ದುಲ್ಕರ್ ಭಾಸ್ಕರ್, ಮೀನಾಕ್ಷಿ ಚೌಧರಿ ನಟನೆಯ ʼಲಕ್ಕಿ ಬಾಸ್ಕರ್ʼ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಯಾವಾಗ?
ಕೆಟ್ಟ ಸಂದೇಶ ನೀಡಿದ್ದರೂ ಕೂಡ ಸಿನಿಮಾ ಭಾಷೆಯಲ್ಲಿ ಒಳ್ಳೆಯ ಚಿತ್ರ ಎಂದು ಹೆಸರು ಪಡೆದಿರುವ ದುಲ್ಕರ್ ಸಲ್ಮಾನ್ ನಟನೆಯ ʼಲಕ್ಕಿ ಬಾಸ್ಕರ್ʼ ಸಿನಿಮಾ ಟಿವಿಯಲ್ಲಿ ಪ್ರಸಾರ ಆಗ್ತಿದೆ. ಚಿತ್ರಮಂದಿರದಲ್ಲಿ 107 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಈ ಚಿತ್ರ ಟಿವಿ ಪರದೆ ಮೇಲೆ ಕಾಣಿಸಲಿದೆ.
ಯಾವಾಗ ಪ್ರಸಾರ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಫೆಬ್ರವರಿ 23ರಂದು, ಸಂಜೆ 6 ಗಂಟೆಗೆ, ಭಾನುವಾರ ಈ ಸಿನಿಮಾ ಪ್ರಸಾರ ಆಗಲಿದೆ.
ತಾರಾಗಣದಲ್ಲಿ ಯಾರಿದ್ದಾರೆ?
ಪೀರಿಯಡ್ ಕ್ರೈಂ ಡ್ರಾಮಾ ಸಿನಿಮಾಕ್ಕೆ ವೆಂಕಿ ಅಟ್ಲುರಿ ಅವರು ನಿರ್ದೇಶನ ಮಾಡಿದ್ದರು. ಮೀನಾಕ್ಷಿ ಚೌಧರಿ, ಪಿ ಸಾಯಿಕುಮಾರ್, ರಘು ಬಾಬು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 2023ರಲ್ಲಿ ಈ ಚಿತ್ರ ಘೋಷಣೆಯಾಗಿತ್ತು. 2024 ಅಕ್ಟೋಬರ್ 31ರಂದು ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಜಿವಿ ಪ್ರಕಾಶ್ ಕುಮಾರ್ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ನೀಡಿದ್ದರು.
ಸೀತಾ ರಾಮಂ - ಹಾಯ್ ನನ್ನವರೆಗೆ ಎಂಥಾ ಪಾತ್ರಕ್ಕಾದರೂ ಸೈ ಈ ಮೃಣಾಲ್ ಠಾಕೂರ್!
ಈ ಸಿನಿಮಾ ಕಥೆ ಏನು?
ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಭಾಸ್ಕರ್‌ಗೆ ಕಡುಬಡತನ. ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಕೂಡ ಅವನಿಗೆ ಹೆಚ್ಚಿನ ಹಣ ಸಿಗೋದಿಲ್ಲ, ಪ್ರಮೋಶನ್ ಕೂಡ ಆಗೋದಿಲ್ಲ. ಹೀಗಾಗಿ ಇವನು ಅಡ್ಡದಾರಿ ಹಿಡಿಯುತ್ತಾನೆ. ಆನಂತರ ಅಧಿಕಾರಿಗಳಿಗೆ ಹೇಗೆ ಮಣ್ಣು ಮುಕ್ಕಿಸುತ್ತಾನೆ ಎನ್ನೋದು ಈ ಸಿನಿಮಾದಲ್ಲಿದೆ. ಈ ಸಿನಿಮಾ ಆರಂಭ ಆದಾಗಿನಿಂದ ಮುಗಿಯುವವರೆಗೂ ವೀಕ್ಷಕರನ್ನು ತುತ್ತತುದಿಯಲ್ಲಿ ಕೂರಿಸುವುದು.
ವಿರೋಧ ಯಾಕೆ?
‘ಲಕ್ಕಿ ಬಾಸ್ಕರ್’ ಸಿನಿಮಾ ಕಂಟೆಂಟ್ ಬಗ್ಗೆ ಒಂದಷ್ಟು ಆಕ್ಷೇಪಗಳಿವೆ. ಈ ಸಿನಿಮಾ ಅಡ್ಡದಾರಿಯನ್ನು ಪ್ರಚೋದಿಸುತ್ತದೆ. ಅಡ್ಡದಾರಿ ಹಿಡಿದ ಹೀರೋ ಆನಂತರ ಯಶಸ್ಸು ಪಡೆಯುತ್ತಾನೆ, ವಿದೇಶಕ್ಕೆ ಹೋಗಿ ಸೆಟಲ್ ಆಗುತ್ತಾನೆ ಎನ್ನುವ ಕಥೆ ಈ ಸಿನಿಮಾದಲ್ಲಿದೆ. ಬಹಳ ಸರಳವಾಗಿ ಕಂಟೆಂಟ್ ಮೂಲಕ ಜನರ ಮನಸ್ಸು ಗೆದ್ದ ಕಥೆ ಈ ಚಿತ್ರದಲ್ಲಿದೆ.
ನೆಗೆಟಿವ್ ವಿಮರ್ಶೆಗಳ ಕಾರಣದಿಂದ Dulquer Salmaan ಸಿನಿಮಾ ಬಿಡ್ತಾರಾ?
ಹವಾಲ ದಂಧೆ
1991ರ ಹವಾಲಾ ಹಗರಣವನ್ನು ಈ ಸಿನಿಮಾದಲ್ಲಿ ಬಳಸಿಕೊಂಡಂತಿದೆ. ಮುಕ್ಕಾಲು ಭಾಗ ಬ್ಯಾಂಕ್‌ಗಳು ಈ ಹವಾಲ ದಂಧೆಗೆ ಬೇನಾಮಿಯಾಗಿ ದುಡ್ಡು ಕೊಡುತ್ತವೆ. ಪ್ರತಿ ದೃಶ್ಯವನ್ನು ತುಂಬ ಕುತೂಹಲಭರಿತವಾಗಿ ಕಟ್ಟಿಕೊಡಲಾಗಿದೆ. ವೀಕ್ಷಕರು ಈ ಸಿನಿಮಾವನ್ನು ನೋಡಿ ಅಲ್ಲಿಯೇ ಬಿಟ್ಟು ಬರಬೇಕು ಅಷ್ಟೇ. ಈ ಚಿತ್ರದಲ್ಲಿ ಹೀರೋ ಕಾನೂನಿನ ಕಣ್ಣಿನಿಂದ ಪಾರಾಗುತ್ತಾನೆ, ಆದರೆ ಮನಸ್ಸಾಕ್ಷಿ ಬಗ್ಗೆ ಯೋಚನೆ ಮಾಡೋದಿಲ್ಲ.
ಎಂಥದಾ ... ಮಕ್ಳಾ ಶೂಟ್ ಮಾಡ್ಬೇಕಾ? ರಕ್ಷಿತ್ ಶೆಟ್ಟಿ ಡೈಲಾಗ್ನ ಅವ್ರಿಗೇ ತಿರುಗಿಸಿ ಹೇಳಿದ್ರಪ್ಪಾ ಸಾಯಿ ಪಲ್ಲವಿ!
ವೀಕ್ಷಕರು ಅಪ್ಪಿಕೊಂಡ್ರು!
ದುಲ್ಕರ್ ಸಲ್ಮಾನ್ ಅವರು ಅಕ್ಷರಶಃ ಭಾಸ್ಕರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ನಟಿಸಿದರೆ ವೀಕ್ಷಕರು ಒಪ್ಪಿಕೊಳ್ತಾರೋ ಇಲ್ಲವೋ ಎಂದು ಮೀನಾಕ್ಷಿ ಚೌಧರಿಗೆ ಸಂದೇಹ ಬಂದಿತ್ತಂತೆ. ಆದರೆ ಈ ಸಿನಿಮಾವನ್ನು ವೀಕ್ಷಕರು ಒಪ್ಪಿಕೊಂಡು, ಅಪ್ಪಿಕೊಂಡಿರೋದಂತೂ ಸತ್ಯ. ಒಟಿಟಿಯಲ್ಲಿಯೂ ಕೂಡ ಈ ಸಿನಿಮಾದ ವೀಕ್ಷಣೆ ಆಗಿದೆ.
