Asianet Suvarna News Asianet Suvarna News

ವಿದ್ಯಾಭರಣ್‌ ವಿರುದ್ಧ ಯುವತಿಯರ ಆರೋಪ; ವೈಷ್ಣವಿ ಬದುಕು ಉಳಿಸಲು ಮುಂದಾದ ಕಾಣದ ಕೈಗಳು?

ವಿವಾದಕ್ಕೆ ಗುರಿ ಆಯ್ತು ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ವಿಚಾರ. ವಿದ್ಯಾಭರಣ್‌ ಜೊತೆ ವೈರಲ್‌ ಆಗುತ್ತಿರುವ ವಿಡಿಯೋ ಯಾವುದು? 10 ದಿನಗಳ ಹಿಂದೆ ಏನಾಯ್ತು?
 

Actor Vidhay bharan clarifies about engagement with Vaishnavi and viral audio vcs
Author
First Published Nov 25, 2022, 9:48 AM IST

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ ನಂತರ ಆನ್‌ಸ್ಕ್ರೀನ್‌ನಿಂದ ಬ್ರೇಕ್‌ ತೆಗೆದುಕೊಂಡು ಪರ್ಸನಲ್ ಲೈಫ್‌ ಮೇಲೆ ಕೊಂಚ ಫೋಕಸ್‌ ಮಾಡುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಆಗುತ್ತಿದ್ದಂತೆ ಮತ್ತೊಮ್ಮೆ ಆಕ್ಟಿಂಗ್‌ಗೆ ಕಮ್ ಬ್ಯಾಕ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ನಡುವೆ ವೈಷ್ಣವಿ ಮದುವೆ ಯಾವಾಗ ಯಾವಾಗ ಅನ್ನೋ ಚರ್ಚೆ ಶುರುವಾಗಿತ್ತು, ಇದೇ ಸಮಯಕ್ಕೆ ಫೋಟೋ ಮತ್ತು ವಿಡಿಯೋವೊಂದು ವೈರಲ್ ಆಗುತ್ತಿದೆ. 

ಹೌದು! ಕಳೆದು ಎರಡು ಮೂರು ದಿನಗಳಿಂದ ವೈಷ್ಣವಿ ಗೌಡ ನಿಶ್ಚಿತಾರ್ಥದ ಫೋಟೋ ಎಲ್ಲೆಡೆ ವೈರಲ್ ಅಗುತ್ತಿದೆ. ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್‌ ಕುಟುಂಬಸ್ಥರು ಮನೆಯಲ್ಲಿ ಮಾಡಿಕೊಂಡಿರುವ ಸಣ್ಣ ಶುಭ ಕಾರ್ಯಕ್ರಮದ ವಿಡಿಯೋ. ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ 'ಇಲ್ಲ ನಿಶ್ಚಿತಾರ್ಥ ಆಗಿಲ್ಲ ಮಾತುಕತೆ ಮಾತ್ರ ಆಗಿರುವುದು ಇದೆಲ್ಲಾ ಸುಳ್ಳು ಏನೇ ಇದ್ದರು ನಾವೇ ಸ್ಪಷ್ಟನೆ ಕೊಡುತ್ತೇವೆ' ಎಂದು ವೈಷ್ಣವಿ ಮತ್ತು ವಿದ್ಯಾಭರಣ್ ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ. ನಿಶ್ಚಿತಾರ್ಥ ಅಂತ ಗೊತ್ತಾಗುತ್ತಿದ್ದಂತೆ ವಿದ್ಯಾಭರಣ್ ಮತ್ತೊಂದು ಮುಖವಾಡ ಬಯಲು ಮಾಡಲು ಯುವತಿಯರು ಮುಂದಾಗಿದ್ದಾರೆ. 

Actor Vidhay bharan clarifies about engagement with Vaishnavi and viral audio vcs

ಏನಿದು ಆಡಿಯೋ?

ವಿದ್ಯಾಭರಣ್ ಸರಿ ಇಲ್ಲ ಹುಡುಗಿಯರಿಗೆ ಮೋಸ ಮಾಡಿದ್ದಾನೆ ಅವರ ಕುಟುಂಬ ಸರಿ ಇಲ್ಲ ಹುಡುಗಿಯರನ್ನು ಪರಿಚಯ ಮಾಡಿಕೊಂಡು ಮನೆಗೆ ಕರೆದುಕೊಂಡು ಹೋಗಿ ಅವರನ್ನು ಸೊಸೆ ಸೊಸೆ ಎಂದು ಮೋಸ ಮಾಡುತ್ತಾರೆ. ಅದೆಷ್ಟೋ ಯುವತಿಯರಿಗೆ ಈ ರೀತಿ ಆಗಿದ ವೈಷ್ಣವಿಗೆ ಮೋಸ ಆಗಬಾರದು ಎಲ್ಲಾ ಸಾಕ್ಷಿಗಳನ್ನು ಹಿಡಿದುಕೊಂಡು ನಾವು ಮಾತನಾಡಬೇಕು ಅವನಿಗೆ ಹೇಳಬಾರದು ಎಂದು ಮಾತನಾಡಿರುವ ಫೋನ್ ಕಾಲ್ ವೈರಲ್ ಆಗುತ್ತಿದೆ. 

ವಿದ್ಯಾಭರಣ್ ಸ್ಪಷ್ಟನೆ:

ನಿಶ್ಚಿತಾರ್ಥ ಮತ್ತು ಯುವತಿಯರ ಆಡಿಯೋದ ಬಗ್ಗೆ ವಿದ್ಯಾಭರಣ್ ಕ್ಲಾರಿಟಿ ಕೊಟ್ಟಿದ್ದಾರೆ. 'ವೈಷ್ಣವಿ ಅವರ ಜೊತೆ ನನ್ನ ನಿಶ್ಚಿತಾರ್ಥ ಆಗಿಲ್ಲ. ನಿಶ್ಚಿತಾರ್ಥ ಅಂದ್ರೆ ಉಂಗುರ ಬದಲಾಯಿಸಿಕೊಳ್ಳುವುದು ಅಲ್ವಾ? ನಾವು ಹಾಗೆಲ್ಲ ಮಾಡಿಲ್ಲ ಒಂದು ವೇಳೆ ಆಗಿದ್ದರೆ ಹೇಳಿಕೊಳ್ಳುತ್ತೀವಿ ವೈಷ್ಣವಿ ಅವರು ಹೇಳಿಲ್ಲ ನಾನು ಹೇಳಿಲ್ಲ ಅಂದ್ಮೇಲೆ ಆಗಿಲ್ಲ ಅಂತ ಅರ್ಥ. ಎರಡು ಕುಟುಂಬದ ನಡುವೆ ಕೇವಲ ಮಾತುಕತೆಯಾಗಿ ಅಷ್ಟೆ. ಇದೆಲ್ಲಾ ಆಗಿ 10 ದಿನಗಳು ಕಳೆದಿದೆ. ನಾವಿಬ್ಬರೂ ಇನ್ನೂ ಮಾತನಾಡಿಲ್ಲ ಅರ್ಥ ಮಾಡಿಕೊಂಡಿಲ್ಲ. ಆದರೆ ಹೇಗೆ ಆ ಫೋಟೋ ವೈಲರ್ ಆಗಿದೆ ಅನ್ನೋದು ನನಗೆ ಗೊತ್ತಿಲ್ಲ' ಎಂದು ನಿಶ್ಚಿತಾರ್ಥದ ಬಗ್ಗೆ ವಿದ್ಯಾಭರಣ್ ಮಾತನಾಡಿದ್ದಾರೆ.

ವಿದ್ಯಾ ಭರಣ್ ಜೊತೆ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್; ಇಲ್ಲಿದೆ ಸಂಪೂರ್ಣ ವಿವರ

' ಮದುವೆ ವಿಚಾರ ಎಂದು ಗೊತ್ತಾಗುತ್ತಿದ್ದಂತೆ ನನ್ನ ಕುಟುಂಬದವರ ವರ್ಚಸ್‌ನ ಹಾಳು ಮಾಡಲು ಹಿತ ಶತ್ರುಗಳು ಮುಂದಾಗಿದ್ದಾರೆ. ನಾನು ಯಾವುದೇ ಹುಡುಗಿಯ ಜೊತೆ ತಪ್ಪಾಗಿ ನಡೆದುಕೊಂಡಿಲ್ಲ. ಈ ಹಿಂದೆ ನನಗೆ ಗರ್ಲ್‌ಫ್ರೆಂಡ್‌ ಇದ್ದಳು ಇದೆಲ್ಲಾ ನನ್ನ ಫ್ರೆಂಡ್ಸ್ ಸರ್ಕಲ್‌ಗೂ ಗೊತ್ತಿದೆ ಆದರೆ ಅವರೆಲ್ಲಾ ಇಷ್ಟು ಕೀಳಾಗಿ ಇಳಿಯುವುದಿಲ್ಲ. ಆರೋಪ ಮಾಡುತ್ತಿರುವ ಯುವತಿ ನೇರವಾಗಿ ಬಂದು ಆರೋಪ ಮಾಡಬೇಕು. ನನ್ನ ಮೊದಲ ಸಿನಿಮಾ ಬಂದಾಗಲೇ ಆರೋಪ ಮಾಡಬೇಕಿತ್ತು ಅವರಿಗೆ ಹೆಸರು ಹೇಳುವುದಕ್ಕೆ ಧೈರ್ಯವಿಲ್ಲ ಸುಮ್ಮನೆ ಅರೋಪ ಮಾಡುತ್ತಿದ್ದಾಳೆ ಹೀಗಾಗಿ ಈ ವಿಚಾರದ ಬಗ್ಗೆ ನಾಳೆ ಕಮಿಷನರ್‌ಗೆ ದೂರು ನೀಡುತ್ತೀನಿ. ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಬದಲು ಹೋಗಿ ದೂರು ನೀಡಬೇಕಿತ್ತು.' ಎಂದು ವಿದ್ಯಾಭರಣ್ ಹೇಳಿದ್ದಾರೆ.

'ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರೋ ಶತ್ರುಗಳು ಈ ರೀತಿ ಕೆಲಸ ಮಾಡುತ್ತಿದ್ದಾರೆ. ನನ್ನ ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿದ್ದೀನಿ ಅಂತಿದ್ದಾರೆ..ಇಲ್ಲ ನಾನು ಮಾಡಿಲ್ಲ ಅದು ಹ್ಯಾಕ್ ಆಗಿ ತುಂಬಾ ದಿನಗಳು ಆಗಿ ಡಿಲೀಟ್ ಆಗಿದೆ. ಒಬ್ಬರ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡಬೇಕು ನನ್ನ ರೀತಿ ಬೇರೆ ಯಾರಿಗೂ ಆಗಬಾರದು. ಇವತ್ತು ಬುದ್ಧಿ ಕಲಿಸಿಲ್ಲ ಅಂದ್ರೆ ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಮೋಸ ಮಾಡುತ್ತಾರೆ. ಇದೆಲ್ಲಾ ಕಾಮನ್‌ ಕಣೋ ಏನೂ ಅಗಲ್ಲ ನಾನಿದ್ದೀನಿ ಅಂತ ಅಪ್ಪ ಹೇಳಿದ್ದಾರೆ ಹೀಗಾಗಿ ಮಾಧ್ಯಮಗಳ ಮೂಲಕ ವೈಷ್ಣವಿ ಅವರಿಗೆ ಒಂದು ಮಾತು ಹೇಳುವುದಕ್ಕೆ ಇಷ್ಟ ಪಡುತ್ತೀನಿ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ನಾನು ಮುಂದೆ ಮದುವೆ ಆಗ್ತೀವೋ ಇಲ್ವೋ ಗೊತ್ತಿಲ್ಲ ...ಕಾಣದ ಹಿತ ಶತ್ರುಗಳು ಈ ರೀತಿ ಮಾಡಿದ್ದಾರೆ. ಇದರಿಂದ ಹೊರ ಬರುತ್ತೀನಿ' ಅಂದಿದ್ದಾರೆ ವಿದ್ಯಾಭರಣ್.

Follow Us:
Download App:
  • android
  • ios