ಆಸೆ ಧಾರಾವಾಹಿಯಲ್ಲಿ ಕಾಣೆಯಾಗಿರೋ ಮೀನಾ ಹೀಗೆ ಪತ್ತೆಯಾದ್ರು ನೋಡಿ
ಆಸೆ ಧಾರಾವಾಹಿಯಲ್ಲಿ ಮಿಸ್ಸಿಂಗ್ ಆಗಿರೋ ಮೀನಾ ಆಲಿಯಾಸ್ ಪ್ರಿಯಾಂಕ ಹೊಸ ಫೋಟೊ ಶೂಟ್ ಮೂಲಕ ಅಭಿಮಾನಿಗಳ ಮುಂದೆ ಹೀಗೆ ಕಾಣಿಸಿಕೊಂಡಿದ್ದಾರೆ ನೋಡಿ.

ಸ್ಟಾರ್ ಸುವರ್ಣ ವಾಹಿನಿಯ (Star Suvarna) ಆಸೆ ಸೀರಿಯಲ್ ನಾಯಕಿ ಕಾಣೆಯಾಗಿದ್ದಾರೆ ಅನ್ನೋ ಪೋಸ್ಟ್ ಕಳೆದೆರಡು ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ನಟಿ ಸಖತ್ ಸ್ಟೈಲಿಶ್ ಆಗಿ ಫೋಟೊಗಳಿಗೆ ಪೋಸ್ ಕೊಟ್ಟಿದ್ದು, ಸೂರ್ಯನ ಮುದ್ದು ಹೆಂಡತಿ ಹೂಮಾರುವ ಮೀನಮ್ಮಾ ಇವರೇನಾ ಎನ್ನುವಷ್ಟು ಸುಂದರವಾಗಿ ಕಾಣಿಸ್ತಿದ್ದಾರೆ.
ಆಸೆ ಸೀರಿಯಲ್ ನಲ್ಲಿ ನಾಯಕಿ ಮೀನಾ ಆಗಿ ನಟಿಸುತ್ತಿರುವ ನಟಿ ಪ್ರಿಯಾಂಕ ಡಿಎಸ್ (Priyanka DS). ಇವರು ಸೀರಿಯಲ್ ನಲ್ಲಿ ಸದ್ಯ ಕಾಣೆಯಾಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಹೊಸ ಫೋಟೊ ಶೂಟ್ ಮೂಲಕ ಮಿಂಚುತ್ತಿದ್ದಾರೆ.
ಪ್ರಿಯಾಂಕಾ ಸಿಲ್ವರ್ ವರ್ಕ್ ಇರುವ ಕಪ್ಪು ಬಣ್ಣದ ಸೀರೆ ಧರಿಸಿದ್ದು, ಅದಕ್ಕೆ ಮ್ಯಾಚ್ ಆಗುವ ಕಪ್ಪು ಮತ್ತು ವೈಟ್ ಸ್ಟೋನ್ ನೆಕ್ಲೆಸ್, ಇಯರಿಂಗ್ಸ್, ಬಳೆಗಳನ್ನು ಧರಿಸಿದ್ದಾರೆ. ಯಾವಾಗಲೂ ಸಿಂಪಲ್ ಸೀರೆಯುಟ್ಟು ಸರಳವಾಗಿ ಕಾಣುವ ಪ್ರಿಯಾಂಕ, ಇದೀಗ ಹೊಸ ಲುಕ್ ನಲ್ಲಿ ಸಖತ್ ಮುದ್ದಾಗಿ ಕಾಣಿಸುತ್ತಿದ್ದಾರೆ.
ಪ್ರಿಯಾಂಕ ಫೋಟೊಗಳನ್ನು ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ, ಎಲಿಗೆಂಟ್ ಬ್ಯೂಟಿ, ಲವ್ಲಿ ಫೋಟೊ, ಪ್ರೆಟಿ ಪ್ರಿಯಾಂಕಾ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಮೀನಾ ಅವ್ರೆ ಪಾಪ ಸೂರ್ಯ ಮನಿಯಾಗ ಕಾಯ್ತಾ ಇದ್ದಾರೆ. ನೀವು ಎಲ್ಲಿ ಹೋಗಿರೋದು ಎಂದು ಸಹ ಕೇಳಿದ್ದಾರೆ.
ಸೀರಿಯಲ್ ವಿಚಾರಕ್ಕೆ ಬರೋದಾದ್ರೆ ಸದ್ಯ ಧಾರಾವಾಹಿಯಲ್ಲಿ ಮೀನಾ ಮನೆ ಬಿಟ್ಟು ಹೋಗಿದ್ದಾರೆ. ಗೆಳೆಯನೊಬ್ಬ ತನ್ನ ಅಣ್ಣನ ಮದುವೆ ಕಾಗದ ಕೊಡಲು ಮನೆಗೆ ಬಂದಾಗ ಸೂರ್ಯ ಮನೋಜ್ ನ ಕಾಲೆಳೆಯಲು, ಮದುವೆ ದಿನ ನೀನು ಮನೆಯಲ್ಲಿ ಇರಬೇಡ, ನೀನು ಮನೆಯಲ್ಲಿದ್ದರೆ, ಮದುಮಗ ಓಡಿ ಹೋದ್ರೆ ನಿನ್ನ ಕೈಯಿಂದಲೇ ತಾಳಿ ಕಟ್ಟಿಸ್ತಾರೆ. ನೀನು ಏನು ಮಾಡದೇ ಇದ್ರು ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತಿ ಎನ್ನುತ್ತಾನೆ ಸೂರ್ಯ.
ಮನೆಯ ಎಲ್ಲಾ ಸದಸ್ಯರ ಎದುರು ಹಾಗೂ ಇನ್ನೊಬ್ಬ ವ್ಯಕ್ತಿಯ ಮುಂದೆ ತನ್ನನ್ನು ಮದುವೆಯಾಗಿರುವ ಕುರಿತು, ಈ ರೀತಿಯಾಗಿ ಸೂರ್ಯ ಹೀಯಾಳಿಸಿ ಮಾತನಾಡಿದ್ದು, ಮೀನಾಗೆ ಬೇಸರ ತಂದಿದೆ. ಅಷ್ಟೇ ಅಲ್ಲದೇ ಸೂರ್ಯ ಮೀನಾಗೆ ಬೈದ ಎಂದು ಮನೆಯವರೆಲ್ಲಾ ಬಾಯಿಗೆ ಬಂದಂತೆ ಆಡಿಕೊಂಡಾಗ, ಮತ್ತಷ್ಟು ಬೇಸರಗೊಂಡ ಮೀನಾ ಮನೆ ಬಿಟ್ಟು ಹೋಗಿದ್ದಾರೆ. ಸದ್ಯ ಮೀನಾ ಹುಡುಕಾಟ ನಡೆಯುತ್ತಿದೆ.
ಇನ್ನು ನಟಿ ಪ್ರಿಯಾಂಕ ಕಳೆದ ಕೆಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪುಣ್ಯವತಿ ಸೀರಿಯಲ್ (Punyavathi Serial) ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು. ಆ ಸೀರಿಯಲ್ ಬೇಗನೆ ಕೊನೆಯಾಗಿತ್ತು. ಇದೀಗ ಆಸೆ ಧಾರಾವಾಹಿಯಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಜನರನ್ನು ರಂಜಿಸುತ್ತಿದ್ದಾರೆ ಪ್ರಿಯಾಂಕ.