ಸ್ಟಾರ್‌ ಸುವರ್ಣ ವಾಹಿನಿಯ ʼಮೀನಾʼ ಕಾಣೆಯಾಗಿದ್ದಾರೆ. ಹೌದು, ವಾಹಿನಿಯೇ ಈ ಬಗ್ಗೆ ಅಧಿಕೃತವಾಗಿ ಹೇಳಿದೆ. 

ʼಆಸೆʼ ಧಾರಾವಾಹಿಯ ಮೀನಾ ಕಾಣೆಯಾಗಿದ್ದಾರೆ. ಹೀಗೆಂದು ಸ್ಟಾರ್‌ ಸುವರ್ಣ ವಾಹಿನಿಯವರೇ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಮೀನಾ ನಾಪತ್ತೆ! 
ಹೌದು, ʼಆಸೆʼ ಧಾರಾವಾಹಿಯಲ್ಲಿ ಮೀನಾ ಕಾಣಿಸೋದಿಲ್ಲ. ಸೂರ್ಯನ ಕಡು ಮಾತುಗಳನ್ನು ಕೇಳಿ ಅವಳು ಬೇಸರ ಮಾಡಿಕೊಳ್ತಾಳೆ. ಹೀಗಾಗಿ ಅವಳು ಮನೆ ಬಿಟ್ಟು ಹೋಗ್ತಾಳೆ, ಅವಳು ಎಲ್ಲಿಗೆ ಹೋಗ್ತಾಳೆ ಎನ್ನೋದು ಈಗ ಇರುವ ಪ್ರಶ್ನೆ.

Kannada Serial TRP 2025; ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ನಂ 1 ಪಟ್ಟ ಪಡೆದ ಸೀರಿಯಲ್‌ ಯಾವುದು?

ಹಿಂಸೆ ಕೊಡ್ತಿರುವ ಅತ್ತೆ
ʼಆಸೆʼ ಧಾರಾವಾಹಿಯಲ್ಲಿ ಮೀನಾ-ಮನೋಜ್‌ ಮದುವೆ ಫಿಕ್ಸ್‌ ಆಗಿತ್ತು. ಆಗ ಮನೋಜ್‌ ಇನ್ನೊಂದು ಹುಡುಗಿಗೋಸ್ಕರ ಈ ಮದುವೆಯಿಂದ ಎಸ್ಕೇಪ್‌ ಆಗುತ್ತಾನೆ. ಆಗ ಮನೋಜ್‌ ತಂದೆ ರಂಗನಾಥ್‌ ಅವರು ತನ್ನ ಎರಡನೇ ಮಗ ಸೂರ್ಯನಿಗೂ, ಮೀನಾಗೂ ಮದುವೆ ಮಾಡಿಸುತ್ತಾರೆ. ಮೀನಾ ಹೂ ಮಾರುವ ಹುಡುಗಿ, ಅವರ ಮನೆಯವರು ಬಡವರು. ಇದೇ ವಿಷಯ ಇಟ್ಟುಕೊಂಡು ಸೂರ್ಯ ತಾಯಿ ನಿತ್ಯವೂ ಬಾಯಿಗೆ ಬಂದ ಹಾಗೆ ಬೈತಾಳೆ, ಎಲ್ಲ ಕೆಲಸವನ್ನು ಮಾಡಿಸ್ತಾಳೆ. 

ಮೀನಾಗೆ ಕೋಪ ಬಂತು!
ಸಾಕಷ್ಟು ಬಾರಿ ತಾಯಿಗೆ ಸೂರ್ಯ ಬೈದಿದ್ದಾನೆ, ಎಚ್ಚರಿಕೆ ಕೊಟ್ಟಿದ್ದಾನೆ. ಹೀಗಿದ್ದರೂ ಕೂಡ ಅವಳು ಮಾತ್ರ ಸ್ವಲ್ಪವೂ ಬದಲಾಗಿಲ್ಲ. ಇನ್ನೊಂದು ಕಡೆ ಮನೆಗೆ ಆಹ್ವಾನ ಪತ್ರಿಕೆ ಕೊಡಲು ಓರ್ವ ವ್ಯಕ್ತಿ ಬಂದಾಗ ಸೂರ್ಯ ಏನೇನೋ ಮಾತಾಡಿ ಅಣಕ ಮಾಡ್ತಾನೆ. ಈ ವಿಷಯಕ್ಕೆ ಮೀನಾಗೆ ಕೋಪ ಬಂದಿದೆ. 

ಕ್ಯಾಬ್‌ ಡ್ರೈವರ್‌ ಆದ ಕಿರುತೆರೆ ನಟಿ ನಿನಾದ್; ಒಂದೂವರೆ ವರ್ಷದ ನಂತರ ಸಿಕ್ಕಿ ಭಾಗ್ಯ ಅಂತಿದ್ದಾರೆ!

ಮೀನಾಗೆ ಸಿಟ್ಟು ಬಂದಿದ್ದು ಯಾಕೆ?
“ನೀನು ಮನೆಯಲ್ಲಿ ಇರಬೇಡ, ನೀನು ಮನೆಯಲ್ಲಿದ್ದರೆ, ಮದುಮಗ ಓಡಿ ಹೋದ್ರೆ ನಿನ್ನ ಕೈಯಿಂದಲೇ ತಾಳಿ ಕಟ್ಟಿಸ್ತಾರೆ. ಏನೂ ಮಾಡದೆ ನಿನಗೆ ಸಮಸ್ಯೆ ಬರತ್ತೆ” ಅಂತ ಸೂರ್ಯ ಆಹ್ವಾನ ಪತ್ರಿಕೆ ಕೊಡಲು ಬಂದವರಿಗೆ ಹೇಳ್ತಾನೆ. ಈ ವಿಷಯ ಮೀನಾ ಕಿವಿಗೆ ಬಿದ್ದಾಗ ಅವಳಿಗೆ ಬೇಸರ ಆಗುತ್ತದೆ. ಸೂರ್ಯ ಮೀನಾಗೆ ಬೈದ ಅಂತ ಮನೆಯಲ್ಲಿ ಇದ್ದವರೆಲ್ಲ ಇನ್ನೊಂದಿಷ್ಟು ಅವಳನ್ನು ಆಡಿಕೊಳ್ತಾರೆ. ಇದು ಮೀನಾಗೆ ಸಿಟ್ಟು ತರಿಸುತ್ತದೆ.

ತಿಂಡಿ ರೆಡಿ ಮಾಡದ ಮೀನಾ
ಮೀನಾ ಅಂದು ಬೆಳಗ್ಗಿನ ತಿಂಡಿ ಮಾಡೋದಿಲ್ಲ. “ನಾನು ಎಲ್ಲರಿಗೂ ಅಡುಗೆ ಮಾಡೋಕೆ ಇಲ್ಲಿಗೆ ಬಂದಿಲ್ಲ. ನಾನು ಸತ್ತರೆ ನೀವು ಅಡುಗೆ ಮಾಡಿಕೊಂಡು ತಿಂತೀರಾ ತಾನೆ? ನಾನು ಅಡುಗೆ ಮಾಡೋದಿಲ್ಲ” ಎಂದು ಮೀನಾ ಹೇಳುತ್ತಾಳೆ. ಮೀನಾ ಮಾತು ಸೂರ್ಯನಿಗೆ ಬೇಸರ ತರಿಸುತ್ತದೆ. ಆಗ ಸೂರ್ಯ “ಮನೋಜ್‌ ಕಾಲೆಳೆಯಲು ಈ ರೀತಿ ಮಾತನಾಡಿದೆ. ನಾನು ನಿನ್ನನ್ನು ತುಂಬ ಪ್ರೀತಿ ಮಾಡ್ತೀನಿ, ನಿನಗೆ ಬೇಸರ ಮಾಡೋಕೆ ನಾನು ಈ ಮಾತು ಆಡಿಲ್ಲ” ಎಂದು ಹೇಳುತ್ತಾನೆ. ಹೀಗಿದ್ದರೂ ಮೀನಾ ಬೇಸರ ಕಡಿಮೆ ಆಗೋದಿಲ್ಲ. ಇನ್ನೊಂದು ಕಡೆ ರಂಗನಾಥ್‌ ಕೂಡ ಸೂರ್ಯನಿಗೆ “ನಿನ್ನನ್ನು ನಂಬಿಕೊಂಡಿರೋ ಪತ್ನಿಗೆ ನೀನು ಈ ರೀತಿ ಮಾತಾಡಿದ್ರೆ ಬೇಸರ ಆಗೋದಿಲ್ವಾ? ಎಲ್ಲರ ಮುಂದೆ ಅವಳನ್ನು ಅವಮಾನ ಮಾಡಿದಂತಾಯ್ತು” ಎಂದಾಗ ಸೂರ್ಯನಿಗೆ ಅವನ ತಪ್ಪಿನ ಅರಿವಾಗುತ್ತದೆ.

ಯುಟಿಐ ಸಮಸ್ಯೆಯಿಂದ ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲು

ಮೀನಾ ಎಲ್ಲಿದ್ದಾಳೆ ಅಂತ ಸೂರ್ಯ ಹುಡುಕುತ್ತಿದ್ದಾನೆ. ಒಟ್ಟಿನಲ್ಲಿ ಮೀನಾ ಎಲ್ಲಿಗೆ ಹೋದಳು ಅಂತ ಹುಡುಕಬೇಕಿದೆ. ಇನ್ನು ಈ ಧಾರಾವಾಹಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇನ್ನು ಮುಂದೆ ಯಾವ ರೀತಿಯ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು 
ಇನ್ನು ಸೂರ್ಯ ಪಾತ್ರದಲ್ಲಿ ನಿನಾದ್‌ ಹರಿತ್ಸ, ಮೀನಾ ಪಾತ್ರದಲ್ಲಿ ಪ್ರಿಯಾಂಕಾ ಡಿ ಎಸ್‌, ರಂಗನಾಥ್‌ ಪಾತ್ರದಲ್ಲಿ ಮಂಡ್ಯ ರಮೇಶ್‌, ಶಾಂತಿ ಪಾತ್ರದಲ್ಲಿ ಸ್ನೇಹಾ ನಟಿಸುತ್ತಿದ್ದಾರೆ. 


View post on Instagram