Asianet Suvarna News Asianet Suvarna News

ಯೂಟ್ಯೂಬ್‌ ವೀಕ್ಷಣೆ ಇನ್ನಷ್ಟು ದುಬಾರಿ, ಹೊಸ ಪ್ಲ್ಯಾನ್‌ಗಳ ದರ ಏರಿಸಿದ ಗೂಗಲ್‌!

YouTube Premium Price Hike: ಇತ್ತೀಚೆಗೆ ತನ್ನ ವೇದಿಕೆಯಲ್ಲಿ ಆಡ್‌ ಬ್ಲಾಕರ್ಸ್‌ಗಳನ್ನು ನಿಷೇಧಿಸಿದ್ದ ಯೂಟ್ಯೂಬ್‌ ಈಗ ಮತ್ತೊಂದು ನಿರ್ಧಾರ ಮಾಡಿದೆ ಸಬ್‌ಸ್ಕ್ರೈಬರ್‌ಗಳಿಂದ ಹೆಚ್ಚಿನ ಹಣ ಪಡೆಯುವ ಹಾದಿಯಲ್ಲಿ ತನ್ನ ಯೂಟ್ಯೂಬ್‌ ಪ್ರೀಮಿಯಂ ಶುಲ್ಕವನ್ನು ಕೆಲವು ದೇಶಗಳಲ್ಲಿ ಏರಿಕೆ ಮಾಡಲು ನಿರ್ಧಾರ ಮಾಡಿದೆ.
 

Watching You Tube Will be expensive Google Bans Ad Blocker now increased the price of YouTube Premium san
Author
First Published Nov 3, 2023, 4:10 PM IST

ಬೆಂಗಳೂರು (ನ.3): ಯೂಟ್ಯೂಬ್‌ ವೀಕ್ಷಣೆ ಹಲವು ದೇಶಗಳಲ್ಲಿ ಇನ್ನು ದುಬಾರಿಯಾಗಲಿದೆ. ವಿಶ್ವದ ಹಲವು ದೇಶಃಲ್ಲಿ ಯೂಟ್ಯೂಬ್‌ ಪ್ರೀಮಿಯಂ ಸೇವೆಯ ದರವನ್ನು ಏರಿಕೆ ಮಾಡಲು ಕಂಪನಿ ನಿರ್ಧರಿಸಿದೆ.  ಅಧಿಕೃತ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸಬ್‌ಸ್ಕ್ರೈಬರ್‌ಗಳಿಂದ ಆದಾಯವನ್ನು ಹೆಚ್ಚಿಸಲು ಗೂಗಲ್‌ ಪ್ರಯತ್ನ ಮಾಡುತ್ತದೆ. ಇತ್ತೀಚೆಗೆ ಕಂಪನಿಯು ತಮ್ಮ ಫ್ಲಾಟ್‌ಫಾರ್ಮ್‌ಗಳಲ್ಲಿ ಆಡ್‌ ಬ್ಲಾಕರ್‌ಗಳನ್ನು ನಿಷೇಧ ಮಾಡಿದೆ. ವರದಿಗಳನ್ನು ನಂಬುವುದಾದರೆ, ಯೂಟ್ಯೂಬ್‌ನ ಮಾತೃಸಂಸ್ಥೆಯಾಗಿರುವ ಗೂಗಲ್‌ ಯೂಟ್ಯೂಬ್‌ ಪ್ರೀಮಿಯಂ ಸೇವೆ ಶುಲ್ಕವನ್ನು ಅನೇಕ ದೇಶಗಳಲ್ಲಿ ಏರಿಸಿದೆ. ಈಗಾಗಲೇ YouTube Premium ಬಳಸುತ್ತಿರುವ ಗ್ರಾಹಕರಿಗೆ ಕಂಪನಿಯು ಅವರಿಗೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಇದರ ನಂತರ ಅವರು ಹೊಸ ಮಾಸಿಕ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. YouTube Premium ನಲ್ಲಿ ಬಳಕೆದಾರರು ಅನೇಕ ಹೊಸ ರೀತಿಯ ಪ್ರಯೋಜನಗಳನ್ನು ಪಡೆಯುತ್ತಾರೆ. ಯೂಟ್ಯೂಬ್‌ ಪ್ರೀಮಿಯಂ ಸೇವೆ ಹೊಂದಿರುವವರಿಗೆ ಯಾವುದೇ ಜಾಹೀರಾತುಗಳು ನಡು ನಡುವೆ ಪ್ರಸಾರವಾಗೋದಿಲ್ಲ. ಅದರೊಂದಿಗೆ ಇತರ ಅನೇಕ ಪ್ರಯೋಜನಗಳನ್ನೂ ಇದು ನೀಡುತ್ತದೆ.

YouTube ಪ್ರೀಮಿಯಂನ ಪ್ರಯೋಜನಗಳು: ಇದಲ್ಲದೆ, ಬಳಕೆದಾರರು ಯೂಟ್ಯೂಬ್ ಮ್ಯೂಸಿಕ್‌ಗೆ ಪ್ರವೇಶವನ್ನು ಸಹ ಪಡೆಯುತ್ತಾರೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ನೀವು ಹಿನ್ನೆಲೆ ಸಂಗೀತ ವೈಶಿಷ್ಟ್ಯವನ್ನು ಸಹ ಬಳಸಲು ಸಾಧ್ಯವಾಗುತ್ತದೆ. ಇದರ ಹೊರತಾಗಿ, ನೀವು ಉತ್ತಮ ಫುಲ್‌ HD ವೀಡಿಯೊ ಸ್ಟ್ರೀಮಿಂಗ್ ಸೇವೆಯನ್ನು ಕೂಡ ಪಡೆಯಬಹುದಾಗಿದೆ.  ವರದಿಗಳ ಪ್ರಕಾರ, ಗುರುವಾರ ಏಳು ದೇಶಗಳ ಬಳಕೆದಾರರು ಯೂಟ್ಯೂಬ್ ಪ್ರೀಮಿಯಂ ಬೆಲೆ ಏರಿಕೆಯ ಕುರಿತು ಯೂಟ್ಯೂಬ್‌ನಿಂದ ಸಂದೇಶವನ್ನು ಸ್ವೀಕರಿಸಿದ್ದಾರೆ. ಹೊಸ ಮಾಸಿಕ ಚಂದಾದಾರಿಕೆ ನವೆಂಬರ್ 1 ರಿಂದ ಜಾರಿಗೆ ಬಂದಿವೆ. ಕಂಪನಿಯು ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಚಿಲಿ, ಜರ್ಮನಿ, ಪೋಲೆಂಡ್ ಮತ್ತು ಟರ್ಕಿಯಲ್ಲಿ ತನ್ನ ಪ್ರೀಮಿಯಂ ಯೋಜನೆಗಳ ಬೆಲೆಗಳನ್ನು ಹೆಚ್ಚಿಸುವ ಸಂದೇಶವನ್ನು ಕಳುಹಿಸಿದೆ.

ಸದ್ಯಕ್ಕೆ ಭಾರತದಲ್ಲಿ ಯಾವುದೇ ಪರಿಣಾಮವಿಲ್ಲ: ಅಸ್ತಿತ್ವದಲ್ಲಿರುವ ಗ್ರಾಹಕರು ಮುಂದಿನ ಮೂರು ತಿಂಗಳವರೆಗೆ ಮಾತ್ರ ಹಳೆಯ ದರದಲ್ಲಿ ಚಂದಾದಾರಿಕೆಯನ್ನು ಬಳಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಹೊಸ ಚಂದಾದಾರರು ಹೆಚ್ಚಿದ ಬೆಲೆಯಲ್ಲಿ ಸೇವೆಯನ್ನು ಪಡೆಯುತ್ತಾರೆ. ಭಾರತದಲ್ಲಿ ಯೂಟ್ಯೂಬ್ ಪ್ರೀಮಿಯಂ ಬೆಲೆಯಲ್ಲಿ ಇನ್ನೂ ಯಾವುದೇ ಬದಲಾವಣೆಯಾಗಿಲ್ಲ. ಭಾರತದಲ್ಲಿ ಯೂಟ್ಯೂಬ್ ಪ್ರೀಮಿಯಂ ಯೋಜನೆಗಳು ರೂ 129 ರಿಂದ ಪ್ರಾರಂಭವಾಗುತ್ತವೆ. ಈ ಬೆಲೆ ಮಾಸಿಕ ಯೋಜನೆಗೆ ಇರುತ್ತದೆ. ಆದರೆ, ಈ ಬೆಲೆ ಪ್ರಾಯೋಗಿಕ ಅವಧಿಯದ್ದಾಗಿದೆ. ಇದರ ನಂತರ, ಬಳಕೆದಾರರು ರೂ 139 ರ ಮಾಸಿಕ ಶುಲ್ಕದಲ್ಲಿ ಸೇವೆಯನ್ನು ಪಡೆಯುತ್ತಾರೆ. ಕಂಪನಿಯು ರೂ 399 ಗೆ ಮೂರು ತಿಂಗಳ ಚಂದಾದಾರಿಕೆಯನ್ನು ನೀಡುತ್ತದೆ. ಒಂದು ವರ್ಷದ ಚಂದಾದಾರಿಕೆಗೆ 1290 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.

ಚಿಲ್ಲರೆಗಳನ್ನೇ ನೀಡಿ ಐಫೋನ್‌ ಖರೀದಿಸಿದ ಭಿಕ್ಷುಕ, Mobile Store ರಿಯಾಕ್ಷನ್‌ ಹೀಗಿತ್ತು!

ಯೂಟ್ಯೂಬ್‌ನಲ್ಲಿ ಜಾಹೀರಾತುಗಳನ್ನು ತೆಗೆದುಹಾಕುವ ದೃಷ್ಟಿಯಲ್ಲಿ ಅನೇಕಯರು ಆಡ್‌ ಬ್ಲಾಕರ್ಸ್‌ಗಳನ್ನು ಯೂಟ್ಯೂಬ್‌ನಲ್ಲಿ ಬಳಸುತ್ತಿದ್ದರು. ಇದನ್ನೂ ಕೂಡ ಗಮನಿಸಿರುವ ಗೂಗಲ್‌, ಕಂಪನಿತ ಆದಾಯದ ಮೇಲೆ ಇದು ಪರಿಣಾಮ ಬೀರುತ್ತದೆ ಎನ್ನುವ ಕಾರಣ ನೀಡಿ ಯೂಟ್ಯೂಬ್‌ನಲ್ಲಿ ಆಡ್‌ ಬ್ಲಾಕರ್‌ಗಳನ್ನು ನಿಷೇಧ ಮಾಡಲು ಆರಂಭಿಸಿದೆ. ಈ ಕುರಿತಾಗಿ ಯೂಟ್ಯೂಬ್‌ ದೀರ್ಘಕಾಲದಿಂದ ಕೆಲಸ ಮಾಡುತ್ತಿತ್ತು.

3 ತಿಂಗಳಲ್ಲಿ ಭಾರತದ 19 ಲಕ್ಷ ಯೂಟ್ಯೂಬ್‌ ವಿಡಿಯೋ ಡಿಲೀಟ್‌: ಕಾರಣ ಏನು?

Follow Us:
Download App:
  • android
  • ios