ಯಾರ ರಾಜಕಾರಣ ಹೇಗೆ ಶುರುವಾಯ್ತು, ಪಾತಕಿಗಳು ಯಾರು ಅನ್ನೋದು ಜನಕ್ಕೆ ಗೊತ್ತು : ಸಿಟಿ ರವಿ ತಿರುಗೇಟು

ಬೆಳಗಾವಿ ರಿಪಬ್ಲಿಕ್ ಆಗಲು ಜನ ಒಪ್ಪಲ್ಲ, ನಾವು ಅವಕಾಶ ಕೊಡಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ. ಸಿ.ಟಿ. ರವಿ ಅವರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಸುಳ್ಳುಗಳ ಸರಮಾಲೆ ಹೆಣೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

BJP MLC CT Ravi outraged against minister lakshmi hebbalkar at chikkamagaluru rav

ಚಿಕ್ಕಮಗಳೂರು (ಡಿ.24): ಸಿ.ಟಿ. ರವಿ ಅವರಿಗೆ ಏನೂ ಆಗಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ. ಅವರೇನು ವೈದ್ಯರೇ? ನನಗೆ ಆಗಿರುವ ಗಾಯ, ರಕ್ತ ಜಗತ್ತೇ ನೋಡಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಕಿಡಿಕಾರಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತುರ್ತು ಪರಿಸ್ಥಿತಿ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದರು. ನನಗೆ ಗಾಯವಾದ ಬಳಿಕವೂ 3-4 ಗಂಟೆ ಚಿಕಿತ್ಸೆ ಕೊಡಿಸಿಲ್ಲ. ಗಾಯ ಆಗಿದ್ದು ಖಾನಾಪುರದಲ್ಲಿ ಚಿಕಿತ್ಸೆ ನೀಡಿದ್ದು ರಾಮದುರ್ಗದಲ್ಲಿ. ಅವರ ತಪ್ಪು ಮುಚ್ಚಿಕೊಳ್ಳಲು ಆ ಮಹಾತಾಯಿ ಸುಳ್ಳುಗಳ ಸರಮಾಲೆ ಹೆಣೆದಿದ್ದಾರೆ. ಸುಳ್ಳನ್ನ ಸೋಲಿಸಬಹುದು, ಸತ್ಯವನ್ನ ಸೋಲಿಸಲು ಆಗಲ್ಲ. ಜಯಮಾಲಾ ಮಂತ್ರಿ ಆದಾಗ ಇದೇ ಮಹಾತಾಯಿ ಏನು ಹೇಳಿಕೆ ನೀಡಿದ್ರು? ಬರೀ ಕಣ್ಣೀರಿನಿಂದ ಬೆನಿಫಿಟ್ ಗಿಟ್ಟಿಸಿಕೊಳ್ಳಬಹುದು ಅಂದು ಕೊಂಡಿರಬಹುದು. ಜನ ಎಲ್ಲವನ್ನು ಗಮನಿಸುತ್ತಾರೆ.

ಅಶ್ಲೀಲ ಸಂಘರ್ಷ: ಹೆಬ್ಬಾಳ್ಕರ್‌ಗೊಂದು ಕಾನೂನು..? ಸಿಟಿ ರವಿಗೊಂದು ಕಾನೂನಾ..?

ಲಕ್ಷ್ಮಿ ಪಿಎಗಳು ಮುಸ್ಲಿಮರು:

ಇಬ್ಬರು ಲಕ್ಷ್ಮಿ ಪಿಎ ಬಹುತೇಕರು ಮುಸ್ಲಿಮರು ಇದ್ದಾರೆ. ಯಾರೂ ಅಪರಿಚಿತರಲ್ಲ, ಮಾಹಿತಿ ಕಲೆ ಹಾಕಿ ಎಲ್ಲವನ್ನೂ ಕೊಡ್ತೀವಿ. ಎಲ್ಲರ ಹೆಸರು ಹಾಕಿ ದೂರು ನೀಡಿದ್ದೇನೆ, ನನ್ನ ಮೇಲೆ ಕ್ರಮ ತಗೊಳ್ತಾರೆ ಎಂದಾದರೆ ಪೊಲೀಸರು ಅವರ ಮೇಲೆ ಯಾಕಿಲ್ಲ? ಎಲ್ಲರಿಗೂ ನ್ಯಾಯ ಒಂದೇ ತಾನೆ? ಕಾಂಗ್ರೆಸ್‌ನವರಿಗೆ ಬೇರೆ, ಬಿಜೆಪಿಯವರಿಗೆ ಬೇರೆ ಕಾನೂನಿದೆಯೇ? ಇದು ಪೊಲೀಸರಿಗೆ ತಿಳಿದಿಲ್ಲವೇ? ಆಡಳಿತ ಪಕ್ಷದವರ ಅಣತಿಯಂತೆ ನಡೆದುಕೊಳ್ಳುತ್ತಿರುವ ಪೊಲೀಸರ ವರ್ತನೆಯನ್ನ ಪ್ರಶ್ನಿಸಿದರು.

ನನ್ನ ಮೇಲೆ ದೈಹಿಕ ಹಲ್ಲೆ ಸಂಬಂಧ ಕಿಶೋರ್, ಅರುಣ್ ದೂರು ನೀಡಿದ್ದಾರೆ. ಪಶ್ಚಿಮ ಬಾಗಿಲಿನಲ್ಲಿ ನಮ್ಮ ಮೇಲೆ ಹಲ್ಲೆ ನಡೆದಾಗ ಅರುಣ್ ನನ್ನ ಜೊತೆ ಇದ್ರು, ಒಳಗಡೆ ಹಲ್ಲೆ ವೇಳೆ ಕಿಶೋರ್ ನನ್ನ ಜೊತೆ ಇದ್ರು, ಹಾಗಾಗಿ, ಅವರುಗಳು ದೂರು ನೀಡಿದ್ದಾರೆ. ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಖಾನಾಪುರದಲ್ಲಿ ನಾನು ದೂರು ನೀಡಿದ್ದೇನೆ. ಎಫ್‌ಐಆರ್ ಕೊಟ್ಟಿಲ್ಲ ಎಂದು ಹೇಳಿದರು. ಎಫ್‌ಐಆರ್‌ಗಾಗಿ ನಿನ್ನೆ ಹೋಗಿದ್ದಾರೆ, ಇಂದು ಹೋಗಿದ್ದಾರೆ, ಕಮಿಷನರ್ 15 ದಿನ ಟೈಂ ಇದೆ ಎಂದಿದ್ದಾರೆ. ಬಿಜೆಪಿಗೆ ಬೇರೆ, ಕಾಂಗ್ರೆಸ್‌ಗೆ ಬೇರೆ ಕಾನೂನಿಲ್ಲ, ನನ್ನ ದೂರಿಗೂ ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು, ಕಮಿಷನರ್ ಆ ಜಾಗದಲ್ಲಿ ಇರಲು ಸೂಕ್ತವಲ್ಲ. ಈ ಪ್ರಕರಣದಲ್ಲಿ ನಾನು ಹೆದರಿ ಹೋಗುವವನಲ್ಲ, ನಮ್ಮ ಕಾರ್ಯಕರ್ತರು ಕೂಡ ಹೆದರಲ್ಲ ಎಂದರು.

ಕೊಲೆಗಡುಕರು ಯಾರು ಅನ್ನೋದು ರಾಜ್ಯಕ್ಕೆ ಗೊತ್ತಿದೆ:

ನನ್ನ ಪಿಎಗಳು ಲಂಚ ಕೇಳಿದ ಉದಾಹರಣೆ ಇಲ್ಲ, ಯಾರೂ ಸತ್ತಿಲ್ಲ, ಕೊಲೆಗಡುಕರು ಯಾರು, ಎಲ್ಲವನ್ನೂ ಹೇಳುವ ಅಗತ್ಯವಿಲ್ಲ. ಯಾರ ರಾಜಕೀಯ ಹೇಗೆ ಶುರುವಾಯ್ತು ಅನ್ನೋದನ್ನ ಸ್ಥಳಿಯರಿಂದ ಕೇಳಿ ಎಂದು ತಿರುಗೇಟು ನೀಡಿದರು. ಮುಂದುವರಿದು, ಮೋದಿ ಹತ್ರ ಹೋಗ್ತೀನಿ ಎಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ, ಬಿಜೆಪಿಯವರು ಎಲ್ಲರೂ ದುಷ್ಯಾಸನರಾದರೆ ಅವರ ಬಳಿ ಏಕೆ ನ್ಯಾಯ ಕೇಳುತ್ತಾರೆ ಎಂದರು ತಿರುಗೇಟು ನೀಡಿದರು.

ಪಕ್ಕೆ, ಬೆನ್ನಿನಲ್ಲಿ 3-4 ಗುರುತುಗಳು ಇನ್ನೂ ಇವೆ. ಅವರ ಪಿಎ ಗೆ ಅಷ್ಟು ಸೊಕ್ಕು ಹೇಗೆ, ಎಲ್ಲಿಂದ ಬಂತು. ಆ ಸೊಕ್ಕಿಗೆ ಕಾರಣ ಯಾರು ? ಗೂಂಡಾಗಳಿಗೆ ಪಾಸ್ ಕೊಟ್ಟಿದ್ದು ಯಾರು ? ಈ ಗಾಯ, ಮಾರ್ಕ್ ಯಾರು ಮಾಡಿದ್ದು ಎಂದು ಪ್ರಶ್ನಿಸಿದ ಅವರು, ಓರ್ವ ಶಾಸಕನಿಗೆ ಸುತ್ತಾಡಿಸಿದ್ದು, ಹಿಂಸೆ ಕೊಟ್ಡಿದ್ದ ಆ ಮಹಾತಾಯಿ ಹೇಗೆ ಒಪ್ಪಿಕೊಳ್ತಾರೆ ಎಂದು ಹೇಳಿದರು.

ಸಿಟಿ ರವಿ 'ಪ್ರಾಸ್ಟಿಟ್ಯೂಟ್' ಅಂದಿದ್ದು ಸತ್ಯ, ಅದಕ್ಕೆ ನಾನೇ ಸಾಕ್ಷಿ: ಡಾ ಯತೀಂದ್ರ ಸಿದ್ದರಾಮಯ್ಯ

ಸಿಎಂ ಪುತ್ರ ಸಮರ್ಥನೆ:

ಮೈಸೂರಿನಲ್ಲಿ ವಿಧಾನಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ಧರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಅವರು ಏನೇನು ಕೇಳಿಸಿಕೊಂಡರೂ ಹೇಳಲಿ. ಜಾಣ ಕುರುಡು, ಜಾಣ ಕಿವುಡು ಆಗೋದು ಬೇಡ ಅವರು ಸ್ವತಂತ್ರರಿದ್ದಾರೆ. ಕಾಲ್ ಲಿಸ್ಟ್ ತೆಗೆದರೆ ಯಾರ್ಯಾರು ಸಂಪರ್ಕದಲ್ಲಿ ಇದ್ದರು ಗೊತ್ತಾಗುತ್ತೆ ಎಂದರು.

Latest Videos
Follow Us:
Download App:
  • android
  • ios