ಕಲರ್ಸ್‌ ಕನ್ನಡ ವಾಹಿನಿಯಲ್ಲಿ ವೀಕೆಂಡ್ ಪ್ರಸಾರವಾಗುವ ಚಾಟ್ ಕಾರ್ನರ್ ಕಾರ್ಯಕ್ರಮದಲ್ಲಿ ಈ ವಾರ ನಟಿ ಹರ್ಷಿಕಾ ಪೂಣಚ್ಚ ಹಾಗೂ ರಾಧಿಕಾ ನಾರಾಯಣ್ ಕಾಣಿಸಿಕೊಂಡಿದ್ದರು. ತಮ್ಮ ಸಿನಿ ಜರ್ನಿ ಹಾಗೂ ಪರ್ಸನಲ್ ಲೈಫ್‌ ಬಗ್ಗೆ ಮಾತನಾಡಿದ ನಟಿಯರು, ನಗು ನಗುತ್ತಲೇ ಭಾವುಕರಾದರು. ಹರ್ಷಿಕಾ ಕಣ್ಣೀರಿಗೆ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ.

ಕೊಡವ ಶೈಲಿಯಲ್ಲಿ ಗೃಪ್ರವೇಶ ಮಾಡಿದ ಹರ್ಷಿಕಾ; ಕರೆಯಲಾಗಲಿಲ್ಲ ಕ್ಷಮಿಸಿ!

ಮಾತುಕತೆ ಆರಂಭದಿಂದಲೂ ಹರ್ಷಿಕಾ ತಂದೆ ವಿಚಾರ ಬಂದರೆ ಮಾತನ್ನು ಅಲ್ಲಿಗೆ ನಿಲ್ಲಿಸಿ ಬೇರೆ ವಿಚಾರ ಮಾತನಾಡುತ್ತಿದ್ದರು. ನಿಮ್ಮ ತಂದೆ ಜೊತೆಗಿನ ಒಡನಾಟ ಹೇಗಿತ್ತು? ಮಿಸ್ ಮಾಡಿಕೊಳ್ಳುತ್ತೀರಾ? ಎಂದು ನಿರೂಪಕ ಚಂದನ್ ಪ್ರಶ್ನೆ ಮಾಡಿದಾಗ ಹರ್ಷಿತಾ ಘಟನೆ ಬಗ್ಗೆ ವಿವರಿಸಲು ಆರಂಭಿಸಿದ್ದರು.

'ನಾನು ಈ ವಿಚಾರ ಬಗ್ಗೆ ಮಾತನಾಡಿದರೆ ಅಳುತ್ತೀನಿ. ನನ್ನೊಳಗೆ ತುಂಬಾ ದುಃಖ ಇದೆ, ನೆನಪಿಸಿಕೊಳ್ಳುತ್ತೀನಿ, ಅಳ್ತೀನಿ. ಆಮೇಲೆ ಸಮಾಧಾನ ಮಾಡಿಕೊಳ್ಳುತ್ತೀನಿ. ನಮ್ಮ ತಂದೆ ತುಂಬಾ ಫಿಟ್ ಆಗಿದ್ರು, ನಾನು ಅಂದುಕೊಂಡಿರಲಿಲ್ಲ,  ಅವರು ಹೋಗುತ್ತಾರೆಂದು. ಇವತ್ತಿಗೂ ಅವ್ರು ಇದ್ದಿದ್ರೆ ಈ ಕಾರ್ಯಕ್ರಮದಲ್ಲೂ ಇಲ್ಲಿ ಕೂತ್ಕೊಂಡು ನೋಡುತ್ತಿದ್ದರು. ದೇವ್ರು ಯಾವಾಗಲೂ ತುಂಬಾ ಕ್ಲೋಸ್‌ ಇರೋವ್ರನ್ನ ಎತ್ಕೊಂಡು ಹೋಗುತ್ತಾರೆ ಅನ್ಸುತ್ತೆ,' ಎಂದು ಹರ್ಷಿಕಾ ಮಾತನಾಡಿದ್ದಾರೆ.

ಲಂಡನ್‌ನಿಂದ ಹಿಂದಿರುಗಿದ ಹರ್ಷಿಕಾ, ಕ್ರಿಸ್ಮಸ್‌ಗೆ ಮಾಡಿಸಿದ್ರು ಫೋಟೋಶೂಟ್‌!

'ನಾನು ವೃತ್ತಿ ಜೀವನದಲ್ಲಿ ಇಷ್ಟೊಂದು consistent ಅಗಿದ್ದೆ. ಅಂದ್ರೆ ಅದು ಅವರಿಂದಲೇ. ನಾನು ಒಬ್ಬಳೇ ಮಗಳು ಚಿಕ್ಕ ವಯಸ್ಸಿನಿಂದಲೂ ಅಪ್ಪ ಅಮ್ಮನೇ ನನ್ನ  ಬೆಸ್ಟ್‌ ಫ್ರೆಂಡ್ಸ್. ಸ್ಕೂಲ್‌ನಲ್ಲಿ ಇದ್ದಾಗ ಫ್ರೆಂಡ್ಸ್‌ ಇರೋರು. ಆದರೆ ಮನೆಗೆ ಬಂದಾಗ ನನಗೆ ಅವರೇ ಫ್ರೆಂಡ್ಸ್. ಅವರ ಜೊತೆ ಬಿಟ್ಟರೆ ನನಗೆ ಇನ್ನೊಂದು ಲೈಫ್‌ ಗೊತ್ತಿಲ್ಲ. ನಾನು ಯಾವತ್ತೂ ಪ್ರೊಡಕ್ಷನ್ ಗಾಡಿ ಬಳಸಿಲ್ಲ, ಎಷ್ಟೇ ದೂರದ ಊರು ಇದ್ದರೂ ಅಪ್ಪ ಡ್ರೈವ್ ಮಾಡುತ್ತಿದ್ದರು. ಅಮ್ಮ ಜೊತೆ ಸೆಟ್‌ನಲ್ಲಿ ಇರುತ್ತಿದ್ದರು. ನಾನು ಮೇಕಪ್ ಹಾಕಿದಾಗಲೆಲ್ಲಾ ನನ್ನ ತಂದೆ ತಪ್ಪದೇ 'My daughter is the best' ಎಂದು ಹೇಳುತ್ತಿದ್ದರು. ಇದರಿಂದ ದಿನೇ ದಿನೆ ನನ್ನ ವಿಶ್ವಾಸ ಜಾಸ್ತಿ ಆಗುತ್ತಿತ್ತು. ನನ್ನ ಕಾರ್ಯಕ್ರಮ ಏನೇ ಬರಲಿ, ಫಸ್ಟ್ ಅವರ ವಾಟ್ಸಪ್ ಸ್ಟೇಟಸ್‌ನಲ್ಲಿ, ಆಮೇಲೆ ಎಲ್ಲಾ ಸಂಬಂಧಿಕರಿಗೆ ಕಳುಹಿಸುತ್ತಿದ್ದರು. ಅದೂ ಸಾಲದು ಅಂತ ಕಾಲ್ ಮಾಡಿ ಹೇಳುತ್ತಿದ್ದರು. ಹರ್ಷಿ ಕಾರ್ಯಕ್ರಮ ಇದೆ ಜ್ಞಾಪಕ ಇದೆ ಅಲ್ವಾ ಅಂತ, ಕೇಳುತ್ತಿದ್ದರು. ಅವರೇ ನನ್ನ ಬಿಗ್ಗೆಸ್ಟ್ ಫ್ಯಾನ್. ಅವರೇ ನನ್ನ ಫಸ್ಟ್‌ ಫ್ಯಾನ್,' ಎಂದು ಹರ್ಷಿಕಾ ಮನಬಿಚ್ಚಿ ಮಾತನಾಡಿದ್ದಾರೆ.