ಅಪ್ಪಿತಪ್ಪಿಯೂ ಇವರ ಕೈಗೆ ಮಾತ್ರ ಸಿಗಬೇಡಿ, ನಿಮ್ಮ ಸೀಳಿ ತಿಂದು ಮುಗಿಸುತ್ತಾರೆ!

ಕಾಡು ಪ್ರಾಣಿಗಳು ಮಾತ್ರವಲ್ಲ ಕಾಡು ಮನುಷ್ಯರ ಕೈಗೆ ಸಿಕ್ಕರೂ ನೀವು ಬದುಕಿ ಬರೋದು ಅನುಮಾನ. ಈಗ್ಲೂ ಅಂಥ ಜನರಿದ್ದಾರಾ ಎಂದು ಪ್ರಶ್ನೆ ಮಾಡ್ಬೇಡಿ. ಮನುಷ್ಯರ ಮಾಂಸ ಸುಟ್ಟು ತಿನ್ನೋದು ಮಾತ್ರವಲ್ಲದೆ ತಲೆ ಬುರುಡೆಯಲ್ಲಿ ಆಹಾರ ಬೇಯಿಸ್ತಾರೆ ಈ ಜನ. 
 

Head Hunting Tribes Last Cannibal Asmat Tribe New Guinea roo

ವಿಶ್ವ ಶರವೇಗದಲ್ಲಿ ಸಾಗುತ್ತಿದೆ. ಮೊಬೈಲ್ ನಲ್ಲಿಯೇ ಇಡೀ ವಿಶ್ವವನ್ನು ನಾವು ನೋಡ್ಬಹುದು. ಬಾಹ್ಯಾಕಾಶ ಸೇರಿ ಸಮುದ್ರದ ಆಳಕ್ಕೆ, ಮನುಷ್ಯನ ದೇಹದೊಳಗೆ ವಿಜ್ಞಾನಿಗಳು ಹೊಕ್ಕಿ ನೋಡಿದ್ದಾರೆ. ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಆದ್ರೆ ಈಗ್ಲೂ ಅನಾದಿ ಕಾಲದ ಪದ್ಧತಿಯನ್ನು ಪಾಲಿಸುತ್ತಿರುವ ಜನರಿದ್ದಾರೆ. ದಟ್ಟ ಅಡವಿಯಲ್ಲಿ ಜೀವನ ನಡೆಸುತ್ತಿರುವ ಬುಡಕಟ್ಟು ಜನಾಂಗ ಸಾಕಷ್ಟಿದೆ. ಬುಡಕಟ್ಟು ಜನಾಂಗದ ಜನಜೀವನ ಆಸಕ್ತಿಕರವಾಗಿದೆ. ದಟ್ಟ ಅಡವಿಗೆ ಹೋದಾಗ ಪ್ರಾಣಿಗಳ ಜೊತೆ ಕಾಡು ಮನುಷ್ಯರಿದ್ದಾರೆ ಎಚ್ಚರ ಎಂದು ಹಿಂದೆ ಹೇಳ್ತಿದ್ದರು. ಕಾಲ ಬದಲಾದಂತೆ ಅವರ ಜೀವನಶೈಲಿ ಕೂಡ ಬದಲಾಗುತ್ತ ಬಂದಿದೆ. ಹಿಂದೆ ನರಮಾನವರ ಮಾಂಸ ತಿನ್ನುತ್ತಿದ್ದ ಬುಡಕಟ್ಟು ಜನಾಂಗ ಮನುಷ್ಯರ ಮಾಂಸ ತಿನ್ನೋದನ್ನು ನಿಲ್ಲಿಸಿದೆ ಎಂದು ನಾವು ಭಾವಿಸ್ತೇವೆ. ಆದ್ರೆ ಎಲ್ಲ ಬುಡಕಟ್ಟು ಜನಾಂಗ ಬದಲಾಗಿಲ್ಲ. ಈಗ್ಲೂ ಹಬ್ಬದ ಸಮಯದಲ್ಲಿ ಮನುಷ್ಯರ ಮಾಂಸ ತಿನ್ನುವ ಜನಾಂಗವೊಂದಿದೆ. ತಲೆಬುರುಡೆಯಲ್ಲಿ ಆಹಾರ ಬೇಯಿಸುವ ಅವರು, ಮನುಷ್ಯರ ರಕ್ತವನ್ನು ಇಷ್ಟಪಡ್ತಾರೆ. ತಮ್ಮ ಗುಂಪಿನ ಜನರನ್ನು ಬೇರೆ ಗುಂಪಿನ ಜನರು ಹತ್ಯೆ ಮಾಡಿದ್ರೆ ಈ ಜನಾಂಗದ ಜನರು ಸೇಡುತೀರಿಸಿಕೊಳ್ಳದೆ ಬಿಡೋದಿಲ್ಲ.  

ನ್ಯೂ ಗಿನಿಯಾ (New Guinea ) ದಲ್ಲಿ ವಾಸಿಸುವ ಅಸ್ಮತ್ (Asmat) ಬುಡಕಟ್ಟು ಜನಾಂಗದವರೇ ಮನುಷ್ಯನ ಮಾಂಸ ತಿನ್ನುತ್ತಾರೆ. ಇವರನ್ನು ನರಭಕ್ಷಕರು (Man Eaters) ಎಂದು ಕರೆಯುತ್ತಾರೆ. ಇಂಡೋನೇಷ್ಯಾ (Indonesia ) ದ ದಕ್ಷಿಣ ಪಪುವಾ ಪ್ರಾಂತ್ಯದಲ್ಲಿ 10,000 ಚದರ ಮೈಲುಗಳಷ್ಟು ಅರಣ್ಯ ಪ್ರದೇಶವನ್ನು ಆವರಿಸಿದೆ. 1623 ರಲ್ಲಿ ಇವರು ವಾಸಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದ್ರೆ 1950ರವರೆಗೂ ಅವರು ಪ್ರತ್ಯೇಕವಾಗಿದ್ದರು. ಯಾರ ಸಂಪರ್ಕಕ್ಕೂ ಅವರು ಬಂದಿರಲಿಲ್ಲ. 

11 ದಿನಗಳ ನ್ಯೂಡ್ ಬೋಟ್ ಪ್ರಯಾಣ ಎಂಜಾಯ್ ಮಾಡಬೇಕಾ? ನಗ್ನರಾದರೆ ಮಾತ್ರ ಅವಕಾಶ!

ಅಸ್ಮತ್ ಬಟ್ಟೆಬರೆ : ಅಸ್ಮತ್ ಬಡಕಟ್ಟು ಕುಟುಂಬದ ಅವತಾರ ಭಿನ್ನವಾಗಿದೆ. ಅವರು ಮುಖಕ್ಕೆ ಬಣ್ಣವನ್ನು ಹಚ್ಚಿಕೊಳ್ತಾರೆ. ತಲೆಗೆ ಟೋಪಿ ಹಾಕಿಕೊಳ್ಳುವ ಅವರು ಹೆಡ್ ಹಂಟರ್ ಈಟಿಯನ್ನು ಬಳಸ್ತಾರೆ. ಪ್ರಾಣಿಗಳನ್ನು ಭೇಟಿಯಾಡೋದು ಅವರ ಮೂಲ ಕೆಲಸ. ಅವರನ್ನು ಕ್ರೂಟ ಬೇಟೆಗಾರರು ಎಂದೇ ಕರೆಯಲಾಗುತ್ತದೆ. 

ತಲೆ ಬುರುಡೆ ತಂದ್ರೆ ತೀರುತ್ತೆ ಸೇಡು? : ಇವರ ಗುಂಪಿನ ಸುದ್ದಿಗೆ ಯಾರೂ ಬರುವಂತಿಲ್ಲ. ಒಂದ್ವೇಳೆ ಶತ್ರುಗಳು ಇವರ ಗುಂಪಿನ ಯಾವುದೇ ವ್ಯಕ್ತಿ ಮೇಲೆ ದಾಳಿ ನಡೆಸಿದ್ರೆ ಅಥವಾ ಹತ್ಯೆ ಮಾಡಿದ್ರೆ ಅಸ್ಮತ್ ಗುಂಪಿನ ಜನರು ಸೇಡು ತೀರಿಸಿಕೊಳ್ಳದೆ ಬಿಡೋದಿಲ್ಲ. ಶತ್ರುಗಳ ತಲೆಬುರುಡೆ ತರೋದಲ್ಲದೆ ಅವರು ಹಬ್ಬದಲ್ಲಿ ಆ ತಲಡಬುರುಡೆಯಲ್ಲೇ ಆಹಾರ ಸಿದ್ಧಪಡಿಸ್ತಾರೆ. ಹೀಗೆ ಮಾಡಿದ್ರೆ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂಬ ನಂಬಿಕೆ ಅವರದ್ದು. ಅದೇ ಕಾರಣಕ್ಕೆ ಹತ್ಯೆ ಮಾಡಿದ ಶತ್ರುವಿನ ತಲೆ ಬುರುಡೆಯನ್ನು ಅವರು ತರ್ತಾರೆ. ಪುರುಷ, ಮಹಿಳೆ ಅಥವಾ ಮಕ್ಕಳ ಎಂಬ ಬೇಧವಿಲ್ಲ. ಒಟ್ಟಿನಲ್ಲಿ ಶತ್ರುವಿನ ತಲೆಬುರುಡೆಯಾದ್ರೆ ಸಾಕು. 

ಶತ್ರುಗಳ ರಕ್ತವೆಂದ್ರೆ ಅಸ್ಮತ್ ಕುಟುಂಬಕ್ಕೆ ಬಹಳ ಇಷ್ಟ. ಅವರು ಅದನ್ನು ಸೇವನೆ ಮಾಡೋದಲ್ಲದೆ ಅದನ್ನು ಮರದ ಕೆಲಸಕ್ಕೆ ಬಳಸಿಕೊಳ್ತಾರೆ. ಮರದ ವಿಗ್ರಹವನ್ನು ರಕ್ತದಲ್ಲಿ ಉಜ್ಜಿ ವಿಗ್ರಹವನ್ನು ಸಿದ್ಧಪಡಿಸ್ತಾರೆ. 

ಬೇಸಿಗೆ ರಜೆಯ ಮೋಜಿಗೆ ಬೆಸ್ಟ್‌ ಟೈಂ, ಥೈಲ್ಯಾಂಡ್ ಹೋಗೋ ಪ್ರವಾಸಿಗರಿಗೆ ವೀಸಾ ಬೇಕಿಲ್ಲ!

ಅಸ್ಮತ್ ಬುಡಕಟ್ಟು ಜನಾಂಗದವರ ಕೈಗೆ ಸಿಕ್ಕರೆ ಸಾಮಾನ್ಯ ವ್ಯಕ್ತಿ ಕೂಡ ಬದುಕಿ ಬರೋದು ಸುಲಭವಲ್ಲ. ನ್ಯೂಯಾರ್ಕ್ ಗವರ್ನರ್ ನೆಲ್ಸನ್ ರಾಕ್‌ಫೆಲ್ಲರ್ ಅವರ 23 ವರ್ಷದ ಮಗ ಈ ಬುಡಕಟ್ಟು ಜನಾಂಗವಿರುವ ಕಾಡಿಗೆ ಹೋದವನು ವಾಪಸ್ ಬರಲಿಲ್ಲ ಎನ್ನಲಾಗುತ್ತದೆ. ಅಸ್ಮತ್ ಬುಡಕಟ್ಟು ಜನಾಂಗದ ಮೇಲೆ ಯುರೋಪ್ (Europe) ಜನರು ದಾಳಿ ನಡೆಸಿದ್ದರು. ಅದರ ಸೇಡು ತೀರಿಸಿಕೊಳ್ಳಲು ಅವರು ಗವರ್ನರ್ ಮಗನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತದೆ. ಅದಕ್ಕೆ ಯಾವುದೇ ಪುರಾವೆ ಇಲ್ಲ. 

Latest Videos
Follow Us:
Download App:
  • android
  • ios