Asianet Suvarna News Asianet Suvarna News

ಎಂಥದಾ ... ಮಕ್ಳಾ ಶೂಟ್ ಮಾಡ್ಬೇಕಾ? ರಕ್ಷಿತ್ ಶೆಟ್ಟಿ ಡೈಲಾಗ್ನ ಅವ್ರಿಗೇ ತಿರುಗಿಸಿ ಹೇಳಿದ್ರಪ್ಪಾ ಸಾಯಿ ಪಲ್ಲವಿ!

ರಕ್ಷಿತ್ ಶೆಟ್ಟಿ ಸಾಯಿ ಪಲ್ಲವಿ ನಟನೆಯ 'ಗಾರ್ಗಿ' ಸಿನಿಮಾವನ್ನು ಕನ್ನಡದಲ್ಲಿ ಪ್ರೆಸೆಂಟ್ ಮಾಡ್ತಿರೋ ವಿಷ್ಯ ಎಲ್ರಿಗೂ ಗೊತ್ತು. ಆದರೆ ಸಾಯಿ ಪಲ್ಲವಿ ರಕ್ಷಿತ್ ಶೆಟ್ಟಿ ಡೈಲಾಗ್‌ನ್ನ ಅವ್ರಿಗೇ ತಿರುಗಿಸಿ ಹೇಳಿದ ಕತೆ ಗೊತ್ತಾ? ಅದೂ ರಕ್ಷಿತ್ ಫೇಮಸ್ ಡೈಲಾಗ್, 'ಎಂಥದಾ ... ಮಕ್ಳಾ, ಶೂಟ್ ಮಾಡ್ಬೇಕಾ?' ಅನ್ನೋದನ್ನು. ಅಷ್ಟಕ್ಕೂ ಇದರ ಹಿನ್ನೆಲೆ ಏನು?

Sai Pallavi's bold dailogue with Rakshith Shetty
Author
Bengaluru, First Published Jul 14, 2022, 6:38 PM IST

ಸಾಯಿ ಪಲ್ಲವಿ ಮತ್ತು ರಕ್ಷಿತ್ ಶೆಟ್ಟಿ ನಡುವೆ ರ್ಯಾಪೋ ಚೆನ್ನಾಗಿದೆ. ಇಬ್ಬರೂ ನೇಟಿವಿಟಿಯನ್ನು ಇಷ್ಟ ಪಡುವ, ಸಿಂಪಲ್ ಆಗಿದ್ದೇ ತಮ್ಮ ಪ್ರತಿಭೆ, ಕ್ರಿಯೇಟಿವಿಟಿ ಮೂಲಕ ಜನರಿಗೆ ಹತ್ತಿರವಾದವರು. 'ಸಿಂಪಾಲ್ಲಾಗೊಂದು ಲವ್ ಸ್ಟೋರಿ' ಸಿನಿಮಾ ಮೂಲಕ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ರಕ್ಷಿತ್ ಸಿಂಪಲ್ ಸ್ಟಾರ್ ಅಂತಲೇ ಫೇಮಸ್. ಸಾಯಿ ಪಲ್ಲವಿ ಅವರಂತೂ ಈ ಟೈಟಲ್ ಇಲ್ಲದಿದ್ದರೂ ತಮ್ಮ ಅಪೀಯರೆನ್ಸ್ ನಲ್ಲೇ ಸಿಂಪ್ಲಿಸಿಟಿಯನ್ನು ತಂದು ಆ ಮೂಲಕ ಜನರಿಗೆ ಅಚ್ಚು ಮೆಚ್ಚಿನವರಾದವರು. ಇದೀಗ ರಕ್ಷಿತ್ ಶೆಟ್ಟಿ ಸಾಯಿ ಪಲ್ಲವಿ ನಟನೆಯ 'ಗಾರ್ಗಿ' ಸಿನಿಮಾವನ್ನು ಕನ್ನಡದಲ್ಲಿ ಪ್ರಸೆಂಟ್ ಮಾಡ್ತಿರೋದು ಎಲ್ರಿಗೂ ಗೊತ್ತು. ಇದಕ್ಕೆ ಕಾರಣ ಗಾರ್ಗಿ ನಿರ್ದೇಶಕ ಗೌತಮ್ ಚಂದ್ರನ್. ಅವ್ರು ರಕ್ಷಿತ್ ಶೆಟ್ಟಿ ಬೆಸ್ಟ್ ಫ್ರೆಂಡ್. ಎಷ್ಟೋ ವರ್ಷಗಳಿಂದ ಗೆಳೆಯರಾಗಿರುವ ಗೌತಮ್ ಅವರ ಕಷ್ಟಗಳನ್ನು ನಾನು ಕಣ್ಣಾರೆ ಕಂಡಿದ್ದೀನಿ ಅಂತ ಇತ್ತೀಚೆಗೆ ರಕ್ಷಿತ್ ಶೆಟ್ಟಿ ಹೇಳ್ಕೊಂಡಿದ್ರು. ಇದೀಗ ಒಂದು ವೇದಿಕೆಯಲ್ಲಿ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ, ಗೌತಮ್ ಚಂದ್ರನ್ ಕಾಣಿಸಿಕೊಂಡಿದ್ದಾರೆ. ಅಲ್ಲಿ ರಕ್ಷಿತ್ ಶೆಟ್ಟಿ ಅವರ ಫೇಮಸ್ ಡೈಲಾಗ್‌ನ ಅವ್ರಿಗೇ ತಿರುಗಿಸಿ ಹೇಳಿ ಬೆಚ್ಚಿ ಬೀಳಿಸಿದ್ದಾರೆ ಸಾಯಿ ಪಲ್ಲವಿ.

ಸಾಯಿ ಪಲ್ಲವಿ ಅವರದೊಂದು ವಿಶೇಷ ಗುಣವಿದೆ. ಅವರು ಯಾವ ಭಾಷೆ(Language)ಯಲ್ಲಿ ನಟಿಸುತ್ತಾರೋ ಆ ಭಾಷೆಯವರೇ ಆಗಿ ಬಿಡುವಷ್ಟು ತೀವ್ರವಾಗಿ ನಟಿಸುತ್ತಾರೆ. ಸಾಯಿ ಪಲ್ಲವಿ ಹುಟ್ಟಿದ್ದು ತಮಿಳ್ನಾಡಿನಲ್ಲಿ. ಸಾಯಿ ಪಲ್ಲವಿ ಸೆಂತಮರೈ ಕಣ್ಣನ್ ಅನ್ನೋದು ಅವರ ಮೂಲ ನಾಮಧೇಯ. ಅವರು ಜಾರ್ಜಿಯಾದಲ್ಲಿ ಮೆಡಿಕಲ್(Medical) ಓದುತ್ತಿದ್ದಾಗಲೇ ಪ್ರೇಮಂ ಅನ್ನೋ ಮಲೆಯಾಳಂ ಸಿನಿಮಾದಲ್ಲಿ ನಟಿಸುತ್ತಾರೆ. ಈ ಸಿನಿಮಾ(Cinema) ನೋಡಿದವರು ಇದರಲ್ಲಿ ಬರುವ ಉಳಿದಿಬ್ಬರು ಹೀರೋಯಿನ್ ಗಳನ್ನು ಬಿಟ್ಟು ಮಲಾರ್ ಅನ್ನೋ ಸೊಗಸಾದ ಹೆಸರಿನ ಇವರ ಪಾತ್ರವನ್ನೇ ಆರಾಧಿಸುತ್ತಾರೆ. ಇವರು ಮಲಯಾಳಿ ಹುಡುಗಿನೇ ಅಂತಲೇ ಎಲ್ಲರೂ ಅಂದುಕೊಳ್ತಾರೆ. ಮುಂದೆ ತಮಿಳು ಸಿನಿಮಾಗಳಲ್ಲಿ ಮಾಡುವಾಗ ಈ ಹುಡುಗಿ ನಮ್ಮವಳು ಅಂತ ಅಲ್ಲಿನವರು ಹೇಳ್ತಾರೆ. ತೆಲುಗು ಸಿನಿಮಾದಲ್ಲಿ ಈಕೆಯ ನಟನೆ ನೋಡಿದವರು ಈ ಹುಡುಗಿ ತೆಲುಗಿನವಳಲ್ಲ ಅಂತ ಹೇಳಲಿಲ್ಲ. ಇದೀಗ ಕನ್ನಡದ ಸರದಿ. ಈ ಭಾಷೆಗೆ ಡಬ್ಬಿಂಗ್(Dubbing) ಮಾಡ್ಬೇಕು ಅಂತಲೇ ಕನ್ನಡ ಕಲಿತು ಅದರಲ್ಲಿ ಡೈಲಾಗ(Dialogue)ನ್ನೂ ಹೇಳಿ 'ಅಬ್ಬಾ ಸಾಯಿ ಪಲ್ಲವಿ ಅದೆಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರೆ' ಅಂತ ಕನ್ನಡಿಗರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋ ಹಾಗೆ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ (Release)ಆಗಿರೋ ಗಾರ್ಗಿ ಟ್ರೇಲರ್(Trailer) ಆ ಲೆವೆಲ್‌ಗೆ ಸದ್ದು ಮಾಡಿದೆ.

ಅಷ್ಟೇ ಆದ್ರೆ ಪರ್ವಾಗಿಲ್ಲ, ಇದೀಗ ರಕ್ಷಿತ್ ಅಂತಾ ರಕ್ಷಿತ್ ಶೆಟ್ಟಿಗೇ ಸಾಯಿ ಪಲ್ಲವಿ ಶಾಕ್(Shock) ಕೊಟ್ಟಿದ್ದಾರೆ. 'ಎಂಥದ್ದಾ ಬೋಳಿ ಮಕ್ಳಾ, ಶೂಟ್ ಮಾಡ್ಬೇಕಾ?' ಅನ್ನೋ ರಕ್ಷಿತ್ ಶೆಟ್ಟಿ ಫೇಮಸ್ ಡೈಲಾಗ್‌ ಅನ್ನ ಅವ್ರಿಗೇ ತಿರುಗಿಸಿ ಹೇಳಿದ್ದಾರೆ. ಅಯ್ಯಬ್ಬಾ ಹುಡುಗಿಯೇ ಅಂತ ಜನರೂ ಶಾಕ್ ಆಗಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ, ಗಾರ್ಗಿ ನಿರ್ದೇಶಕ ಗೌತಮ್ ಮೂರೂ ಜನ ಇದ್ರು. ಅಲ್ಲಿ ರಕ್ಷಿತ್ ಶೆಟ್ಟಿ ಆಕ್ಷನ್ ಅಂದ ಕೂಡಲೇ ಸಾಯಿ ಪಲ್ಲವಿ ಹೇಳಿದ ಈ ಡೈಲಾಗ್‌ ಕೇಳಿ ಒಮ್ಮೆ ಬೆಚ್ಚಿ ಆಮೇಲೆ ಬಿದ್ದೂ ಬಿದ್ದೂ ನಕ್ಕಿದ್ದಾರೆ.

ಇದನ್ನೂ ಓದಿ: ವಿಕ್ರಾಂತ್‌ ರೋಣ ಮಲಯಾಳಂ ವಿತರಣೆ ಹಕ್ಕು ಪಡೆದ ದುಲ್ಕರ್‌ ಸಲ್ಮಾನ್‌

ಈ ನಡುವೆ ಆಂಕರ್, 'ರಕ್ಷಿತ್ ಅವ್ರೇ ನೀವು ಈ ಸಿನಿಮಾವನ್ನು ಕನ್ನಡದಲ್ಲಿ ಪ್ರೆಸೆಂಟ್(Present) ಮಾಡ್ತಿರೋದು ಗಾರ್ಗಿ ಕಥೆ ಕೇಳಿಯಾ ಅಥವಾ ಸಾಯಿ ಪಲ್ಲವಿ ಅವ್ರಿಗಾಗಿಯಾ?' ಅಂತ ಕೇಳಿದಾಗ ರಕ್ಷಿತ್ ಮುಖ ಎಲ್ಲ ಕೆಂಪು ಮಾಡ್ಕೊಂಡು ನಾಚ್ಕೊಂಡಿದ್ದು ಮತ್ತೊಂದು ಮಜಾ. ಹಿಂದೆ ಒಂದು ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಮಾಜಿ ಗೆಳತಿ ರಶ್ಮಿಕಾ ಮಂದಣ್ಣ ಮತ್ತು ಸಾಯಿ ಪಲ್ಲವಿ ಸ್ಟೇಜ್ ಶೇರ್ ಮಾಡಿಕೊಂಡಿದ್ದರು. ರಶ್ಮಿಕಾ ಬಂದಾಗ ಏನೂ ರೆಸ್ಪಾನ್ಸ್ ಮಾಡದ ಜನ, ಸಾಯಿ ಪಲ್ಲವಿ ಬಂದ ಕೂಡಲೇ ಮಾಡಿದ ಎಷ್ಟು ಜೋರಾಗಿ ಕ್ಲಾಪ್ ಮಾಡಿ ಕಿರುಚಿಕೊಂಡರು ಅಂದ್ರೆ ಸಾಯಿ ಪಲ್ಲವಿ ಅವರಿಗಿರೋ ಜನಪ್ರಿಯತೆಯನ್ನು ಅದು ಸಾಬೀತು ಮಾಡೋ ಹಾಗಿತ್ತು. ಅಂಥಾ ಹುಡುಗಿ ಈಗ ರಕ್ಷಿತ್ ಡೈಲಾಗ್‌ ಹೇಳಿದ್ದಾರೆ. ಮತ್ತು ರಕ್ಷಿತ್ ನಾಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡಬೇಕೆಂದ ಸಾರಾ; ಅರ್ಜುನ್ ರೆಡ್ಡಿ ಸ್ಟಾರ್ ರಿಯಾಕ್ಷನ್ ಹೀಗಿತ್ತು

Follow Us:
Download App:
  • android
  • ios