Syed Ashraf Death ಹೃದಯಾಘಾತದಿಂದ ಕಿರುತೆರೆ ಖ್ಯಾತ ನಿರ್ದೇಶಕ ಸಯ್ಯದ್ ಅಶ್ರಫ್ ಇನ್ನಿಲ್ಲ
ಕನ್ನಡ ಕಿರುತೆರೆ ನಿರ್ದೇಶಕ ಸಯ್ಯದ್ ಅಶ್ರಫ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ....
ಕನ್ನಡ ಕಿರುತೆರೆ ಜನಪ್ರಿಯ ನಿರ್ದೇಶಕ ಸಯ್ಯದ್ ಅಶ್ರಫ್ ಅಕ್ಟೋಬರ್ 31ರಂದು ಬೆಳಗ್ಗೆ 3 ಗಂಟೆಗೆ ಹೃದಯಾಘಾತದಿಂದ ಕೊನೆ ನಿಧನರಾಗಿದ್ದಾರೆ.
ಅಮ್ಮನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವರ್ತಿ, ತಕಧಿಮಿತಾ, ಅಳುಗಳಿಮನೆ ಸೇರಿಂದ ಹಲವು ಹಿಟ್ ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ.
42 ವರ್ಷದ ಸಯ್ಯದ್ ಅಶ್ರಫ್ ನಿಧನಕ್ಕೆ ಶೈಲಜಾ ನಾಗ್, ಬಿ ಸುರೇಶ್, ವಿ ಶಿವಕುಮಾರ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಮಧ್ಯಾಹ್ನ ಸಂಪಂಗಿರಾಮನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾ
'ಜೀವನ ಅನಿರೀಕ್ಷಿತ. ಸಯ್ಯದ್ ಇಲ್ಲ ಅನ್ನೋ ವಿಚಾರ ನಂಬಲು ಆಗುತ್ತಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ದೇವರ ಶಕ್ತಿ ನೀಡಲಿ' ಎಂದು ಸುನೇತ್ರ ಪಂಡಿತ್ ಬರೆದುಕೊಂಡಿದ್ದಾರೆ.
'ನನ್ನ ಅಭಿನಯಕ್ಕೆ ಶೇಪ್ ಕೊಟ್ಟಿದ್ದು ಸಯ್ಯದ್ ಸರ್. ನಿಮ್ಮ ಜೊತೆ ಕೆಲಸ ಮಾಡಿದ ಕ್ಷಣಗಳನ್ನು ಮರೆಯುವುದಕ್ಕೆ ಆಗೋಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ನಟ ಮಧು ಸಾಗರ್ ಹೇಳಿದ್ದಾರೆ.
'ರಾತ್ರಿ ಆಫೀಸ್ನಿಂದ ಕೆಲಸ ಮುಗಿಸಿ ಮನೇಗ್ ಬರೋದು ತುಂಬಾ ಲೇಟ್ ಆಗಿತ್ತು.. ಬೆಳ್ಗೆ ಗಂಟೆ 10 ಆದ್ರು ನಂಗ್ ಜೋರು ನಿದ್ದೆ. ಆಮೇಲ್ ಕಣ್ಬಿಟ್ಟು ಮೊಬೈಲ್ ನೋಡ್ತಿನಿ ಸಿಕ್ಕಾಪಟ್ಟೆ mis cal ಇದ್ವು. ಆ ಕಾದಂಬರಿ ಕಣಜ ಧಾರಾವಾಹಿ ಸೆಟ್ನಲ್ಲಿ ಪರಿಚಯ ಆದ ಗೆಳೆಯನ ಕರೆಗಳೆ ಜಾಸ್ತಿ ಇದ್ವು ಏನೋ ಖುಷಿ ವಿಚಾರ ಹೇಳ್ತನೆ ಅಂತ ಕಾಲ್ ಮಾಡ್ದೆ' ಎಂದು ಚೇತನ್ ಮಂಜುನಾಥ್ ಸಯ್ಯದ್ ಬಗ್ಗೆ ಬರೆದುಕೊಂಡಿದ್ದಾರೆ.
'ಫೋನ್ ಎತ್ತಿದ್ ತಕ್ಷಣ "ಸೈಯದ್ ಸರ್ ಹೋದ್ರಂತೆ" ಅಂದ.ಒಂಥರಾ ಗಾಢ ಮೌನ.ನಮ್ಮ ಕಿರುತೆರೆ ಸೆಟ್ನಲ್ಲಿ ನಾನು ಇಲ್ದಾಗ ನನ್ನ ಸಹ associate directors ಹತ್ತಿರ ಹೇಳ್ತಿದ್ರಂತೆ.. "ನಿಮ್ಗೆಲ್ಲರ್ಗಿಂತಾ ಮುಂಚೆ ಚೇತೂನೆ ನಿರ್ದೇಶಕ" ಆಗೋದು ಅಂತ.'
'ಆ ಮಾತು ಅವರ ಬಾಯಿಂದ ಬಂತು ಅಂತ ಕೇಳ್ದಾಗಿಂದ ಅದೆಂತದೋ ದೊಡ್ಡ ಪ್ರಶಸ್ತಿ ಪಡೆದಂತ ಖುಷಿ ಅನುಭವಿಸಿದ್ದೆ.ಅಂದು ಆ ಮಾತನ್ನ ಹೇಳಿದವರು ಇಂದು ಇಲ್ಲ.' ಎಂದಿದ್ದಾರೆ ಚೇತನ್.