ಬಿಗ್‌ಬಾಸ್‌ ಸಂಗೀತಾ ಅವರಿಗೆ ನಟ ಯಶ್‌ ಅವರು ಶುಭಾಶಯ ಕೋರಿರುವ ವಿಡಿಯೋ ವೈರಲ್‌ ಆಗಿದೆ. ಅಸಲಿಗೆ ಯಶ್‌ ಶುಭಾಶಯ ಕೋರಿದ್ದು ಯಾರಿಗೆ?  

ಬಿಗ್​ಬಾಸ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ, ಮನೆಯೊಳಗಿನ ಸದಸ್ಯರ ನಡುವಿನ ಜಟಾಪಟಿಯೂ ಭರ್ಜರಿಯಾಗಿ ನಡೆಯುತ್ತಿದೆ. ಮಾಡು ಇಲ್ಲವೇ ಮಡಿ ಹಂತದಲ್ಲಿ ಇದ್ದಾರೆ ಸ್ಪರ್ಧಿಗಳು. ಈ ಹಿನ್ನೆಲೆಯಲ್ಲಿ ಸಿಕ್ಕ ಅವಕಾಶವನ್ನು ತಮ್ಮ ಎದುರಾಳಿಗಳನ್ನು ಕುಗ್ಗಿಸುವುದಕ್ಕೆ, ಅಂತಿಮ ಸ್ಪರ್ಧೆಯ ದಾರಿಯನ್ನು ಸುಗಮಗೊಳಿಸಿಕೊಳ್ಳುವುದನ್ನು ನೋಡುತ್ತಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಸದ್ಯ ಆರು ಸ್ಪರ್ಧಿಗಳು ಇದ್ದು, ಅವರ ನಡುವೆ, ಕಿತ್ತಾಟ ಜೋರಾಗಿ ನಡೀತಿದೆ. ಇದರ ನಡುವೆಯೇ ಇತ್ತೀಚಿಗೆ, ಬಿಗ್‌ಬಾಸ್ ಸ್ಪರ್ಧಿಗಳಿಗೆ ಅವರ ವಿಷ್‌ ಏನು ಎಂದು ಕೇಳಿತ್ತು. ಆಗ ಸಂಗೀತಾ ಶೃಂಗೇರಿ ಅವರು, ಯಶ್ ಕಡೆಯಿಂದ ವಿಶ್ ಸಿಗಬೇಕು ಎಂದು ಅವರು ತಿಳಿಸಿದ್ದರು. 

ಇದರ ಬೆನ್ನಲ್ಲೇ ನಟ ಯಶ್‌ ಅವರು ಸಂಗೀತಾ ಅವರಿಗೆ ವಿಷ್‌ ಮಾಡಿ ಬಿಗ್‌ಬಾಸ್‌ನಲ್ಲಿ ಗೆಲುವು ಸಾಧಿಸುವಂತೆ ಹೇಳಿರುವ ವಿಡಿಯೋ ಸಕತ್‌ ವೈರಲ್‌ ಆಯಿತು. ಸೋಷಿಯಲ್‌ ಮೀಡಿಯಾಗಳಲ್ಲಿ ಈ ವಿಡಿಯೋಗೆ ನೂರಾರು ಮಂದಿ ಕಮೆಂಟ್ಸ್‌ ಕೂಡ ಮಾಡಿದರು. ಸಂಗೀತಾ ಫ್ಯಾನ್ಸ್‌ ಅಂತೂ ಖುಷಿಯಿಂದ ಕುಣಿದು ಕುಪ್ಪಳಿಸಿದ್ದರು. ಫಿನಾಲೆಗೆ ಟಿಕೆಟ್‌ ಪಡೆದ ಮೊದಲ ಸ್ಪರ್ಧಿಯಾಗಿರುವ ಸಂಗೀತಾ ಅವರಿಗೆ ಯಶ್‌ ಅವರ ಬೆಂಬಲ ಸಿಕ್ಕಿದ್ದು ನೋಡಿ ಅವರ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. 

ಆದರೆ ನಿಜವಾಗಿಯೂ ಯಶ್‌ ಅವರು ಸಂಗೀತಾರಿಗೆ ವಿಷ್‌ ಮಾಡಿದ್ದರೆ? ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು-ಸತ್ಯಗಳನ್ನು ಪತ್ತೆ ಹಚ್ಚುವುದೇ ಕಷ್ಟ. ಅದರಲ್ಲಿಯೂ ಎಐ ಬಂದ ಮೇಲೆ ಪರಿಸ್ಥಿತಿ ಹರೋಹರವಾಗಿದೆ. ಯಾವುದೋ ವಿಡಿಯೋಗಳಿಗೆ ತಮಗೆ ಬೇಕಾದ ಮಾತನ್ನು ಆಡಿಸುವುದು, ಯಾರದೋ ಮುಖಕ್ಕೆ ಯಾರದ್ದೋ ದೇಹ ಹಾಕುವುದು ಎಲ್ಲವೂ ಮಾಮೂಲು ಆಗಿಬಿಟ್ಟಿದೆ. ಅಸಲಿಗೆ ಇಲ್ಲು ಕೂಡ ಅದೇ ರೀತಿ ಆಗಿದೆ.

ರೋಷ, ಮೌನ, ಕಣ್ಣೀರು.... ಕನ್ನಡಿ ಎದುರು ಕುಳಿತು ಬಿಗ್‌ಬಾಸ್‌ ಸ್ಪರ್ಧಿಗಳು ಏನೆಲ್ಲಾ ಹೇಳಿದ್ರು ಕೇಳಿ

ಹೌದು. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಯಶ್‌ ಮತ್ತು ಸಂಗೀತಾ ವಿಡಿಯೋ ಅಸಲಿಯಲ್ಲ, ಬದಲಿಗೆ ನಕಲಿ ಎನ್ನುವುದು ತಿಳಿದಿದೆ. ‘ಹವಾ ಜೋರಾಗಿದೆ ಅಂತ ಗೊತ್ತಾಯ್ತು. ಎಲ್ಲರೂ ಬಹಳ ಕಷ್ಟ ಪಡುತ್ತಾ ಇದೀರ. ಮೂರು ತಿಂಗಳಿಂದ ಸಂಪರ್ಕ ಕಳೆದುಕೊಂಡು ಹಾರ್ಡ್ ವರ್ಕ್ ಮಾಡಿ ಈ ಹಂತಕ್ಕೆ ಬಂದಿದ್ದೀರಾ. ಫೈನಲ್ಸ್ ನಡೆಯುತ್ತಿದೆ. ನೀವು ನನ್ನ ಅಭಿಮಾನಿ ಅನ್ನೋದು ಗೊತ್ತಾಯ್ತು. ಎಲ್ಲರಿಗೂ ಶುಭವಾಗಲಿ’ ಎಂದು ವಿಡಿಯೋದಲ್ಲಿ ಯಶ್‌ ಹೇಳಿದ್ದಾರೆ. ಹೀಗೆ ಯಶ್‌ ಹೇಳಿದ್ದು ನಿಜನೇ. ಆದರೆ ಇದು ಸಂಗೀತಾಗೆ ಅಲ್ಲ. 

ವಿಡಿಯೋದಲ್ಲಿ ಯಶ್‌ ಅವರು ಹೆಸರು ಉಲ್ಲೇಖ ಮಾಡದ ಕಾರಣ, ಈ ವಿಡಿಯೋ ಇಟ್ಟುಕೊಂಡು ಯಾರು ಬೇಕಾದರೂ ಏನು ಬೇಕಾದರೂ ಮಾಡಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅಸಲಿಗೆ, ಈ ವಿಡಿಯೋದಲ್ಲಿ ಯಶ್‌ ಅವರು ವಿಷ್‌ ಮಾಡಿದ್ದು, ಪ್ರತೀಕ್ಷಾಗೆ. ಅಂದರೆ ಇವರು ‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್’ನ ನಾಲ್ಕನೇ ಸೀಸನ್ ಸ್ಪರ್ಧಿಯಾಗಿದ್ದರು. ಅದು ನಡೆದದ್ದು 2018ರಲ್ಲಿ. ಆಗ ಅವರು ಪ್ರತೀಕ್ಷಾ ತಮ್ಮ ಫ್ಯಾನ್‌ ಆಗಿರುವ ಕಾರಣ, ವಿಷ್‌ ಮಾಡಿದ್ದರು. ಆದರೆ ಅದಕ್ಕೆ ಸಂಗೀತಾ ಅವರ ವಿಡಿಯೋ ಹಾಕಿ ಅವರಿಗೇ ವಿಷ್‌ ಮಾಡಿದಂತೆ ತೋರಿಸಲಾಗುತ್ತಿದೆ. ಅಷ್ಟಕ್ಕೂ ಈ ವಿಡಿಯೋ ಸಂದರ್ಭದಲ್ಲಿ ಯಶ್‌ ಅವರು ಕೆಜಿಎಫ್‌ನಲ್ಲಿ ಬಿಜಿ ಇದ್ದರು. ಈ ವಿಡಿಯೋದಲ್ಲಿ ಇರುವ ಲುಕ್‌ ಕೂಡ ಅದೇ ಎಂದು ಯಾರಿಗಾದರೂ ತಿಳಿದುಬರುತ್ತದೆ. ಆದರೆ ಅಷ್ಟು ಯೋಚನೆ ಮಾಡುವ ಗೋಜು ಎಷ್ಟು ಮಂದಿಗೆ ಇದೆ ಅಲ್ಲವೆ?
==
ಅದೇ ಇನ್ನೊಂದೆಡೆ, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಲೋಕಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ತಮಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ. 

View post on Instagram