MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Tumakuru: ಸಾಲ ಪಡೆದಿದ್ದಾನೆಂದು ಊರು ತುಂಬೆಲ್ಲಾ ಪೋಸ್ಟರ್ ಅಂಟಿಸಿ ವ್ಯಕ್ತಿಗೆ ಅವಮಾನ

Tumakuru: ಸಾಲ ಪಡೆದಿದ್ದಾನೆಂದು ಊರು ತುಂಬೆಲ್ಲಾ ಪೋಸ್ಟರ್ ಅಂಟಿಸಿ ವ್ಯಕ್ತಿಗೆ ಅವಮಾನ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ, ಸಿದ್ದರಾಜಯ್ಯ ಎಂಬುವವರು ಸಾಲ ಪಾವತಿಸಿಲ್ಲ ಎಂದು ಊರೆಲ್ಲಾ ಪೋಸ್ಟರ್ ಅಂಟಿಸಿ ಅವಮಾನಿಸಲಾಗಿದೆ. ಕೃತ್ಯದ ಹಿಂದೆ, ತಮ್ಮಿಂದ ಹಣ ಪಡೆದು ವಂಚಿಸಿದ್ದ ಚಿಟ್ಸ್ ಕಂಪನಿ ಮ್ಯಾನೇಜರ್ ಗೌತಮ್ ರಾಜ್ ಕೈವಾಡವಿದೆ ಎಂದು ಸಿದ್ದರಾಜಯ್ಯ ಆರೋಪಿಸಿದ್ದಾರೆ.

2 Min read
Author : Mahmad Rafik
Published : Mar 03 2026, 09:41 AM IST
Share this Photo Gallery
  • FB
  • TW
  • Linkdin
  • Whatsapp
15
ಪೋಸ್ಟರ್
Image Credit : Asianet News

ಪೋಸ್ಟರ್

ವ್ಯಕ್ತಿಯೊಬ್ಬರು ಸಾಲ ಪಡೆದುಕೊಂಡಿದ್ದಾರೆ ಎಂಬ ಮಾಹಿತಿಯುಳ್ಳ ಪೋಸ್ಟರ್ ಅಂಟಿಸಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ ನಡೆದಿದೆ. ಸಿದ್ದರಾಜಯ್ಯ ಸಾಲದ ಹಣ ಪಾವತಿ ಮಾಡಿಲ್ಲ ಅಂತೇಳಿ ಊರು ತುಂಬಾ ಪೋಸ್ಟರ್ ಅಂಟಿಸಲಾಗಿದೆ. ಸಿದ್ದರಾಜಯ್ಯ ಅವರು ಕುರಂಕೋಟೆ ಗ್ರಾಮದ ನಿವಾಸಿಯಾಗಿದ್ದಾರೆ. ಸಿದ್ದರಾಜು ಸಾಲಕ್ಕೆ ಜಾಮೀನು ನೀಡಿರುವ ವ್ಯಕ್ತಿಯ ಫೋಟೋ ಸಹ ಪೋಸ್ಟರ್‌ನಲ್ಲಿ ಹಾಕಲಾಗಿದೆ.

25
ಕೊಡಚಾದ್ರಿ ಚಿಟ್ಸ್ ಕಂಪನಿ
Image Credit : Asianet News

ಕೊಡಚಾದ್ರಿ ಚಿಟ್ಸ್ ಕಂಪನಿ

ಕುರಂಕೋಟೆ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕ, ಬಸ್ ನಿಲ್ದಾಣ, ಹಾಗೂ ಊರಿನ ಪ್ರಮುಖ ರಸ್ತೆಯಲ್ಲಿ ಪೊಸ್ಟರ್ ಅಂಟಿಸಲಾಗಿದೆ. ಕೊಡಚಾದ್ರಿ ಚಿಟ್ಸ್ ಫಂಡ್ ಹೆಸರಿನಲ್ಲಿ ಈ ರೀತಿಯ ಪೋಸ್ಟರ್ ಅಂಟಿಸಲಾಗಿದೆ. ಇನ್ನು ಪೋಸ್ಟರ್ ಕಾಣುತ್ತಿದ್ದಂತೆ ಸಿದ್ದರಾಜಯ್ಯ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಕೊಡಚಾದ್ರಿ ಚಿಟ್ಸ್ ಕಂಪನಿ ಘಟಕಕ್ಕೆ ಬಂದಿದ್ದಾರೆ. ನಾವು ಈ ರೀತಿಯಲ್ಲಿ ಪೋಸ್ಟರ್ ಅಂಟಿಸಲ್ಲ. ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬರಲಾಗಿದೆ ಕೊಡಚಾದ್ರಿ ಚಿಟ್ಸ್ ಕಂಪನಿ ಸಿಬ್ಬಂದಿ ಹೇಳಿದ್ದಾರೆ.

Related Articles

Related image1
ತುಮಕೂರು: ಮನೆ ದರೋಡೆಗಾಗಿ 5 ವರ್ಷದ ಮಗಳ ಮುಂದೆ ಫ್ಲವರ್ ಅಂಗಡಿ ಮಾಲೀಕನನ್ನು ಕೊಂದ ತಮಿಳುನಾಡು ಹಂತಕರು ಅರೆಸ್ಟ್
Related image2
ತುಮಕೂರು: 6 ವರ್ಷದ ಪ್ರೀತಿಗೆ ವಿಲನ್ ಆದ ಹುಡುಗಿ ಕಡೆಯವರು: ಪ್ರೇಮ ವಿವಾಹವಾಗಿ ಪೊಲೀಸ್ ರಕ್ಷಣೆ ಕೋರಿದ ಜೋಡಿ
35
ಗೌತಮ್ ರಾಜ್
Image Credit : Asianet News

ಗೌತಮ್ ರಾಜ್

ಕುರಂಕೋಟೆ ಗ್ರಾಮದ ಸಿದ್ದರಾಜಯ್ಯ ಅವರಿಗೆ ಅದೇ ಗ್ರಾಮದ ಗೌತಮ್ ರಾಜ್ ಎಂಬಾತ ಪರಿಚಯವಾಗಿದ್ದ. ಆತ ತುಮಕೂರಿನ ಬಟವಾಡಿ ಬಳಿಯಿರುವ ಕೊಡಚಾದ್ರಿ ಚಿಟ್ಸ್ ಪ್ರವೈಟ್ ಲಿಮಿಟೆಡ್ ಕಂಪನಿಯಲ್ಲಿ ಬ್ರಾಂಚ್ ಆಗಿ ಮ್ಯಾನೇಜರ್ ಕೆಲಸ ಮಾಡ್ತಿದ್ದ. 2023-24 ರಲ್ಲಿ ತುಮಕೂರು ಬಟವಾಡಿ ಬ್ರಾಂಚ್ ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ, ಸಿದ್ದರಾಜಯ್ಯ ಗೆ 5 ಲಕ್ಷ ಸಾಲ ಕೊಡಿಸಿದ್ದನು. ಸಿದ್ದರಾಜಯ್ಯ ಪ್ರತಿ ತಿಂಗಳು ಸಾಲದ ಹಣವನ್ನ ಬ್ರಾಂಚ್ ಮ್ಯಾನೇಜರ್ ಗೌತಮ್ ರಾಜ್‌ಗೆ ಫೋನ್‌ಪೇ ಮಾಡ್ತಿದ್ದರು.

45
 5 ಲಕ್ಷ ಸಾಲ‌
Image Credit : Asianet News

5 ಲಕ್ಷ ಸಾಲ‌

ಒಂದು ವರ್ಷದ ಹಿಂದೆ ಸಿದ್ದರಾಜಯ್ಯ ಅವರಿಗೆ ಆಕ್ಸಿಡೆಂಟ್ ಆಗಿ ಕಾಲು ಮುರಿದಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ತಿಂಗಳು ಸಾಲದ ಹಣ ಪಾವತಿ ಮಾಡಿರಲಿಲ್ಲ. ಮತ್ತೆ ಎಂದಿನಂತೆ ಪ್ರತಿ ತಿಂಗಳು ಸಾಲದ ಹಣ ಪಾವತಿ ಮಾಡಿಕೊಂಡು ಬರ್ತಿದ್ದರು. ಈ ಮಧ್ಯೆ ಮತ್ತೊಂದು ಬ್ಯಾಂಕ್ ನಿಂದ ಸಿದ್ದರಾಜಯ್ಯಗೆ 5 ಲಕ್ಷ ಸಾಲ‌ ಕೊಡಿಸುತ್ತೇನೆಂದು ಗೌತಮ್ ಹೇಳಿದ್ದನು. ಸಿದ್ದರಾಜಯ್ಯ ಹಾಗೂ ಆತನ ಅಳಿಯನಿಂದ ತಲಾ 25 ಸಾವಿರದಂತೆ 50 ಸಾವಿರ ಹಣ ಪಡೆದಿದ್ದನು. ಹಲವು ತಿಂಗಳು ಕಳೆದರು ಸಾಲ ಕೊಡಿಸರಲಿಲ್ಲ.

ಇದನ್ನೂ ಓದಿ: ನಮ್ಮ ಮನೇಲಿ ಯಾರೂ ಓದಿಲ್ಲ, ನೀನೂ ಓದೋದು ನಿಲ್ಲಿಸು : ಪಕ್ಕದ್ಮನೆ ಯುವತಿ ಮೇಲೆ ಹಲ್ಲೆ

55
ಗೌತಮ್ ರಾಜ್ ಮೇಲೆ ಅನುಮಾನ
Image Credit : Asianet News

ಗೌತಮ್ ರಾಜ್ ಮೇಲೆ ಅನುಮಾನ

ಈ ವಿಚಾರವಾಗಿ ಗೌತಮ್ ರಾಜ್ ಜೊತೆ ಸಿದ್ದರಾಜಯ್ಯ ಜಗಳ ಮಾಡಿದ್ದರು. ಕಳೆದ ಒಂದು ತಿಂಗಳ ಹಿಂದೆ ಕೊರಟಗೆರೆ ಪೊಲೀಸ್ ಠಾಣೆಗೆ ಗೌತಮ್ ರಾಜ್ ವಿರುದ್ಧ ದೂರು ನೀಡಿದ್ರು. ಈ ವೇಳೆ ಹಣ ವಾಪಸ್ ಕೊಡೋದಾಗಿ ಹೇಳಿದ್ದ. ಪೊಲೀಸ್ ಠಾಣೆಗೆ ಹೋಗಿ ನನ್ನ ವಿರುದ್ಧ ದೂರು ಕೊಟ್ಟು ನನ್ನ ಮರ್ಯಾದೆ ತೆಗೆದಿದ್ದೀಯಾ. ನೋಡ್ತಿರು ನಾನು ನಿನ್ನ ಮರ್ಯಾದೆಯನ್ನ ಹೇಗೆ ತೆಗೆಯುತ್ತೇನೆಂದು ಹೇಳಿಕೊಂಡು ಓಡಾಡ್ತಿದ್ದನಂತೆ. ಇದೀಗ ಗೌತಮ್ ರಾಜ್ ಈ ರೀತಿ ಮಾಡಿರಬಹುದು ಎಂದು ಸಿದ್ದರಾಜಯ್ಯ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ಬಾರ್‌ಗೆ ಕುಡಿಯಲು ಬಂದ ದಂಪತಿ ಬಳಿ ಗಾಂಜಾ ಕೇಳಿ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ತುಮಕೂರು
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ರಾಮನಗರದಲ್ಲಿ ಕುಖ್ಯಾತ ಅಂತರಾಜ್ಯ ವಾಹನ ಕಳ್ಳರ ಬಂಧನ: 2 ಗೂಡ್ಸ್, 3 ಕಾರು 10 ಬೈಕ್, ವಾಹನಗಳ ಜಪ್ತಿ
Recommended image2
ನಮ್ಮ ಮನೇಲಿ ಯಾರೂ ಓದಿಲ್ಲ, ನೀನೂ ಓದೋದು ನಿಲ್ಲಿಸು : ಪಕ್ಕದ್ಮನೆ ಯುವತಿ ಮೇಲೆ ಹಲ್ಲೆ
Recommended image3
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡುತ್ತಿದ್ದಾರೆ : ಶೃಂಗೇರಿ ಕಾಂಗ್ರೆಸ್ ಶಾಸಕ ಟಿ ಡಿ‌‌ ರಾಜೇಗೌಡ ಕಣ್ಣೀರು
Related Stories
Recommended image1
ತುಮಕೂರು: ಮನೆ ದರೋಡೆಗಾಗಿ 5 ವರ್ಷದ ಮಗಳ ಮುಂದೆ ಫ್ಲವರ್ ಅಂಗಡಿ ಮಾಲೀಕನನ್ನು ಕೊಂದ ತಮಿಳುನಾಡು ಹಂತಕರು ಅರೆಸ್ಟ್
Recommended image2
ತುಮಕೂರು: 6 ವರ್ಷದ ಪ್ರೀತಿಗೆ ವಿಲನ್ ಆದ ಹುಡುಗಿ ಕಡೆಯವರು: ಪ್ರೇಮ ವಿವಾಹವಾಗಿ ಪೊಲೀಸ್ ರಕ್ಷಣೆ ಕೋರಿದ ಜೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved