ಸತತ ಮಳೆಯಿಂದಾಗಿ ಶಿರಾ ತಾಲೂಕಿನಲ್ಲಿ ಹಲವಾರು ಚೆಕ್‌ಡ್ಯಾಂಗಳು ತುಂಬಿ ಹರಿದು, ಕೆರೆಗಳು ತುಂಬುವ ಹಂತ ತಲುಪಿದ್ದು, ರೈತರ ಮೊಗದಲ್ಲಿ ಹರ್ಷ ತಂದಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಒಟ್ಟು 15 ದಿನಗಳು ಮಳೆಯಾಗಿದ್ದು, ಹಳ್ಳಕೊಳ್ಳಗಳಲ್ಲಿ ನೀರು ಹರಿಯುತ್ತಿದೆ.

ತುಮಕೂರು(ಅ.24): ಈ ತಿಂಗಳಲ್ಲಿ ಬಂದ ಸತತ ಮಳೆಯಿಂದಾಗಿ ಶಿರಾ ತಾಲೂಕಿನಲ್ಲಿ ಹಲವಾರು ಚೆಕ್‌ಡ್ಯಾಂಗಳು ತುಂಬಿ ಹರಿದು, ಕೆರೆಗಳು ತುಂಬುವ ಹಂತ ತಲುಪಿದ್ದು, ರೈತರ ಮೊಗದಲ್ಲಿ ಹರ್ಷ ತಂದಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಒಟ್ಟು 15 ದಿನಗಳು ಮಳೆಯಾಗಿದ್ದು, ಹಳ್ಳಕೊಳ್ಳಗಳಲ್ಲಿ ನೀರು ಹರಿಯುತ್ತಿದೆ. ತಾಲೂಕಿನ ಮಳೆ ಮಾಪನ ಕೇಂದ್ರಗಳಲ್ಲಿ ಅ.22ರಂದು ಶಿರಾ 20 ಮಿ.ಮೀ, ಚಿಕ್ಕನಹಳ್ಳಿ 52.2 ಮಿಮೀ, ಕಳ್ಳಂಬೆಳ್ಳ 33 ಮಿಮೀ, ಬುಕ್ಕಾಪಟ್ಟಣ 46.2 ಮಿಮೀ, ತಾವರೆಕೆರೆ 10.4 ಮಿಮೀ, ಹುಣಸೇಹಳ್ಳಿ 68 ಮಿಮೀ ಒಟ್ಟು 229.8 ಮಿಮೀ ಮಳೆಯಾಗಿದೆ.

ಬುಕ್ಕಾಪಟ್ಟಣ ಕೆರೆ ತುಂಬಲು ಇನ್ನು 4 ಅಡಿ ಬಾಕಿ:

ತಾಲೂಕಿನ ಬುಕ್ಕಾಪಟ್ಟಣ ಭಾಗದಲ್ಲಿ 15 ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಕಾರಣ ಕೆರೆ ತುಂಬು ಹಂತಕ್ಕೆ ಬಂದಿದೆ. ಇನ್ನೇನು 4 ಅಡಿಗಳಷ್ಟುನೀರು ಬಂದೆ ಕೆರೆ ತುಂಬಿ ಕೋಡಿ ಹರಿಯುತ್ತದೆ.

ತುಮಕೂರು: ಭಾರೀ ಮಳೆಗೆ ಮನೆ ಹಾನಿ, ರಸ್ತೆ ಮೇಲೆ ನಾಲ್ಕಡಿ ನೀರು

ಇದಲ್ಲದೆ ತಾಲೂಕಿನ ಹುಣಸೆಹಳ್ಳಿ ಬಳಿಯ ಹಾಲಜ್ಜನಪಾಳ್ಯ ಬ್ಯಾರೇಜ್‌, ಬೆಂಚೆ ಬಸವನಹಳ್ಳಿಯ ಪಿಕಪ್‌ ತುಂಬಿ ಹರಿಯುತ್ತಿದೆ. ಒಟ್ಟಾರೆ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಚೆಕ್‌ ಡ್ಯಾಂ, ಬ್ಯಾರೇಜ್‌, ಕೆರೆ ಕಟ್ಟೆಗಳಿಗೆ ಜೀವ ಕಳೆ ಬಂದಿರುವುದು ರೈತರಲ್ಲಿ, ಸಾರ್ವಜನಿಕರಲ್ಲಿ ಸಂತೋಷದ ವಾತಾವರಣ ಮೂಡಿದೆ.

ಗಣಿ ರೀತಿ ನೆರೆಗೂ ಸಿದ್ದು ನೇತೃತ್ವದಲ್ಲಿ ಪಾದಯಾತ್ರೆ.