ವಿದ್ಯಾ ಭರಣ್ ಜೊತೆ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್; ಇಲ್ಲಿದೆ ಸಂಪೂರ್ಣ ವಿವರ

ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ,  ಅಗ್ನಿಸಾಕ್ಷಿ ಸನ್ನಿಧಿ ಎಂದೇ ಖ್ಯಾತಿ ಗಳಿಸಿರುವ ವೈಷ್ಣವಿ ಗೌಡ ಹಸೆಮಣೆ ಏರಲು ಸಜ್ಜಾಗಿದ್ದಾರೆ. ನಿಶ್ಚಿತಾರ್ಥದ ಫೋಟೋ ವೈರಲ್ 

agnisakshi fame actress vaishnavi gowda engaged with Vidyabharan photo viral sgk

ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ,  ಅಗ್ನಿಸಾಕ್ಷಿ ಸನ್ನಿಧಿ ಎಂದೇ ಖ್ಯಾತಿ ಗಳಿಸಿರುವ ವೈಷ್ಣವಿ ಗೌಡ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದರು ವೈಷ್ಣವಿ ಗೌಡ. ಈ ಧಾರಾವಾಹಿ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು.  ಧಾರಾವಾಹಿ ಬಳಿಕ ವೈಷ್ಣವಿ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್ ಮನೆಯಲ್ಲಿ ಅದ್ಭುತ ಆಟವಾಡುವ ಮೂಲಕ ಎಲ್ಲರಿಗೂ ಇಷ್ಟವಾಗಿದ್ದರು. ಧಾರಾವಾಹಿ, ರಿಯಾಲಿಟಿ ಶೋ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ವೈಷ್ಣವಿ ಮಿಂಚಿದ್ದಾರೆ. ಇದೀಗ ಮದುವೆಯಾಗಲು ನಿರ್ಧರಿಸಿದ್ದು ಸದ್ಯ ವೈಷ್ಣವಿ ಅವರ ನಿಶ್ಚಿತಾರ್ಥದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 
ಅಂದಹಾಗೆ ವೈಷ್ಣವಿ ಗೌಡ  ವಿದ್ಯಾ ಭರಣ್ ಎನ್ನುವರ ಜೊತೆ ಹಸೆಮಣೆ ಏರುತ್ತಿದ್ದಾರೆ. ವಿದ್ಯಾ ಭರಣ್ ಮತ್ತು ವೈಷ್ಣವಿ ಇಬ್ಬರೂ ಮಾಲೆ ಹಾಕಿಕೊಂಡು ನಿಂತಿರುವ ಫೋಟೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ. ವೈಷ್ಣವಿ ಮತ್ತು ವಿದ್ಯಾ ಭರಣ್ ಜೋಡಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ವೈಷ್ಣವಿ ಎಂಗೇಜ್ಮೆಂಟ್ ಫೋಟೋದಲ್ಲಿ ಶಂಕರ್ ಬಿದಿರಿ ಕೂಡ ಇದ್ದಾರೆ. 

ಹುಡುಗ ಯಾರು?

ವೈಷ್ಣವಿ ಹಸೆಮಣೆ ಏರುತ್ತಿರುವ ಹುಡುಗ ವಿದ್ಯಾ ಭರಣ್. ಈಗಾಗಲೇ ಒಂದು ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆಗಿದ್ದ ವಿರಾಜ್ ಎನ್ನುವ ಸಿನಿಮಾದಲ್ಲಿ ವಿದ್ಯಾ ಭರಣ್ ನಟಿಸಿದ್ದರು. ಬೆಂಗಳೂರೂ ಮೂಲದ ಹುಡುಗ ವಿದ್ಯಾ ಭರಣ್ ಬಿಎಮ್‌ಎಸ್ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಇದೀಗ ವೈಷ್ಣವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

ಫಸ್ಟ್‌ ಟೈಂ ಪೀರಿಯಡ್ಸ್‌ ಆಗಿದ್ದು ಯಾವಾಗ, ಆ 16 ದಿನಗಳ ಬಗ್ಗೆ ರಿವೀಲ್ ಮಾಡಿದ ಬಿಗ್ ಬಾಸ್ ವೈಷ್ಣವಿ!

ಅಂದಹಾಗೆ ನಟಿ  ವೈಷ್ಣವಿ ಬಿಗ್ ಬಾಸ್‌ನಲ್ಲಿದ್ದಾಗ ಮದುವೆ ಬಗ್ಗೆ ಸಾಕಷ್ಟು ಮಾತನಾಡಿದ್ದರು. ತಮಗೆ ಮದುವೆ ಆಗಬೇಕು ಎನ್ನುವ ಆಸೆ ಇದೆ ಎಂದು ಅನೇಕ ಬಾರಿ ಹೇಳಿಕೊಂಡಿದ್ದರು. ಅಲ್ಲದೆ ಕಳೆದ ಬಾರಿ ಬಿಗ್ ಬಾಸ್‌ನಲ್ಲಿ ಮುಂದಿನ ವರ್ಷ ಮದುವೆಯಾಗುವುದಾಗಿ ಹೇಳಿದ್ದರು. ಅದರಂತೆ ಈಗ ಬಿಗ್ ಬಾಸ್ ಮುಗಿಸಿ ಹೊರಬಂದು ಒಂದು ವರ್ಷದ ನಂತರ ಮದುವೆ ಆಗುತ್ತಿದ್ದಾರೆ. 

ಹೊಸ ಮನೆ ಖರೀದಿಸಿದ ನಟಿ ವೈಷ್ಣವಿ; ಗೃಹಪ್ರವೇಶ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು

ಇನ್ನು ಧಾರಾವಾಹಿ ಬಗ್ಗೆ ಹೇಳುವುದಾದರೆ ಅಗ್ನಿಸಾಕ್ಷಿ ಸೀರಿಯಲ್ ಬಳಿಕ ವೈಷ್ಣವಿ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಇತ್ತೀಚಿಗಷ್ಟೆ ಲಕ್ಷಣ ಧಾರಾವಾಹಿ ಮೂಲಕ ಒಂದು ಸಂಚಿಕೆಯಲ್ಲಿ ಮಿಂಚಿದ್ದರು. ವೈಷ್ಣವಿ ಮತ್ತೆ ಬಣ್ಣದ ಲೋಕಕ್ಕೆ ವಾಪಾಸ್ ಆಗುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹೊಸ ಧರಾವಾಹಿ ಮೂಲಕ ವೈಷ್ಣವಿ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ನಿಶ್ಚಿತಾರ್ಥದ ಫೋಟೋ ವೈರಲ್ ಆಗಿದ್ದು ಅಚ್ಚರಿ ಮೂಡಿಸಿದೆ. ಮದುವೆ ಮತ್ತು ಧಾರಾವಾಹಿಗೆ ರೀ ಎಂಟ್ರಿ ಕೊಡುವ ಬಗ್ಗೆ ಸ್ವತಃ ವೈಷ್ಣವಿ ಅವರೇ ಪ್ರತಿಕ್ರಿಯೆ ನೀಡಬೇಕಿದೆ. 

 

Latest Videos
Follow Us:
Download App:
  • android
  • ios