Asianet Suvarna News Asianet Suvarna News

WhatsApp Groupನಲ್ಲಿ ಯಾರಾದರೂ ಈ 5 ವಿಷಯಗಳನ್ನು ಶೇರ್ ಮಾಡಿದರೆ Adminಗೆ ಜೈಲು ಪಕ್ಕಾ!

ನೀವು ವಾಟ್ಸಾಪ್ ಗುಂಪಿನ ನಿರ್ವಾಹಕರಾಗಿದ್ದರೆ, ಗುಂಪಿನಲ್ಲಿ ಹಂಚಿಕೊಳ್ಳಲಾದ ವಿಷಯದ ಪ್ರಕಾರಗಳ ಬಗ್ಗೆ ನೀವು ತಿಳಿದಿರಬೇಕು. ಅಲ್ಲದೆ, ಗುಂಪಿನಲ್ಲಿ ಯಾವ ರೀತಿಯ ವಿಷಯವನ್ನು ಚರ್ಚಿಸಬೇಕು ಎಂಬುದರ ಬಗ್ಗೆಅರಿವಿರಬೇಕು. ಇಲ್ಲದಿದ್ದರೆ ವಾಟ್ಸಪ್‌ನಲ್ಲಿ ಶೇರ್‌ ಮಾಡಲಾದ ಕೆಲವು ಸಂಗತಿಗಳಿಂದ  ನೀವು ಸೆರೆಮನೆವಾಸ ಅನುಭವಿಸಬೇಕಾಗಬಹುದು 

WhatsApp group admin may go to jail if Anti national Pornography content Shared on groups mnj
Author
Bengaluru, First Published Jan 22, 2022, 10:38 AM IST

Tech Desk:‌ ಮೆಟಾ ಒಡೆತನದ ವಾಟ್ಸಾಪ್‌ (WhatsApp) ಅತ್ಯಂತ ಜನಪ್ರಿಯ ಮೇಸೆಜಿಂಗ್‌ ಫ್ಲಾಟ್‌ಫಾರ್ಮ್‌ಗಳಲ್ಲೊಂದು. ವಾಟ್ಸಾಪ್‌ ಬಳಕೆದಾರರಿಗೆ ಹಲವು ವೈಶಿಷ್ಟ್ಯಗಳನ್ನು ನೀಡುತ್ತದಲ್ಲದೇ ಇದರ ಬಳಕೆಯೂ ಸುಲಭ. ನೀವು ವಾಟ್ಸಾಪನ್ನು ಬಳಸುತ್ತಿದ್ದರೆ, ನೀವು  ವಾಟ್ಸಪ್ ಗುಂಪುಗಳೊಂದಿಗೆ (Groups) ಪರಿಚಿತರಾಗಿರುವಿರಿ. ಜೊತೆಗೆ ಗುಂಪುಗಳನ್ನು ರಚಿಸುವ ಮತ್ತು ಅವುಗಳನ್ನು ಸೇರಲು ವ್ಯಕ್ತಿಗಳನ್ನು ಆಹ್ವಾನಿಸುವ ವಾಟ್ಸಾಪ್ ಗುಂಪು ಮಾಡರೇಟರ್‌ಗಳ (Moderators) ಬಗ್ಗೆ ತಿಳಿದಿರುತ್ತೀರಿ.‌ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಸಹಜವಾಗಿ ಮೇಸೆಜ್‌ಗಳು ಫಾರ್‌ವರ್ಡ್‌ ಆಗುತ್ತವೆ. ಆದರೆ ಈ ಮೇಸೆಜ್‌ಗಳೇ ವಾಟ್ಸಾಪ್‌ ಗ್ರೂಪ್‌ ನಿರ್ವಾಹಕರಿಗೆ ಕಂಟಕವಾಗಬಹುದು.

ವಾಟ್ಸಾಪ್‌ನಲ್ಲಿ ಗುಂಪುಗಳ ನಿರ್ವಾಹಕರು (Group Admin) ಕೆಲವು ಹೆಚ್ಚುವರಿ ಸವಲತ್ತುಗಳು ಮತ್ತು ಕಟ್ಟುಪಾಡುಗಳನ್ನು ಹೊಂದಿದ್ದಾರೆ. ಹಾಗಾಗಿ ಗ್ರೂಪ್‌ನಲ್ಲಿ ಯಾವುದೇ ಅಕ್ರಮ ನಡೆದರೆ ಅದನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಗ್ರೂಪ್ ಅಡ್ಮಿನ್ ಜವಾಬ್ದಾರಿಯಾಗಿದೆ. ನೀವು ವಾಟ್ಸಾಪ್ ಗುಂಪಿನ ನಿರ್ವಾಹಕರಾಗಿದ್ದರೆ, ಗುಂಪಿನಲ್ಲಿ ಹಂಚಿಕೊಳ್ಳಲಾದ ವಿಷಯದ ಪ್ರಕಾರಗಳ ಬಗ್ಗೆ ನೀವು ತಿಳಿದಿರಬೇಕು. ಅಲ್ಲದೆ, ಗುಂಪಿನಲ್ಲಿ ಯಾವ ರೀತಿಯ ವಿಷಯವನ್ನು ಚರ್ಚಿಸಬೇಕು ಎಂಬುದರ ಬಗ್ಗೆ ಅರಿವಿರಬೇಕು. ಇಲ್ಲದಿದ್ದರೆ ವಾಟ್ಸಪ್‌ನಲ್ಲಿ ಶೇರ್‌ ಮಾಡಲಾದ ಕೆಲವು ಸಂಗತಿಗಳಿಂದ  ನೀವು ಸೆರೆಮನೆವಾಸ ಅನುಭವಿಸಬೇಕಾಗಬಹುದು.  ಹಾಗಾಗಿ ಕೆಳಗಿನ ಐದು ಅಂಶಗಳನ್ನು ನೆನಪಿಡಿ:

ವಾಟ್ಸಾಪ್ ಗ್ರೂಪ್‌ನಲ್ಲಿ ದೇಶ ವಿರೋಧಿ ವಿಷಯ: ವಾಟ್ಸಾಪ್ ಗ್ರೂಪ್‌ನಲ್ಲಿ ದೇಶವಿರೋಧಿ ವಿಷಯಗಳನ್ನು ಶೇರ್ ಮಾಡಬಾರದು. ಹೀಗೆ ಮಾಡಿದರೆ ಗ್ರೂಪ್ ಅಡ್ಮಿನ್ ಮತ್ತು ಕಂಟೆಂಟ್ ಶೇರ್ ಮಾಡಿದ ಇಬ್ಬರನ್ನೂ ಪೋಲಿಸರು ಬಂಧಿಸಬಹುದು. ಇಂತಹ ಸಂದರ್ಭದಲ್ಲಿ ಜೈಲು ಶಿಕ್ಷೆಯೂ ಆಗಬಹುದು. ಉದಾಹರಣೆಗೆ, ಉತ್ತರ ಪ್ರದೇಶದ ಬಾಗ್ಪತ್ ಪ್ರದೇಶದ ವಾಟ್ಸಾಪ್ ಗ್ರೂಪ್ ಅಡ್ಮಿನ್ ಸಾಮಾಜಿಕ ಮಾಧ್ಯಮ ಸೈಟ್‌ನಲ್ಲಿ "ದೇಶ ವಿರೋಧಿ" ಟೀಕೆಗಳನ್ನು ಹರಡಿದ ಆರೋಪದ ಮೇಲೆ ಬಂಧಿಸಲಾಗಿತ್ತು.

ಇದನ್ನೂ ಓದಿWhatsapp ಮೆಸೇಜ್‌ನಲ್ಲಿ ಇಸ್ಲಾಂಗೆ ಅವಮಾನ, ಮಹಿಳೆಗೆ ಸಾವಿನ ಶಿಕ್ಷೆ!

ವಾಟ್ಸಾಪ್ ಗುಂಪಿನಲ್ಲಿ ವೈಯಕ್ತಿಕ ಚಿತ್ರಗಳು ಮತ್ತು ವೀಡಿಯೊಗಳು: ವ್ಯಕ್ತಿಯ ಒಪ್ಪಿಗೆಯಿಲ್ಲದೆ, ನೀವು ಅವನ ಅಥವಾ ಅವಳ ವೈಯಕ್ತಿಕ ಚಿತ್ರಗಳು ಮತ್ತು ವೀಡಿಯೊಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಬಾರದು. ಹೀಗೆ ಮಾಡುವುದು ಅಪರಾಧ ಚಟುವಟಿಕೆಯ ವರ್ಗಕ್ಕೆ ಸೇರುತ್ತದೆ. ವ್ಯಕ್ತಿಯ ಒಪ್ಪಿಗೆಯಿಲ್ಲದೆ ವಾಟ್ಸಾಪ್ ಗುಂಪಿನಲ್ಲಿ ವೈಯಕ್ತಿಕ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುವ ಅವಕಾಶವಿದೆ.

ವಾಟ್ಸಾಪ್ ಗುಂಪಿನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ: ಯಾವುದೇ ನಂಬಿಕೆಯನ್ನು ಅವಮಾನಿಸುವ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಚಲನಚಿತ್ರಗಳು ಮತ್ತು ಚಿತ್ರಗಳನ್ನು ವಾಟ್ಸಾಪ್ನಲ್ಲಿ ಹಂಚಿಕೊಂಡರೆ ಪೊಲೀಸರು ಯಾರನ್ನಾದರೂ ಬಂಧಿಸಬಹುದು. ಈ ಅಪರಾಧ ಅನ್ವಯ ನೀವು ಜೈಲಿಗೆ ಹೋಗಬೇಕಾಗಬಹುದು.

ಇದನ್ನೂ ಓದಿ: Anti India Propaganda ಭಾರತ ವಿರೋಧಿ ಚಟುವಟಿಕೆ, ಪಾಕ್ ಮೂಲದ 35 ಯೂಟ್ಯೂಬ್, ಟ್ವಿಟರ್, ಇನ್‌ಸ್ಟಾ ಖಾತೆ ಬ್ಲಾಕ್!

ವಾಟ್ಸಾಪ್ ಗುಂಪಿನಲ್ಲಿ ಪೋರ್ನೋಗ್ರಾಫಿ ಶೇರ್: ವಾಟ್ಸಾಪ್ ಗ್ರೂಪ್‌ಗಳಲ್ಲಿ ಅಶ್ಲೀಲ ವಿಷಯಗಳನ್ನು ಹಂಚಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ಮಕ್ಕಳ ಅಶ್ಲೀಲ ಚಿತ್ರಗಳನ್ನು ಒಳಗೊಂಡಿರುವ ಅಥವಾ ವೇಶ್ಯಾವಾಟಿಕೆಯನ್ನು ಉತ್ತೇಜಿಸುವ ಸಂದೇಶಗಳನ್ನು ವಾಟ್ಸಾಪ್ನಲ್ಲಿ ಹಂಚಿಕೊಳ್ಳುವುದು ಕಾನೂನುಬಾಹಿರವಾಗಿದೆ. ಅಂತಹ ಸಂದರ್ಭಗಳಲ್ಲಿ, ಜೈಲು ಶಿಕ್ಷೆಗೆ ಅವಕಾಶವಿದೆ.

ವಾಟ್ಸಾಪ್ ಗ್ರೂಪ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು: ನಕಲಿ ಸುದ್ದಿ ಮತ್ತು ನಕಲಿ ವಿಷಯವನ್ನು ಸರ್ಕಾರವು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಇತ್ತೀಚೆಗಷ್ಟೇ ಹೊಸ ಕಾನೂನನ್ನು ಜಾರಿಗೆ ತರಲಾಗಿದ್ದು, ಬೋಗಸ್ ಸುದ್ದಿ ಹರಡುವ ಮತ್ತು ಫೇಕ್ ಖಾತೆಗಳನ್ನು ಸೃಷ್ಟಿಸುವವರ ವಿರುದ್ಧ ದೂರು ದಾಖಲಿಸಲು ಜನರಿಗೆ ಅವಕಾಶವಿದೆ. ಅಂತಹ ಖಾತೆಯನ್ನು‌ ವಾಟ್ಸಾಪ್ ಅಳಿಸುತ್ತದೆ. ಜೊತೆಗೆ, ವಾಟ್ಸಾಪ್‌ ಮಾಸಿಕ  ವರದಿಯಲ್ಲಿ ಈ ಅಂಶಗಳ ಬಗ್ಗೆ ಸ್ಪಷ್ಟಪಡಿಸುತ್ತದೆ.

Follow Us:
Download App:
  • android
  • ios