ನಿಮ್ಮ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕಿಗಳು ಮತ್ತು ನಿಮ್ಮ ಹುಟ್ಟಿದ ವರ್ಷವನ್ನು ಬಳಸಿ, ಒಂದು ಸರಳ ಗಣಿತದ ಮೂಲಕ ನಿಮ್ಮ ವಯಸ್ಸನ್ನು ನಿಖರವಾಗಿ ಕಂಡುಹಿಡಿಯಬಹುದು. ಈ ಲೇಖನದಲ್ಲಿ ಆ ಮ್ಯಾಜಿಕ್ ಟ್ರಿಕ್ ಅನ್ನು ಹಂತ-ಹಂತವಾಗಿ ವಿವರಿಸಲಾಗಿದೆ.

ಈಗ ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ್​ ಇದ್ದೇ ಇರುತ್ತದೆ. ಕೆಲವರ ಬಳಿಯಂತೂ 2-3 ಫೋನ್​ ಇರುತ್ತದೆ. ಈಗ ನಮ್ಮ ಮೊಬೈಲ್​ ನಂಬರ್​ ಆಯ್ಕೆ ಮಾಡಿಕೊಳ್ಳುವ ಅವಕಾಶ ಕೆಲವು ಕಂಪೆನಿಗಳು ನೀಡುತ್ತವೆ. ಆದರೆ ಬಹಳಷ್ಟು ಮಂದಿಗೆ ಮೊಬೈಲ್​ ಸಂಖ್ಯೆ ಅಟೊಮ್ಯಾಟಿಕ್​ ಸಿಕ್ಕಿರುತ್ತದೆ. ಅರ್ಥಾತ್​ ಅವರು ಇಷ್ಟಪಡಲಿ, ಪಡದೇ ಇರಲಿ, ಯಾವುದೋ ಒಂದು ನಂಬರ್​ ಸಿಕ್ಕಿರುತ್ತದೆ. ಆದರೆ ನಿಮ್ಮ ಮೊಬೈಲ್​ ನಂಬರ್​ ನೀವು ಇಷ್ಟಪಟ್ಟದ್ದೇ ಇರಲಿ, ಪಡದೇ ಹಾಗೆಯೇ ಸಿಕ್ಕಿದ್ದೇ ಇರಲಿ, ಕಾರಣ ಏನೇ ಇರಲಿ... ಆದರೆ ನಿಮ್ಮ ಮೊಬೈಲ್​ ನಂಬರ್​ನಿಂದಲೇ ನಿಮ್ಮ ವಯಸ್ಸನ್ನು ತಿಳಿಯಬಹುದು ಎನ್ನುವ ಸತ್ಯ ನಿಮಗೆ ಗೊತ್ತೆ?

ಇನ್ನೇಕೆ ತಡ

ಬಹುಶಃ ಇದನ್ನು ಕೇಳಿದ್ರೆ ಹಲವರು ನಂಬಲಿಕ್ಕಿಲ್ಲ. ಆದರೆ ಇದರ ಹಿಂದಿರೋ ಸೈನ್ಸೇ ಬೇರೆ. ಬೇಕಿದ್ದರೆ ನೀವೇ ಟ್ರೈ ಮಾಡಿ ನೋಡಿ, ಸತ್ಯ ಏನು ಎನ್ನೋದು ತಿಳಿಯುತ್ತದೆ. ಒಂದಿಷ್ಟು ಪ್ಲಸ್​, ಮೈನಸ್​, ಇಂಟು ಎಲ್ಲಾ ಮಾಡಬೇಕಿದೆ. ಕೊನೆಯಲ್ಲಿ ನಾಲ್ಕು ಡಿಜಿಟಲ್​ ಸಂಖ್ಯೆ ಸಿಗುತ್ತದೆ. ಅದರಲ್ಲಿ ಮೊದಲು ಎರಡು ಡಿಜಿಟ್​ ನಿಮ್ಮ ಮೊಬೈಲ್​ ನಂಬರ್​ನ ಕೊನೆಯ ಎರಡು ಅಂಕಿಯಾಗಿದ್ದರೆ, ಕೊನೆಯ ಎರಡು ಡಿಜಿಟ್​ ನಿಮ್ಮ ವಯಸ್ಸಾಗಿರುತ್ತದೆ. ಹಾಗಿದ್ರೆ ಇನ್ನೇಕೆ ತಡ, ನೀವು ಗಣಿತದಲ್ಲಿ ಅಷ್ಟೊಂದು ಎಕ್ಸ್​ಪರ್ಟ್​ ಇಲ್ಲದೇ ಇದ್ದ ಕ್ಯಾಲ್ಕುಲೇಟರೋ ಅಥವಾ ಪೆನ್ನೋ ಹಿಡಿದು ಕುಳಿತುಕೊಂಡು ಇದನ್ನು ಟ್ರೈ ಮಾಡಿ.

ನೀವು ಮಾಡಬೇಕಿರುವುದು ಇಷ್ಟು

-ನಿಮ್ಮ ಮೊಬೈಲ್​ ನಂಬರ್​ನ ಕೊನೆಯ ಎರಡು ಅಂಕಿಯನ್ನು 2ರಿಂದ ಗುಣಿಸಿ: ಅರ್ಥಾತ್​ ನಿಮ್ಮ ಮೊಬೈಲ್​ ಸಂಖ್ಯೆ 12345678 ಎಂದು ಇದ್ದರೆ, ಕೊನೆಯ ಎರಡು ಅಂಕಿ ಅಂದರೆ 78 ಅನ್ನು 2ರಿಂದ ಗುಣಿಸಿ. 78 X 2 ಉತ್ತರ 156 ಬರುತ್ತದೆ.

-ಬಳಿಕ ಬಂದ ಉತ್ತರಕ್ಕೆ 5 ಅನ್ನು ಸೇರಿಸಿ. ಈ ಉದಾಹರಣೆ ಹೇಳುವುದಾದರೆ, 156 ಕ್ಕೆ 5 ಸೇರಿಸಿದರೆ 161 ಆಗುತ್ತದೆ.

- ಬಂದ ಉತ್ತರಕ್ಕೆ 50 ರಿಂದ ಗುಣಿಸಿ. ಈ ಉದಾಹರಣೆಯಲ್ಲಿ 161 X 50= 8050

- ಬಂದ ಉತ್ತರಕ್ಕೆ 1776 ಸೇರಿಸಿ. ಈ ಉದಾಹರಣೆಯಲ್ಲಿ 8050 ಕ್ಕೆ 1776 ಆ್ಯಡ್ ಮಾಡಿದರೆ 9826 ಬರುತ್ತದೆ.

- ಬಂದ ಉತ್ತರಕ್ಕೆ ನೀವು ನಿಮ್ಮ ಹುಟ್ಟಿದ ವರ್ಷವನ್ನು ಮೈನಸ್​ ಮಾಡಬೇಕು. ಈ ಉದಾಹರಣೆಯಲ್ಲಿ ಹೇಳುವುದಾದರೆ, ಒಂದು ವೇಳೆ ನಿಮ್ಮ ಹುಟ್ಟಿದ ಇಸ್ವಿ 1980 ಆಗಿದ್ದರೆ, 9826 ರಲ್ಲಿ 1980 ಅನ್ನು ಮೈನಸ್​ ಮಾಡಿ. 9826 - 1980 = 7846 ಎನ್ನುವ ಉತ್ತರ ಬರುತ್ತದೆ.

- ಈ ನಾಲ್ಕು ಡಿಜಿಟ್​ ನಂಬರ್​ (7846) ನೋಡಿ. ಮೊದಲ ಎರಡು ಡಿಜಿಟ್​ ನಿಮ್ಮ ಮೊಬೈಲ್​ ಸಂಖ್ಯೆಯ ಕೊನೆಯ ಎರಡು ಸಂಖ್ಯೆ ಆಗಿದ್ದರೆ, ಈ ನಂಬರ್​ನ ಕೊನೆಯ ಎರಡು ಡಿಜಿಟ್​ ನಿಮ್ಮ ವಯಸ್ಸು ಆಗಿರುತ್ತದೆ. ಇದರಲ್ಲಿ ಮೊಬೈಲ್​ ನಂಬರ್​ನ ಕೊನೆಯ ಸಂಖ್ಯೆ 78 ಆಗಿದ್ದು, ನಿಮ್ಮ ವಯಸ್ಸು 46 ಆಗಿರುತ್ತದೆ.

ನೀವೂ ಟ್ರೈ ಮಾಡಿ ನೋಡ್ತೀರಾ? ಹೇಗಿದೆ ಈ ಮ್ಯಾಜಿಕ್​?