ಖ್ಯಾತಿ ಕಿರುತೆರೆ ನಟಿ ಕಲ್ಯಾಣಿ ಕುರಾಲೆ ಜಾಧವ್ ಭೀಕರ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಶನಿವಾರ ರಾತ್ರಿ (ನವೆಂಬರ್ 12) ಕೊಲ್ಹಾಪುರ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ
ಮರಾಠಿಯ ಖ್ಯಾತಿ ಕಿರುತೆರೆ ನಟಿ ಕಲ್ಯಾಣಿ ಕುರಾಲೆ ಜಾಧವ್ ಭೀಕರ ರಸ್ತೆ ಅಪಘಾತದಲ್ಲಿ ನಿಧನಹೊಂದಿದ್ದಾರೆ. ಶನಿವಾರ ರಾತ್ರಿ (ನವೆಂಬರ್ 12) ಕೊಲ್ಹಾಪುರ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. 32 ವರ್ಷದ ನಟಿ ತನ್ನ ದ್ವಿಚಕ್ರವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಕಾಂಕ್ರೀಟ್ ಮಿಕ್ಸರ್ ಟ್ಯ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಟಿ ಕಲ್ಯಾಣಿ ತುಜ್ಯಹತ್ ಜೀವ್ ರಂಗಾಲಾ ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದರು.
ನಟಿ ಕಲ್ಯಾಣಿ ಕುರಾಲೆ ಜಾಧವ್ ಶನಿವಾರ ಸಂಜೆ ಮನೆಗೆ ತೆರಳುತ್ತಿದ್ದಾಗ ಸಾಂಗ್ಲಿ-ಕೊಲ್ಹಾಪುರ ಹೆದ್ದಾರಿಯ ಹಾಲೊಂಡಿ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಂದಹಾಗೆ ಕಲ್ಯಾಣಿ ಧಾರಾವಾಹಿ ಜೊತೆಗೆ ರೆಸ್ಟೋರೆಂಟ್ ಅನ್ನು ತೆರೆದಿದ್ದರು. ರಾತ್ರಿ ತನ್ನ ರೆಸ್ಟೋರೆಂಟ್ ಮುಚ್ಚಿ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ವರ್ಕೌಟ್ ಮಾಡುವಾಗ ಹೃದಯಾಘಾತ; 'ಕಸೌಟಿ ಜಿಂದಗಿ ಕಿ' ಖ್ಯಾತಿಯ ನಟ ಸಿದ್ದಾಂತ್ ನಿಧನ
ನಟಿ ಕಲ್ಯಾಣಿ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ಮೊದಲೇ ಪ್ರಾಣ ಪಕ್ಷಿ ಹಾರಿಯೋಗಿತ್ತು. ಟ್ರ್ಯಾಕ್ಟರ್ ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಕೊಲ್ಹಾಪುರ ಪೊಲೀಸ್ ಅಧಿಕಾರಿ ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ನಟಿ ಕಲ್ಯಾಣಿ ಕೆಲವು ದಿನಗಳ ಹಿಂದೆಯಷ್ಟೆ ಕೊಲ್ಹಾಪುರದಲ್ಲಿ ರೆಸ್ಟೋರೆಂಟ್ ತೆರೆದಿದ್ದರು ಆದರೀಗ ರೆಸ್ಟೋರೆಂಟ್ ವ್ಯವಹಾರವೆಲ್ಲಾ ಒಂದು ಹಂತಕ್ಕೆ ಬರುವ ಅಷ್ಟೊತ್ತಿಗೆ ಇಹಲೋಕ ತ್ಯಜಿಸಿರುವುದು ದುರದೃಷ್ಟವಾಗಿದೆ. ಇನ್ನು ಒಂದು ವಾರದ ಹಿಂದೆಯಷ್ಟೆ ಕಲ್ಯಾಣಿ ತನ್ನ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದರು. ಆದರೀಗ ಕಲ್ಯಾಣಿ ನೆನಪು ಮಾತ್ರ.
Syed Ashraf Death ಹೃದಯಾಘಾತದಿಂದ ಕಿರುತೆರೆ ಖ್ಯಾತ ನಿರ್ದೇಶಕ ಸಯ್ಯದ್ ಅಶ್ರಫ್ ಇನ್ನಿಲ್ಲ
ಕಲ್ಯಾಣಿ ಅವರ ಬಣ್ಣದ ಲೋಕದ ಬಗ್ಗೆ ಹೇಳುವುದಾದರೆ, ದಕ್ಖಂಚ ರಾಜ ಜ್ಯೋತಿಬಾ ಮತ್ತು ತುಜ್ಯಾ ಜೀವ್ ರಂಗ್ಲಾ ಟಿವಿ ಸೋನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಟಿವಿ ಶೋ ಮತ್ತು ಧಾರಾವಾಹಿಗಳಲ್ಲಿ ಕಲ್ಯಾಣಿ ಮಿಂಚಿದ್ದಾರೆ. ತರಹೇವಾರಿ ಪಾತ್ರಗಳ ಮೂಲಕ ಕಲ್ಯಾಣಿ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಕಲ್ಯಾಣಿ ಅವರ ನಿಧನಕ್ಕೆ ಅಭಿಮಾನಿಗಳು, ಕಿರುತೆರೆ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.
