'ಕಟ್ಟಿರುವ ಎರಡು ತಾಳಿ ತುಂಡು ಬಿಟ್ಟರೆ ಏನೂ ಕೊಟ್ಟಿಲ್ಲ'; ನಟಿ ಸುನೇತ್ರಾರ ಪಾದಪೂಜೆ ಮಾಡಿದ ಪತಿ ರಮೇಶ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ರಮೇಶ್ ಪಂಡಿತ್- ಸುನೇತ್ರಾ ವಿಡಿಯೋ. ಪಾದಪೂಜೆ ಬಗ್ಗೆ ಶುರುವಾಯ್ತು ಚರ್ಚೆ.....
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ 1 ರಿಯಾಲಿಟಿ ಶೋನಲ್ಲಿ ಪಾಪ ಪಾಂಡು ಖ್ಯಾತಿಯ ಸುನೇತ್ರಾ ಹಾಗೂ ಕಿರುತೆರೆ ಜನಪ್ರಿಯ ನಟ ರಮೇಶ್ ಪಂಡಿತ್ ಸ್ಪರ್ಧಿಸುತ್ತಿದ್ದಾರೆ. ಮೊದಲ ಎಪಿಸೋಡ್‌ನಲ್ಲೇ ಪವರ್ ಕಪಲ್ ಅನ್ನೋ ಕಿರೀಟ ಪಡೆದಿರುವ ಈ ಜೋಡಿಯ ಮತ್ತೊಂದು ಇಂಟ್ರೆಸ್ಟಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಿಂದ ಪತಿ ಪತ್ನಿಯ ಪಾದ ಪೂಜೆ ಮಾಡುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಶುರುವಾಗಿದೆ.
ವೀಕೆಂಡ್‌ನಲ್ಲಿ ಪ್ರಸಾರವಾಗಲಿರುವ ಎಪಿಸೋಡ್‌ನಲ್ಲಿ ಗಂಡಂದಿರು ಸ್ಪೆಷಲ್ ಥ್ಯಾಂಕ್ಸ್ ಹೇಳಬೇಕು. ಆದರೆ ರಮೇಶ್ ಪಂಡಿತ್ ಮಾತ್ರ ಎಲ್ಲರಂತೆ ಗಿಫ್ಟ್ ಕೊಡುವುದಕ್ಕಿಂತ ಹೆಚ್ಚಾಗಿದೆ ಪಾದಪೂಜೆ ಮಾಡಿ ಪತ್ನಿಯಿಂದ ಡಬಲ್ ಪ್ರೀತಿ ಮತ್ತು ಜನರ ಮೆಚ್ಚುಗೆ ಪಡೆದುಕೊಂಡರು. 'ತುಂಬಾ ಕನಸುಗಳನ್ನು ಕಟ್ಟಿಕೊಂಡಿರುವ ಹುಡುಗಿ ನೀನು. ಕಟ್ಟಿರುವ ತಾಳಿಯ ಎರಡು ತುಂಡು ಬಿಟ್ಟರೆ ನಿನಗೆ ನಾನು ಏನೋ ಕೊಟ್ಟಿಲ್ಲ. ನಿನಗೆ ಒಂದು ಕಾಣಿಕೆಯನ್ನು ಕೊಡುತ್ತೀನಿ' ಎಂದು ಹೇಳುತ್ತಾ ರಮೇಶ್ ಪಂಡಿತ್ ಪಾದ ಪೂಜೆ ಮಾಡುತ್ತಾರೆ.
ಮದುವೆ ನಂತರ ನಡೆಯಿತು ದೊಡ್ಡ ದುರಂತ; ಕಣ್ಣೀರಿಟ್ಟ ಕಿರುತೆರೆ ನಟಿ ಸುನೇತ್ರಾ
ರಮೇಶ್ ಪಂಡಿತ್ ಪಾದ ಪೂಜೆ ಮಾಡುವುದನ್ನು ನೋಡಿ ಎಲ್ಲರೂ ಶಾಕ್ ಅಗುತ್ತಾರೆ ಅದರಲ್ಲೂ ವಿಶೇಷ ಅತಿಥಿಯಾಗಿ ಅಗಮಿಸಿದ ವಿನೋದ್ ಪ್ರಭಾಕರ್ ಪತ್ನಿ 'ಹೆಂಡತಿ ಪಾದಪೂಜೆ ಮಾಡೋದು ಸುಲಭವಲ್ಲ. ನೀವು ನಿಜಕ್ಕೂ ಬೇರೆಯವರಿಗೆ ಸ್ಪೂರ್ತಿ ಆಗಿದ್ದೀರಿ' ಎಂದು ನಿಶಾ ಹೇಳಿದ್ದಾರೆ. 'ಇಲ್ಲಿ ನಾನು ಜೋಡಿಯಾಗಿ ಬರಬೇಕಿತ್ತು ಅನಿಸುತ್ತಿದೆ' ಎಂದು ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ಮದುವೆಯಲ್ಲಿ ನಡೆದ ಘಟನೆ:
ಇನ್ನು ಓಪನಿಂಗ್ ಎಪಿಸೋಡ್‌ನಲ್ಲಿ ಸುನೇತ್ರಾ ಕಣ್ಣೀರಿಟ್ಟಿದ್ದಾರೆ. 'ಬೆಂಗಳೂರಿನಲ್ಲಿ ಲೈವ್ ಎಡಿಟಿಂಗ್ ನಡೆದ ಮೊದಲ ಮದುವೆ ನಮ್ಮದು. ಆರತಕ್ಷತೆಯನ್ನು ವಿಭಿನ್ನವಾಗಿ ಮಾಡಬೇಕು ಎಂದು ಮದುವೆ ಮನೆಯ ಬಾಗಿನಿನಲ್ಲಿ ರಮೇಶ್ ಮತ್ತು ನಾನು ನಿಂತುಕೊಂಡು ಮಾತನಾಡಿಸುತ್ತಿದ್ವಿ ಅಲ್ಲಲ್ಲಿ ಡೇಬಲ್ ಹಾಕಿದ್ವಿ ನಾವು ಆ ಟೇಬಲ್ ಬಳಿ ಹೋಗಿ ಎಲ್ಲರನ್ನು ಮಾತನಾಡಿಸಿಕೊಂಡು ಫೋಟೋ ಕ್ಲಿಕ್ ಮಾಡಿಸಿಕೊಳ್ಳುತ್ತಿದ್ವಿ. ವಿಭಿನ್ನ ಶೈಲಿಯಲ್ಲಿ ನಡೆಯಿತ್ತು ಎಂದು ಜೀವನದಲ್ಲಿ ಈ ಘಟನೆ ಮರೆಯುವುದಿಲ್ಲ' ಎಂದು ಸುನೇತ್ರಾ ಮಾತನಾಡಿದ್ದಾರೆ.
ಒಂದೇ ಬ್ಲೌಸ್‌ಗೆ ಮೂರ್ನಾಲ್ಕು ಸೀರೆಯುಟ್ಟುಕೊಂಡಿದ್ದೆ, ಮೆಹೆಂದಿ ಇಲ್ಲವೇ ಇಲ್ಲ: ಪತಿ ಮಾಡಿದ ಅರ್ಜೆಂಟ್‌ಗೆ ಮಾಲತಿ ಬೇಸರ
'ಮದುವೆ ಫೋಟೋ ನೋಡಲು ಪ್ರತಿಯೊಬ್ಬರಿಗೂ ಕ್ಯೂರಿಯಾಸಿಟಿ ಮತ್ತು ಖುಷಿ ಇರುತ್ತದೆ ಆದರೆ ನಮ್ಮ ಮದುವೆ ಸಂಪೂರ್ಣ ಕವರೇಜ್ ಮಾಡಿದವರ ಫೋಟೋ ಸ್ಟುಡಿಯೋ ಸುಟ್ಟಿಹೋಗುತ್ತದೆ. ಏನೋ ಶಾರ್ಟ್ ಸರ್ಕ್ಯೂಟ್ ಆಗಿ ಇಡೀ ಸ್ಟುಡಿಯೋದಲ್ಲಿ ಸಂಪೂರ್ಣ ವಸ್ತು ಸುಟ್ಟಿದೆ. ನಮ್ಮ ಜೊತೆ ಬೇರೆ ಜೋಡಿಗಳ ಫೋಟೋ ಮತ್ತು ವಿಡಿಯೋ ಇಲ್ಲದಂತೆ ಆಗಿದೆ. ಮದುವೆಯಲ್ಲಿ ಯಾರೆಲ್ಲ ಇದ್ದರು ಅವರ ಬಾಯಿಂದ ನಮ್ಮ ಮದುವೆ ಹೇಗಿತ್ತು ಎಂದು ಕೇಳಬೇಕು ಏಕೆಂದರೆ ಒಂದು ಫೋಟೋ ಕೂಡ ಇಲ್ಲ. ಆದರೆ ನಮ್ಮ ಸ್ನೇಹಿತರು ರೀಲ್ ಕ್ಯಾಮೆರಾದಲ್ಲಿ ಕ್ಲಿಕ್ ಮಾಡಿದ ಒಂದೆರಡು ಫೋಟೋಗಳಿಗೆ ಅಷ್ಟೆ' ಎಂದು ಸುನೇತ್ರಾ ಕಣ್ಣೀರಿಟ್ಟಿದ್ದಾರೆ.