Bigg Boss OTT; ಬಿಗ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿ
ಬಿಗ್ ಬಾಸ್ ಒಟಿಟಿ ಕನ್ನಡ ರಿಯಾಲಿಟಿ ಶೋ ಆಗಸ್ಟ್ 6 ರಂದು ಅದ್ದೂರಿಯಾಗಿ ಆರಂಭವಾಗಿದೆ. ಈಗಾಗಲೇ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.ಕಿಚ್ಚನ ಜೊತೆ ಗಾಯಕ, ಮಾಜಿ ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆ ಹೇಗಿರಲಿದೆ, ಏನೆಲ್ಲ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು.ಇದೀಗ ಕಿಚ್ಚ ಬಿಗ್ ಬಾಸ್ ಮನೆ ಪರಿಚಯ ಮಾಡಿಕೊಡುವ ಮೂಲಕ ಅಭಿಮಾನಿಗಳ ಕತೂಹಲಕ್ಕೆ ತೆರೆ ಎಳೆದರು.
ನಮ್ರತಾ ಗೌಡ
ಈಗಾಗಲೇ ಸಂಭಾವ್ಯರ ಪಟ್ಟಿ ವೈರಲ್ ಆಗಿದೆ. ಅನೇಕ ಸೆಲೆಬ್ರಿಟಿಗಳ ಹೆಸರು ಕೇಳಿಬರುತ್ತಿದೆ. ಈ ಪಟ್ಟಿಯಲ್ಲಿ ಕಿರುತೆರೆ ನಟಿ ನಮ್ರತಾ ಗೌಡ ಹೆಸರು ಸಹ ಕೇಳಿಬರುತ್ತಿದೆ. ಪುಟ್ಟಗೌರಿ ಮದುವೆ, ನಾಗಿಣಿ -2 ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿರುವ ನಮ್ರತಾ ಗೌಡ ಇದೀಗ ಬಿಗ್ ಬಾಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಕಾಪಿನಾಡು ಚಂದು
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಕಾಪಿನಾಡು ಚಂದು ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಾನು ಶಿವಣ್ಣ-ಪುನೀತಣ್ಣನ ಅಭಿಮಾನಿ ಎಂದು ವಿಡಿಯೋ ಮೂಲಕ ಬರ್ತಡೇ ವಿಶ್ ಮಾಡುವ ಕಾಪಿನಾಡ ಚಂದು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಚಂದು ಕೂಡ ಬಿಗ್ ಮನೆಗೆಎಂಟ್ರಿ ಕೊಡುವ ಸಾಧ್ಯತೆ ಇದೆ.
ಮಿಮಿಕ್ರಿ ಗೋಪಿ
ಕನ್ನಡ ಚಲನಚಿತ್ರಗಳಲ್ಲಿ ಹಾಸ್ಯಮಯ ಮತ್ತು ಪೋಷಕ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಮಿಮಿಕ್ರಿ ಗೋಪಿ ಅವರ ಹೆಸರು ಸಹ ಬಿಗ್ ಬಾಸ್ ಒಟಿಟಿಗೆ ಕೇಳಿಬರುತ್ತಿದೆ. ಈ ಬಾರಿ ಬಿಗ್ ಮನೆಯಲ್ಲಿ ಮಿಮಿಕ್ರಿ ಗೋಪಿ ಇರ್ತಾರಾ ಎನ್ನುವ ಕುತೂಹಲಕ್ಕೆ ಇಂದು ಸಂಜೆ ತೆರೆಬೀಳಲಿದೆ.
ನಟಿ ರೇಖಾ
ಈ ಬಹುಭಾಷಾ ನಟಿ ರೇಖಾ ಈ ಬಾರಿಯ ಬಿಗ್ ಬಾಸ್ ಕನ್ನಡ OTTಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸದ್ಯ ವೈರಲ್ ಆಗಿರುವ ಸಂಭಾವ್ಯ ಸ್ಪರ್ಧಿಗಳಲ್ಲಿ ರೇಖಾ ಹೆಸರು ಸಹ ಬಲವಾಗಿ ಕೇಳಿಬರುತ್ತಿದೆ.
ಗಾಯಕಿ ಆಶಾ ಭಟ್
ಸ ರಿ ಗ ಮ ಪ ಖ್ಯಾತಿಯ ಗಾಯಕಿ ಆಶಾ ಭಟ್ ಬಿಗ್ ಬಾಸ್ OTTಯ ಬಹುನಿರೀಕ್ಷಿತ ಸ್ಪರ್ಧಿಗಳಲ್ಲಿ ಒಬ್ಬರಾಗಿ ಎನ್ನುವ ಸುದ್ದಿ ವೈರಲ್ ಆಗಿದೆ.ಈಗಾಗಲೇ ತನ್ನ ಅದ್ಭುತ ಗಾಯನದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿರುವ ಆಶಾ ಭಟ್ಟ ಇದೀಗ ಬಿಗ್ ಬಾಸ್2ಗೆ ಎಂಟ್ರಿ ಕೊಟ್ಟು ಮತ್ತಷ್ಟು ರಂಜಿಸುತ್ತಾರಾ ಎಂದುಕಾದುನೋಡಬೇಕು.
ಸಾನ್ಯಾ ಅಯ್ಯರ್
ಪುಟ್ಟಗೌರಿ ಮದುವೆ ಖ್ಯಾತಿಯ ನಟಿ ಸಾನ್ಯಾ ಅಯ್ಯರ್ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಡ್ಯಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದ ಸಾನ್ಯಾ ಇದೀಗ ಬಿಗ್ ಬಾಸ್ ಬರ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಭೂಮಿಕಾ
ಸಾಮಾಜಿಕ ಮಾಧ್ಯಮ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಭೂಮಿಕಾ ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. 797k ಫಾಲೋವರ್ಸ್ ಹೊಂದಿರುವ ಇಂಟರ್ ನೆಟ್ ಸೆನ್ಸೇಷನ್ ಭೂಮಿಕಾ ಬಿಗ್ ಬಾಸ್ ಒಟಿಟಿ ಮೂಲಕ ಅಭಿಮಾನಿಗಳನ್ನು ರಂಜಿಸುತ್ತರಾ ಎಂದು ಕಾದುನೋಡಬೇಕು.
ನವೀನ್ ಕೃಷ್ಣ
ನಟ, ನಿರ್ದೇಶಕ ನವೀನ್ ಕೃಷ್ಣ ಈ ಬಾರಿಯ ಬಿಗ್ ಬಾಸ್ ಒಟಿಟಿಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ನವೀನ್ ಕೃಷ್ಣ ಹೆಸರು ಸಹ ಸದ್ಯ ವೈರಲ್ ಆಗುತ್ತಿರುವ ಸಂಭಾವ್ಯ ಪಟ್ಟಿಯಲ್ಲಿದೆ. ಆದರೆ ಈ ಬಗ್ಗೆ ನವೀನ್ ಕೃಷ್ಣ ಯಾವುದೇ ಮಾಹಿತಿ ರಿವೀಲ ಮಾಡಿಲ್ಲ.
ತರುಣ್ ಚಂದ್ರ
ಇನ್ನು ಬಿಗ್ ಬಾಸ್ ನಲ್ಲಿ ನಟ ತರುಣ್ ಚಂದ್ರ ಕೂಡ ಇರಲಿದ್ದಾರೆ. ತರುಣ್ ಹೆಸರು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಯಾವುದೆ ಖಚಿತ ಮಾಹಿತಿ ತರುಣ್ ಕಡೆಯಿಂದ ಬಹಿರಂಗವಾಗಿಲ್ಲ.
ಸೋಮಣ್ಣ ಮಾಚಿಮಾಡ
ಸಿನಿಮಾ, ಧಾರಾವಾಹಿ ಸೆಲೆಬ್ರಿಟಿಗಳು ಮಾತ್ರವಲ್ಲದೇ ಪತ್ರಕರ್ತರು ಸಹ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಪತ್ರಕರ್ತ ಸೋಮಣ್ಣ ಮಾಚಿಮಾಡ ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ಳಿಲಿದ್ದಾರೆ ಎನ್ನಲಾಗಿದೆ.