ತಂತ್ರಜ್ಞಾನದಲ್ಲಿ ಮುಂದುವರೆದ ಈ ದೇಶದಲ್ಲಿ ಜನರು ಎಸ್ಕಲೇಟರ್ನಲ್ಲಿ ಓಡಾಡೋಹಾಗಿಲ್ಲ!
ಎಸ್ಕಲೇಟರ್ ಇರೋದೇ ನಮ್ಮ ಓಡಾಟ ಸರಾಗವಾಗಲಿ ಅಂತ. ಆರಾಮವಾಗಿ ಮೇಲೆ ಹೋಗ್ಬಹುದು ಎನ್ನುವ ಕಾರಣಕ್ಕೆ ಎಲ್ಲರೂ ಎಸ್ಕಲೇಟರ್ ಬಳಕೆ ಮಾಡ್ತಾರೆ. ಆದ್ರೆ ಈ ದೇಶದಲ್ಲಿ ಇರುವ ಎಸ್ಕಲೇಟರ್ ಸೌಲಭ್ಯವನ್ನು ರದ್ದು ಮಾಡಲಾಗಿದೆ. ಅದಕ್ಕೆ ಕಾರಣ ಏನು ಗೊತ್ತಾ?

ಪ್ರತಿಯೊಂದು ದೇಶವೂ ತನ್ನದೇ ಆದ ಕಾನೂನು, ನಿಯಮಗಳನ್ನು ಹೊಂದಿದೆ. ಅಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ಅದರ ಪಾಲನೆ ಮಾಡ್ಬೇಕು. ಹಾಗೆಯೇ ದೇಶ ಅಭಿವೃದ್ಧಿ ಹೊಂದಿದಂತೆ ಹೊಸ ಹೊಸ ಸಿಸ್ಟಂಗಳು ಜಾರಿಗೆ ಬರುತ್ತವೆ. ಭಾರತ ಡಿಜಿಟಲ್ ಆಗಿದೆ, ಭಾರತದಲ್ಲಿ ಮಾಲ್, ಐಷಾರಾಮಿ ಸೌಲಭ್ಯಗಳೂ ಹೆಚ್ಚಾಗಿವೆ. ಅದ್ರಲ್ಲಿ ಎಸ್ಕಲೇಟರ್ ಕೂಡ ಒಂದು. ಹಿಂದೆ ನಾವು ಮೆಟ್ಟಿಲು ಹತ್ತಿ ಹೋಗ್ಬೇಕಿತ್ತು. ಆದ್ರೆ ಈಗ ಹಾಗಿಲ್ಲ, ಮೆಟ್ರೋ ನಿಲ್ದಾಣದಿಂದ ಹಿಡಿದು ಸಣ್ಣಪುಟ್ಟ ಮಾಲ್ ಗಳಲ್ಲಿ ಕೂಡ ಎಸ್ಕಲೇಟರ್ ಸೌಲಭ್ಯವಿದೆ.
ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲೇ ಇಷ್ಟೊಂದು ಎಸ್ಕಲೇಟರ್ (Escalators ) ಬಳಕೆ ಇದೆ ಅಂದ್ಮೇಲೆ ವಿದೇಶಗಳಲ್ಲಿ ಇದು ಮಾಮೂಲಿ ಎಂದು ನಾವು ಭಾವಿಸ್ತೇವೆ. ಆದ್ರೆ ಜಗತ್ತಿನಲ್ಲಿ ಒಂದು ದೇಶವಿದೆ ಅಲ್ಲಿ ಜನರು ಎಸ್ಕಲೇಟರ್ ಬಳಸುವುದನ್ನು ನಿಷೇಧಿಸಲಾಗಿದೆ. ಅರೇ ಇಂಥ ದೇಶವೂ ಇದ್ಯಾ ಎಂದು ನೀವು ಆಶ್ಚರ್ಯಪಡಬಹುದು. ಎಸ್ಕಲೇಟರ್ ನಿಷೇಧ (Prohibition) ವಿರುವ ದೇಶ ಯಾವುದು, ಅದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ.
ವಿಶ್ವದಲ್ಲೇ ಸಿರಿವಂತ ದೇಶವಿದು, ಆದ್ರೂ ಬಾಡಿಗೆ ಕಟ್ಟಲು ಪರದಾಡ್ತಾರೆ ಮಂದಿ!
ಎಸ್ಕಲೇಟರ್ ನಿಷೇದಿಸಿದ ಪ್ರದೇಶ ಯಾವುದು? : ಎಸ್ಕಲೇಟರ್ ಬಳಕೆ ನಿಷೇಧ ಮಾಡಿರುವುದು ಟೆಕ್ನಿಕಲಿ ಮುಂದಿರುವ ಜಪಾನ್ (Japan) ನಲ್ಲಿ. ಜಪಾನ್‌ನ ನಗೋಯಾ ನಗರದಲ್ಲಿ ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಇಲ್ಲಿನ ಜನರು ಎಸ್ಕಲೇಟರ್ ಬಳಸದಂತೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅಕ್ಟೋಬರ್ 1 ರಿಂದ ನಗೋಯಾದಲ್ಲಿ ಈ ಹೊಸ ನಿಯಮ ಜಾರಿಗೆ ಬಂದಿದೆ.
ಎಸ್ಕಲೇಟರ್ ನಿಷೇದಕ್ಕೆ ಕಾರಣವೇನು? : ಅಷ್ಟಕ್ಕೂ ಎಸ್ಕಲೇಟರ್ ಬಳಕೆಯನ್ನು ಏಕೆ ನಿಷೇಧಿಸಲಾಗಿದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೊಂದು ಮಹತ್ವದ ಕಾರಣವಿದೆ. ಎಸ್ಕಲೇಟರ್‌ಗಳಿಂದ ಬೀಳುವ ಜನರನ್ನು ರಕ್ಷಿಸುವುದು ಮತ್ತು ಇಂಥ ಅಪಘಾತ ಆಗದಂತೆ ತಡೆಯುವುದು ಈ ಸುಗ್ರಿವಾಜ್ಞೆಯ ಮುಖ್ಯ ಉದ್ದೇಶವಾಗಿದೆ.
ಎಸ್ಕಲೇಟರ್ ಗೆ ಸಂಬಂಧಿಸಿದಂತೆ ಜಪಾನ್ ನಲ್ಲಿ ವಿಶೇಷ ನಿಯಮವಿದೆ. ಜಪಾನ್‌ನಲ್ಲಿ, ಪ್ರಯಾಣಿಕರು ಎಸ್ಕಲೇಟರ್‌ನ ಎಡಭಾಗದಲ್ಲಿ ನಿಲ್ಲಬೇಕು ಮತ್ತು ಇತರ ಜನರು ಬೇಗನೆ ಹತ್ತಲು ಅಥವಾ ಇಳಿಯಲು ಬಲಭಾಗವನ್ನು ಬಳಸಬೇಕು. ಎಸ್ಕಲೇಟರ್ ನಲ್ಲಿಯೂ ಜನರಿಗೆ ಆತುರವಿರುತ್ತದೆ. ಅವರು ಎಸ್ಕಲೇಟರ್ ಚಲಿಸುವವರೆಗೆ ನಿಂತು ಕಾಯೋದಿಲ್ಲ. ಒಂದಾದ್ಮೇಲೆ ಒಂದು ಮೆಟ್ಟಿಲು ಹತ್ತಿ ಹೋಗ್ತಾರೆ. ಅವರ ಆತುರದಲ್ಲಿ ಎಸ್ಕಲೇಟರ್ ಮೇಲೆ ನಿಂತ ಉಳಿದ ಜನರಿಗೆ ಸಮಸ್ಯೆಯಾಗುವ ಸಂಭವವಿರುತ್ತದೆ. ಅವರು ಆಯತಪ್ಪಿ ಬೀಳುವ ಅಪಾಯವಿರುತ್ತದೆ. ವೃದ್ಧರು, ವಿಕಲಾಂಗರು, ಅನಾರೋಗ್ಯಕ್ಕೆ ಒಳಗಾದವರಿಗೆ ಉಪಯೋಗವಾಗಲಿ ಎಂದು ಎಸ್ಕಲೇಟರ್ ಬಳಕೆಗೆ ಬಂದಿತ್ತು. ಆದ್ರೆ ಈಗ ಎಲ್ಲರೂ ಇದ್ರ ಬಳಕೆ ಮಾಡುವ ಜೊತೆಗೆ ಅಲ್ಲಿಯೂ ಆತುರ ತೋರಿಸುವ ಕಾರಣ ಅಪಘಾತವಾಗ್ತಿದೆ.
ಜಪಾನ್ ನಲ್ಲಿ ಎಸ್ಕಲೇಟರ್ ದುರಂತ ಎಷ್ಟು? : ಜಪಾನ್ ಎಲಿವೇಟರ್ ಅಸೋಸಿಯೇಷನ್‌ನ ಅಂಕಿಅಂಶಗಳ ಪ್ರಕಾರ, 2018 ಮತ್ತು 2019 ರಲ್ಲಿ ಒಟ್ಟು 805 ಎಸ್ಕಲೇಟರ್ ಅಪಘಾತಗಳು ಸಂಭವಿಸಿವೆ. ಅನೇಕ ಜನರು ಎಸ್ಕಲೇಟರ್‌ಗಳನ್ನು ತಪ್ಪಾಗಿ ಬಳಸಿದ್ದಾರೆ. ಈ ಕಾರಣದಿಂದ ಹಲವು ರೀತಿಯ ಅಪಘಾತಗಳು ಇದರ ಮೇಲೆ ಕಂಡು ಬರುತ್ತಿವೆ. ಹೊಸ ಆದೇಶವನ್ನು ಜಾರಿಗೆ ತಂದ ನಂತರ, ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಪ್ರಮುಖ ರೈಲು ನಿಲ್ದಾಣಗಳಲ್ಲಿ ಪೋಸ್ಟರ್ ಮತ್ತು ಜಾಹೀರಾತುಗಳನ್ನು ಸಹ ಹಾಕಿದೆ.
ಈ ಹಿಂದೆಯೇ ಎಸ್ಕಲೇಟರ್ ನಿಷೇಧಿಸಿದೆ ಈ ನಗರ : ಎಸ್ಕಲೇಟರ್ ಬಳಸದಂತೆ ಸುಗ್ರೀವಾಜ್ಞೆ ಜಾರಿಗೆ ತಂದ ಮೊದಲ ನಗರ ನಾಗೋಯಾ ಅಲ್ಲ. ಈ ಹಿಂದೆ ಅಕ್ಟೋಬರ್ 2021 ರಲ್ಲಿ ಸೈತಾಮಾ ನಗರದಲ್ಲಿ ಕೂಡ ಸರ್ಕಾರ ಇದೇ ರೀತಿಯ ನಿಯಮಗಳನ್ನು ಜಾರಿಗೆ ತಂದಿತ್ತು. ಅಲ್ಲಿಯೂ ಜನರು ಎಸ್ಕಲೇಟರ್ ಬಳಕೆ ಮಾಡ್ತಿಲ್ಲ.