ಕೊರಟಗೆರೆ(ಅ.25): ಅಕ್ರಮವಾಗಿ ಮರಳು ಸಾಗಣೆ ಮಾಡುವ ಉದ್ದೇಶದಿಂದ ತಾಲೂಕಿನ ಆದಿತಿಮ್ಮಪ್ಪ ಸ್ವಾಮಿ ದೇಗುಲ ಅರಣ್ಯ ಪ್ರದೇಶದ ಸಮೀಪ ಶೇಖರಣೆ ಮಾಡಿದ್ದ ಮರಳು ಅಡ್ಡೆಯ ಮೇಲೆ ತಹಸೀಲ್ದಾರ್‌ ಗೋವಿಂದರಾಜು ನೇತೃತ್ವದ ತಂಡ ದಾಳಿ ನಡೆಸಿ ನಾಲ್ಕು ಟ್ರ್ಯಾಕ್ಟರ್‌ ಲೋಡು ಮರಳನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಆದಿತಿಮ್ಮಪ್ಪ ಸ್ವಾಮಿ ದೇವಾಲಯದ ಅರಣ್ಯ ಪ್ರದೇಶದ ಸಮೀಪದ ಸರಕಾರಿ ಗೋಮಾಳದಲ್ಲಿ ಅಕ್ರಮವಾಗಿ ಶೇಖರಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸರು 4 ಟ್ರ್ಯಾಕ್ಟರ್‌ ಲೋಡು ಮರಳನ್ನು ಜಪ್ತಿ ಮಾಡಿದ್ದಾರೆ.

ತುಮಕೂರು: ಭಾರೀ ಮಳೆಗೆ ಮನೆ ಹಾನಿ, ರಸ್ತೆ ಮೇಲೆ ನಾಲ್ಕಡಿ ನೀರು

ಹೊಳವನಹಳ್ಳಿ ಸಮೀಪ ಹರಿಯುವ ಜಯಮಂಗಳಿ ನದಿಯಿಂದ ಪ್ರತಿನಿತ್ಯ ಟ್ರ್ಯಾಕ್ಟರ್‌ ಮೂಲಕ ಅಕ್ರಮ ಮರಳು ಸಾಗಾಣಿಕೆ ಮಾಡಿ ಅರಣ್ಯ ಪ್ರದೇಶದಲ್ಲಿ ಪ್ರತಿ 5 ಲೋಡಿನಂತೆ ಅಕ್ರಮವಾಗಿ ಲಾಟು ಮಾಡುತ್ತಾರೆ. ಮಧ್ಯರಾತ್ರಿ 12 ಗಂಟೆಯ ನಂತರ ಶೇಖರಿಸಿರುವ ಮರಳನ್ನು ಲಾರಿಗಳಲ್ಲಿ ಬೆಂಗಳೂರಿಗೆ ಸಾಗಿಸುವ ಬೃಹತ್‌ ಜಾಲವನ್ನು ಕಂದಾಯ ಇಲಾಖೆ ಕಂಡು ಹಿಡಿದಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು.

ಶಿರಾ ತಾಲೂಕಿನ ಚೆಕ್‌ಡ್ಯಾಂ, ಬ್ಯಾರೇಜ್‌ಗಳು ಭರ್ತಿ