ಸೀರಿಯಲ್‌ ಎಂದಕೂಡಲೇ ಮೂಗು ಮುರಿಯುವವರು ಇದ್ದೇ ಇರುತ್ತಾರೆ. ಇಲ್ಲೋರ್ವ ಗೃಹಿಣಿ ಧಾರಾವಾಹಿಗಳ ಒನ್‌ಲೈನ್‌ ಸ್ಟೋರಿ ಬಿಚ್ಚಿಟ್ಟು ʼಆಸೆʼಯನ್ನು ಹೊಗಳಿದ್ದಾರೆ. 

ಸಹಜವಾಗಿ ಧಾರಾವಾಹಿಗಳ ಬಗ್ಗೆ ದೂರು ಇದ್ದೇ ಇರುತ್ತದೆ. ಕಥೆ ಹಾಗೆ ಮಾಡಿದ್ರು, ಹೀಗೆ ಮಾಡಿದ್ರು, ಎಲ್ಲ ಸೀರಿಯಲ್‌ಗಳಲ್ಲೂ ಅತ್ತೆ-ಸೊಸೆ ಜಗಳವೇ ತುಂಬಿರುತ್ತದೆ, ಮೂರು ತಿಂಗಳು ಚೆನ್ನಾಗಿ ಬಂದ್ಮೇಲೆ ಆ ಸೀರಿಯಲ್‌ ದಾರಿ ತಪ್ಪುತ್ತದೆ, ರಂಬರ್‌ ಬ್ಯಾಂಡ್‌ ಎಳೆದ ಹಾಗೆ ಸೀರಿಯಲ್‌ ಎಳೆಯುತ್ತಾರೆ ಅಂತೆಲ್ಲ ವೀಕ್ಷಕರು ಸದಾ ಬೈಯ್ಯುತ್ತಿರುತ್ತಾರೆ. ಈಗ ನೀನಾಸಂನಲ್ಲಿ ಕೆಲಸ ಮಾಡಿದ್ದ ಗುಬ್ಬಿ ಸುಷ್ಮಾ ಎನ್ನುವವರು ಧಾರಾವಾಹಿಗಳ ತಪ್ಪನ್ನು ತಿದ್ದುತ್ತ, ʼಆಸೆʼಯನ್ನು ಹೊಗಳಿದ್ದಾರೆ. ಅಂದಹಾಗೆ ನಿರ್ದೇಶಕ ಪ್ರಕಾಶ್‌ರಾಜ್‌ ಮೆಹು ಅವರ ನೀನಾಸಂ ಸಹಪಾಠಿ ಸುಷ್ಮಾ ಎನ್ನೋದು ತಿಳಿದು ಬಂದಿದೆ. 

ಮಂಡ್ಯ ರಮೇಶ್‌ ಹೇಳಿದ್ದೇನು?

ಮಂಡ್ಯ ರಮೇಶ್‌ ಅವರು ಸುಷ್ಮಾ ಅವರು ʼಆಸೆʼ ಬಗ್ಗೆ ಹೊಗಳಿದ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಈ ಗೃಹಿಣಿ ಯಾರೆಂದು ನನಗೆ
ಗೊತ್ತಿಲ್ಲ! ಈ ವಿಡಿಯೋ ಸಂಜೆ ನನ್ನ ವಾಟ್ಸಪ್ ಗೆ ಬಂದಾಗ ಕ್ಷಣ ಕಾಲ ಮೂಕನಾದೆ. ಈ ಕ್ಷೇತ್ರದಲ್ಲಿ, ಏಳುವುದು, ಬೀಳುವುದು, ಪ್ರಶಸ್ತಿ ಪುರಸ್ಕಾರ, ಜನಪ್ರೀತಿ ಬೈಸಿಕೊಳ್ಳುವುದು, ಅಪಮಾನ ಸರೀಕರಿಂದ ಗೇಲಿಗೊಳಗಾಗುವುದು, ಪ್ರೀತಿಗೊಳಗಾಗುವುದು… ಎಲ್ಲ ತರದ್ದು ಅನುಭವಿಸಿದ್ದೇನೆ. ಆದರೆ ಈ ತರದ ಕ್ಷಣಗಳು ಹೃದಯ ತುಂಬುತ್ತದೆ, ಭಯವೂ ಆಗುತ್ತದೆ, ಎಚ್ಚರಿಸುತ್ತದೆ. ಪಾತ್ರ ಜನಕ್ಕೆ ಇಷ್ಟವಾಗಿದ್ದರೆ ನಮ್ರವಾಗಿ ಹೇಳುತ್ತೇನೆ. ಕಥೆಯಲ್ಲಿ ಪಾತ್ರ ಬರೆದವ, ನಿರ್ದೇಶಕ, ಜೊತೆಯಲ್ಲಿರುವ ಕಲಾವಿದರು -ತಂತ್ರಜ್ಞರು ಮತ್ತು ತಪ್ಪದೇ ಸಂಬಳ ಕೊಡುತ್ತಿರುವ ನಿರ್ಮಾಪಕರು, ವಾಹಿನಿ, ಈಕೆಯಂತೆಯೇ 'ಆಸೆ'ಯನ್ನು ಪ್ರೀತಿ ಮಾಡುತ್ತಿರುವ ಎಲ್ಲರೂ ಚೈತನ್ಯದಾಯಿಯಾಗಿದ್ದಾರೆ. ಈ ಯಶಸ್ಸು ಅವರಿಗೆಲ್ಲ ಸೇರಬೇಕು. ಧನ್ಯವಾದಗಳು” ಎಂದು ಅವರು ಹೇಳಿಕೊಂಡಿದ್ದಾರೆ. 

ಆಸೆ ಧಾರಾವಾಹಿಯಲ್ಲಿ ಕಾಣೆಯಾಗಿರೋ ಮೀನಾ ಹೀಗೆ ಪತ್ತೆಯಾದ್ರು ನೋಡಿ

ವಿಡಿಯೋದಲ್ಲಿ ಸುಷ್ಮಾ ಹೇಳಿದ್ದೇನು? 
ಸಂಜೆ 6 ಗಂಟೆಯಿಂದ ರಾತ್ರಿ 11 ರವರೆಗೆ ಯಾವುದೇ ವಾಹಿನಿಗಳ ಧಾರಾವಾಹಿಗಳನ್ನು ವೀಕ್ಷಿಸಿ. ನಾವು ಇದೇ ವಾಹಿನಿಯ ಧಾರಾವಾಹಿ ನೋಡಿ ಅಂತ ಹೇಳೋದಿಲ್ಲ. ಸ್ಟಾರ್‌ ಸುವರ್ಣ ವಾಹಿನಿಯ ʼಆಸೆʼ ಧಾರಾವಾಹಿ ನೋಡಿ ಅನ್ನೋದಿಕ್ಕೆ ನಾನು ಕಾರಣಗಳನ್ನು ಕೊಡ್ತೀನಿ.

ʼಆಸೆʼ ಧಾರಾವಾಹಿ ಮೀನಾ ಕಾಣೆಯಾಗಿದ್ದಾರೆ; ಅಧಿಕೃತ ಪೋಸ್ಟ್‌ ಹಂಚಿಕೊಂಡ ವಾಹಿನಿ

ಸುಸಂಸ್ಕೃತ ಹೆಣ್ಣುಮಗಳಿಗೆ ಹೀರೋ ಇರುತ್ತಾನೆ. ಅವನು ಆ ಹುಡುಗಿಯನ್ನು ಇಷ್ಟಪಡಬಹುದು, ಇಷ್ಟಪಡದೇ ಇರಬಹುದು. ಇದರ ಜೊತೆಗೆ ಇನ್ನೋರ್ವ ಹೀರೋಯಿನ್‌ ಬರುತ್ತಾಳೆ. ಅವಳಿಗೆ ಮನೆಯಲ್ಲಿದ್ದವರು ಸಹಾಯ ಮಾಡುತ್ತಾರೆ. ಯಾವುದೇ ಧಾರಾವಾಹಿ ತಗೊಂಡರೂ ಕೂಡ ಅಲ್ಲಿ ಸೆಕೆಂಡ್‌ ಹೀರೋಯಿನ್‌ ಹೇಗೆ ಬರ್ತಾಳೆ ಎನ್ನೋದನ್ನು ಡಿಫರೆಂಟ್‌ ಆಗಿ ತೋರಿಸಬಹುದು. ನಾಯಕಿಯಾದವಳು ತನ್ನ ಗಂಡನನ್ನು ಕೊನೇತನಕ ತನ್ನವನಾಗಿ ಪರದಾಡೋದು ಎಲ್ಲ ಧಾರಾವಾಹಿಗಳ ಸಾಮಾನ್ಯ ಕಥೆ ಅಂತ ಹೇಳಬಹುದು. ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಕೂಡ ಹೀರೋಯಿನ್‌ ತನ್ನ ಗಂಡನನ್ನು ಉಳಿಸಿಕೊಳ್ಳೋಕೆ ಒದ್ದಾಡ್ತಾಳೆ. ನಾವು ತುಂಬ ನಿರೀಕ್ಷೆ ಇಟ್ಟುಕೊಂಡು ʼಭಾಗ್ಯಲಕ್ಷ್ಮೀʼ ಧಾರಾವಾಹಿ ನೋಡುತ್ತಿದ್ದೆವು. ಹೆಣ್ಣು ತಾನೇ ಸ್ವಂತವಾಗಿ ಏನು ಮಾಡಬಹುದು? ಯಾವ ಯಾವ ವೃತ್ತಿ ಆಯ್ಕೆ ಮಾಡಬಹುದು ಎನ್ನೋದನ್ನು ಬದಿಗಿಟ್ಟು, ಬರಹಗಾರರು ಇಲ್ಲಿ ಕತೆಯನ್ನು ಹಾರಿಸುತ್ತಿದ್ದಾರೆ, ಹೀಗೆ ದಾರಿ ತಪ್ಪುತ್ತಿದೆ.