿದ್ರೂ ಹೊರಗೆ ಅವ್ರ ಹಳೆ ವಿಡಿಯೋಗಳು ವೈರಲ್ ಆಗ್ತಿವೆ.

ಫಸ್ಟ್ ನೈಟ್ ವಿಷ ಹಾಕ್ತೇನೆ ಎಂದಿದ್ದ ನಯನಾ ! :

ಮೊದಲೇ ಹೇಳಿದಂತೆ ಗಿಲ್ಲಿ ಹಳೆ ವಿಡಿಯೋ ಒಂದು ವೈರಲ್ ಆಗಿದೆ. ಆಂಕರ್ ಅನುಶ್ರೀ, ಹಾಸ್ಯ ಕಲಾವಿದರ ಜೊತೆ ಮಾತನಾಡ್ತಿದ್ದ ವಿಡಿಯೋ ಇದು. ಇದ್ರಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿರುವ ಚಂದ್ರಪ್ರಭ, ಹಾಸ್ಯ ನಟಿ ನಯನಾ, ಜಗ್ಗಪ್ಪ ಹಾಗೂ ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ, ಅನುಶ್ರೀ ಜೊತೆ ಮಾತನಾಡ್ತಿದ್ದಾರೆ. ಅನುಶ್ರೀ, ಗಿಲ್ಲಿ ನಟನಿಗೆ ಮದುವೆ ಆಗೋದು ಕಷ್ಟ ಇದೆ ಅಂತ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರತಿಯೊಬ್ಬ ಕಲಾವಿದರೂ ನೋ ಎನ್ನುವ ಉತ್ತರ ನೀಡಿದ್ದಾರೆ. ಸಾಧ್ಯವೇ ಇಲ್ಲ ಎಂದ ನಯನಾ, ಕಾರಣ ವಿವರಿಸಿದ್ದಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಶೋ ಮಾಡ್ಬಹುದು, ಆದ್ರೆ ಈ ಕ್ರಿಮಿ ಅಂದ್ರೆ ಗಿಲ್ಲಿಯನ್ನು ಸಹಿಸಿಕೊಳ್ಳೋದು ಕಷ್ಟ. ಮದುವೆಯಾದ ಹುಡುಗಿ ಜೀವನ ಪೂರ್ತಿ ಹೇಗೆ ಸಹಿಸಿಕೊಳ್ತಾಳೆ. ನನ್ನಂಥವಳು ಸಿಕ್ಕಿದ್ರೆ ಫಸ್ಟ್ ನೈಟ್ ನಲ್ಲಿ ವಿಷ ಹಾಕಿ ಸಾಯಿಸ್ತೇನೆ ಅಂತ ನಯನಾ ಹೇಳಿದ್ದಾರೆ.

ಜೈಲಲ್ಲಿ ಸೂಪರಾಗಿ​ ನೋಡಿಕೊಂಡ್ರು ಎಂದ Bigg Boss ಸತೀಶ್​: ಕಾರಣ ಕೇಳಿದ್ರೆ ಎಷ್ಟು ಚೆನ್ನಾಗಿ ನುಣುಚಿಕೊಂಡ್ರು ನೋಡಿ!

ಪ್ರತಿಯೊಂದು ಮಾತಿಗೂ ಕೌಂಟರ್ ನೀಡುವ ಗಿಲ್ಲಿ ಆ ಟೈಂನಲ್ಲಿ ಸುಮ್ಮನಿರೋಕೆ ಸಾಧ್ಯವಾ? ಗಿಲ್ಲಿ ನಯನಾಗೆ ಕೌಂಟರ್ ನೀಡಿದ್ದಾರೆ. ನಿನ್ನಂಥವರು ಸಿಕ್ಕಿದ್ರೆ ನಾನೇ ಸತ್ತು ಹೋಗ್ತೇನೆ ಎಂದಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ನೋಡಿದ ಫ್ಯಾನ್ಸ್, ಗಿಲ್ಲಿ ಕೊನೆ ಮಾತನ್ನು ಎಂಜಾಯ್ ಮಾಡಿದ್ದಾರೆ. ಸೂಪರ್ ಗಿಲ್ಲಿ ಅಂತ ಬೆನ್ನು ತಟ್ಟಿದ್ದಾರೆ.

Kannada Bigg Boss Season 12: ಫಿನಾಲೆಗೆ ಕಾಲಿಡುವ ಟಾಪ್ 5 ಸ್ಪರ್ಧಿಗಳು ಇವರೇ ನೋಡಿ

ಬಿಗ್ ಬಾಸ್ ಗೆಲ್ತಾರಾ ಗಿಲ್ಲಿ? : 

ಕಾವ್ಯಾ ಜೊತೆ ಜಂಟಿಯಾಗಿ ಬಿಗ್ ಬಾಸ್ ಮನೆಗೆ ಬಂದ ಗಿಲ್ಲಿ, ಪ್ರತಿ ಬಾರಿ ಕಾವ್ಯಾ ಪರ ನಿಲ್ತಾರೆ. ಕಾವು ಕಾವು ಎನ್ನುವ ಗಿಲ್ಲಿ, ಮನೆಯಲ್ಲಿ ಏನು ಮಾಡ್ತಾರೆ ಎಂಬ ವಿಡಿಯೋವನ್ನು ಹಿಂದಿನ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ತೋರಿಸಿದ್ರು. ಅಲ್ಲಿ ಇಲ್ಲಿ ಮಲಗ್ತಾ, ಕಾವ್ಯಾ, ರಘುಗೆ ಕ್ವಾಟ್ಲೆ ನೀಡ್ತಾ ಇರುವ ಗಿಲ್ಲಿ ಟಾಸ್ಕ್ ಬಂದಾಗ ಟೀಂ ದಾರಿ ತಪ್ಪಿಸ್ತಾರೆ ಎನ್ನುವ ಆರೋಪ ಕೂಡ ಇದೆ. ಆದ್ರೆ ಅವರ ತಮಾಷೆ, ಒಬ್ಬರ ಪರ ನಿಂತು ಮಾತನಾಡುವ ಅವರ ವ್ಯಕ್ತಿತ್ವ ಫ್ಯಾನ್ಸ್ ಗೆ ಇಷ್ಟವಾದಂತಿದೆ. ಅನೇಕ ಕಲಾವಿದರು ಗಿಲ್ಲಿ ಆಟವನ್ನು ಮೆಚ್ಚಿಕೊಂಡಿದ್ದಾರೆ. ಟಾಪ್ 5 ಸ್ಪರ್ಧಿಗಳ ಪಟ್ಟಿಯಲ್ಲಿ ಗಿಲ್ಲಿ ಹೆಸರಿದೆ. ಸದ್ಯ ಒಂದು ತಿಂಗಳು ಕಳೆದಿದ್ದು, ಮುಂದಿನ ದಿನಗಳಲ್ಲಿ ಗಿಲ್ಲಿ ಹೇಗಿರ್ತಾರೆ ಅನ್ನೋದ್ರ ಮೇಲೆ ಗೆಲುವು ನಿಂತಿದೆ.

View post on Instagram