'ಜೊತೆ ಜೊತೆಯಲಿ' ಖ್ಯಾತಿಯ ನಟಿ ಮಾನಸ ಮನೋಹರ್ ಶೀಘ್ರದಲ್ಲೇ ಅಮ್ಮನಾಗಲಿದ್ದಾರೆ. ಅದರ ನಡುವೆ ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಮತ್ತೊಂದು ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 

ಬೆಂಗಳೂರು (ಏ.2): ಕಿರುತೆರೆಯ ಜನಪ್ರಿಯ ನಟಿ ಮಾನಸ ಮನೋಹರ್ ಅವರು ತಮ್ಮ ಜೀವನದ ಅತ್ಯಂತ ಸುಂದರ ಘಟ್ಟವನ್ನು ತಲುಪಿದ್ದಾರೆ. ಹೌದು, ನಟಿ ಮಾನಸ ಮನೋಹರ್ ಮತ್ತು ಅವರ ಪತಿ ಪ್ರೀತಂ ಚಂದ್ರ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೂ ಮುನ್ನವೇ ಅವರು ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯ ಮೂಲಕ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ..ಸ್ವತಃ ನಟಿಯೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.ಮಾನಸಾ ಮನೋಹರ್‌ ಮಗುವಿಗೆ ಜನ್ಮ ನೀಡುವ ಮುನ್ನವೇ ಅವರ ತಮ್ಮನಿಗೆ ಹೆಣ್ಣು ಮಗುವಾಗಿದ್ದು, ಅದರ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಸೋಶಿಯಲ್‌ ಮೀಡಿಯಾದಲ್ಲಿ ತಮಗೆ ಮಗುವಾಗಿದೆ ಎನ್ನುವ ಸುದ್ದಿಗೆ ಸ್ಪಷ್ಟನೆಯನ್ನೂ ನೀಡಿದ್ದು, ಇದು ನನ್ನ ತಮ್ಮನ ಮಗಳು, ನಾನಿನ್ನೂ ಮಗುವಿಗೆ ಜನ್ಮ ನೀಡಬೇಕಿದೆ. ಹಾಗಿದ್ದರೂ ಆಕೆಯೂ ನನ್ನ ಮಗಳು ಎಂದು ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 "ನಮ್ಮ ಪುಟ್ಟ ದೇವತೆ ಮಾರ್ಚ್ 20, 2026ರಂದು ಜನಿಸಿದಳು. ಅವಳು ನಮ್ಮ ಕುಟುಂಬಕ್ಕೆ ಅಪಾರ ಸಂತೋಷವನ್ನು ತಂದಿದ್ದಾಳೆ, ನಿಜಕ್ಕೂ ಅವಳು ನಮ್ಮ ಪಾಲಿನ ದೇವತೆ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಅಭಿನಂದನೆಗಳ ಸುರಿಮಳೆಗೈಯುತ್ತಿದ್ದಾರೆ.

'ಜೊತೆ ಜೊತೆಯಲಿ' ಧಾರಾವಾಹಿಯ 'ಮೀರಾ' ಪಾತ್ರದ ಮೂಲಕ ಮನೆಮಾತಾಗಿದ್ದ ಮಾನಸ, ಇತ್ತೀಚೆಗೆ ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಲಕ್ಷ್ಮೀ ನಿವಾಸ'ದಲ್ಲಿ 'ನೀಲು' ಎಂಬ ಖಳನಾಯಕಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಗರ್ಭಿಣಿಯಾದ ಕಾರಣ, ಮಗುವಿನ ಆರೈಕೆಗಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಅವರು ಈ ಧಾರಾವಾಹಿಯಿಂದ ಹೊರಬಂದಿದ್ದರು. ಶೂಟಿಂಗ್‌ನ ಕೊನೆಯ ದಿನದ ನೆನಪುಗಳನ್ನು ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

View post on Instagram

ಪ್ರೀತಂ ಚಂದ್ರ ಜೊತೆಗಿನ ದಾಂಪತ್ಯ

ನಟಿ ಮಾನಸ ಮನೋಹರ್ ಅವರು 2024ರಲ್ಲಿ ಉದ್ಯಮಿ ಪ್ರೀತಂ ಚಂದ್ರ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸುವ ಹಾದಿಯಲ್ಲಿದ್ದಾರೆ.