ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಮನೆಮಾತನಾಗಿರುವ ನಟಿ ಮೇಘಾ ಶೆಟ್ಟಿ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಇವರ ಮರಾಠಿ ಚಿತ್ರ ಆಪರೇಷನ್​ ಲಂಡನ್​ ಕೆಫೆ ಶೂಟಿಂಗ್​ ಮುಕ್ತಾಯಗೊಂಡಿದೆ.  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ಮೇಘಾ ಶೆಟ್ಟಿ (Megha Shetty) ಮನೆ ಮಾತಾಗಿದ್ದರು. ಅನು ಸಿರಿಮನೆ ಪಾತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದ ಮೇಘಾ ದೊಡ್ಡ ಮಟ್ಟದ ಖ್ಯಾತಿಗಳಿಸಿದರು. ಕಳೆದ ತಿಂಗಳು ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯವಾಗಿದೆ. ಈ ಸಂದರ್ಭದಲ್ಲಿ ಭಾವುಕರಾಗಿದ್ದ ನಟಿ, ನಾಲ್ಕು ವರ್ಷಗಳ ಕಾಲ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಗುರುತಿಸಿಕೊಂಡಿದ್ದೆ. ಧಾರಾವಾಹಿಯ ಕೊನೆ ದಿನ ಚಿತ್ರೀಕರಣ ಮಾಡುವಾಗ ಭಾವುಕಳಾದೆ. ನನ್ನಿಂದ ಚಿತ್ರೀಕರಣ ಆರಂಭವಾಗಿ ನನ್ನಿಂದ ಚಿತ್ರೀಕರಣ ಮುಕ್ತಾಯವಾಗಿದೆ. ಫಸ್ಟ್‌ ಶೂಟ್‌ ದಿನ ನಾನು ಇದ್ದೆ ಕೊನೆ ಶೂಟ್‌ ದಿನನೂ ನಾನು ಇದ್ದೆ. ನಾಲ್ಕು ವರ್ಷಗಳಿಂದ ಧಾರಾವಾಹಿ ಸೆಟ್‌ ನನ್ನ ಎರಡನೇ ಮನೆ ಆಗಿಬಿಟ್ಟಿತ್ತು. ಈಗ ನನ್ನ ಕುಟುಂಬ ಬಿಟ್ಟು ದೂರ ಹೋಗುತ್ತಿರುವೆ ಅನಿಸುತ್ತದೆ. ನಾವು ಒಟ್ಟು ಸಾವಿರ ಎಪಿಸೋಡ್ (Episode) ಶೂಟ್ ಮಾಡಿದ್ದೀವೆ. ಸಾವಿರ ಎಪಿಸೋಡ್‌ನಲ್ಲೂ ಎಲ್ಲರೂ ಒಟ್ಟಿಗೆ ಇರುವುದೇ ಸಂತೋಷ ಎಂದಿದ್ದರು. ಧಾರಾವಾಹಿ ಮುಗಿದರೂ ಆದರೆ ಅನು ಸಿರಿಮನೆ ಪಾತ್ರ ಅಭಿಮಾನಿಗಳಲ್ಲಿ ಮನದಲ್ಲಿ ಗಟ್ಟಿಯಾಗಿ ಬೇರೂರಿದೆ. 

ಇದೀಗ ನಟಿ ಮೇಘಾ ಶೆಟ್ಟಿ ಹುಟ್ಟುಹಬ್ಬದ (Birthday) ಗುಂಗಿನಿಂದ ಹೊರಕ್ಕೆ ಬಂದಿಲ್ಲ. ಮೊನ್ನೆ ಆಗಸ್ಟ್​ 4ರಂದು 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ನಟಿ. ತಮ್ಮ ಎರಡು ಪುಟಾಣಿ ನಾಯಿಮರಿಗಳ ಜೊತೆ ಹುಟ್ಟುಹಬ್ಬದ ವಿಷ್​ ಮಾಡಿಸಿಕೊಂಡಿದ್ದ ನಟಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಟೆಡಿಬೇರ್ ಗೊಂಬೆಯಂತೆ ಕಾಣುವ ಶಿಡ್ಜು ಎರಡು ನಾಯಿ ಮರಿಗಳನ್ನು ಶೇಕ್​ಹ್ಯಾಂಡ್​ ಮಾಡಿ ಹ್ಯಾಪ್ಪಿ ಬರ್ತಡೇ ಎಂದಿದ್ದ ಮೇಘಾ ಶೆಟ್ಟಿ ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಇಂದು ತಮ್ಮ ಫ್ಯಾನ್ಸ್​ಗೆ ಧನ್ಯವಾದ ಸಲ್ಲಿಸುತ್ತಾ ಇನ್ನೊಂದು ಇನ್​ಸ್ಟಾ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ ಮೇಘಾ. 

View post on Instagram

 ಇದೀಗ ಕನ್ನಡ ಕಿರುತೆರೆ ಮೂಲಕ ಪ್ರಸಿದ್ಧಿ ಪಡೆದಿರುವ ನಟಿ ಮೇಘಾ ಶೆಟ್ಟಿ ಸದ್ಯ ಸಿನಿಮಾದ ಕಡೆ ಗಮನ ಹರಿಸಿದ್ದಾರೆ. ಮರಾಠಿ ಚಿತ್ರರಂಗಕ್ಕೂ ಕಾಲಿರಿಸಿದ್ದಾರೆ. ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸುತ್ತಿರುವ ಆಕ್ಷನ್ ಪ್ಯಾಕೇಜ್ ಚಿತ್ರ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ 'ಆಪರೇಷನ್ ಲಂಡನ್ ಕೆಫೆ' (Operation London Cafe) ಬಹುತೇಕ ಚಿತ್ರೀಕರಣ ಮುಗಿಸಿದ್ದು. ಚಿತ್ರದ ಡಬ್ಬಿಂಗ್ ಹಂತದ ಚಟುವಟಿಕೆಗಳು ಭರದಿಂದ ಸಾಗುತ್ತಿದೆ. ಇದಕ್ಕೆ ಮೇಘಾ ಶೆಟ್ಟಿಯೇ ನಾಯಕಿ. ಕನ್ನಡದ ಸೇರಿದಂತೆ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿದೆ. 

ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ಸ್ ಲಾಂಛನದಡಿಯಲ್ಲಿ ವಿಜಯ್ ಕುಮಾರ್ ಶೆಟ್ಟಿ ಹವರಾಲ್ ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಡಗರ ರಾಘವೇಂದ್ರ ನಿರ್ದೇಶಿಸುತ್ತಿದ್ದಾರೆ. ಡಿ ನಾಗಾರ್ಜುನ್ ಛಾಯಾಗ್ರಹಣ ಪ್ರಾನ್ಷು ಝಾ ಸಂಗೀತ ಕೆ. ಎಂ ಪ್ರಕಾಶ್ ಸಂಕಲನ ವರದರಾಜ್ ಕಾಮತ್ ಕಲೆ ವಿಕ್ರಂ ಮೋರ್ ಮಾಸ್ ಮಾದ ಸಾಹಸ ಕವಿರಾಜ್ ವಿ ನಾಗೇಂದ್ರ ಪ್ರಸಾದ್ (Nagendra Prasad) ಮತ್ತು ಕ್ಷಿತಿಜ್ ಪಟವರ್ಧನ್ ಸಾಹಿತ್ಯವಿದೆ. ಬಹುತೇಕ ಶೂಟಿಂಗ್​ ಮುಗಿಸಿರುವ ಈ ಚಿತ್ರತಂಡವು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಬಿಜಿಯಾಗಿದೆ. 

ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟೀವ್​ ಆಗಿರುವ ನಟಿ, ಫೋಟೋಶೂಟ್‌ಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚಿಗಷ್ಟೆ ವರ್ಕೌಟ್ ಫೋಟೋಗಳನ್ನು ಶೇರ್ ಮಾಡಿದ್ದ ನಟಿ ಮೇಘಾ ಶೆಟ್ಟಿ ನಂತರ ಮತ್ತಷ್ಟು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದರು. ಈಕೆಯ ಫೋಟೋಗೆ ಫ್ಯಾನ್ಸ್​ ಫಿದಾ ಆಗಿದ್ದರು.

View post on Instagram