Asianet Suvarna News Asianet Suvarna News

3 ತಿಂಗಳಲ್ಲಿ ಭಾರತದ 19 ಲಕ್ಷ ಯೂಟ್ಯೂಬ್‌ ವಿಡಿಯೋ ಡಿಲೀಟ್‌: ಕಾರಣ ಏನು?

ಮಾರ್ಗಸೂಚಿ ಅಥವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 2023ರ ಜನವರಿಯಿಂದ ಮಾರ್ಚ್‌ವರೆಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಭಾರತದ ಸುಮಾರು 19 ಲಕ್ಷ ವಿಡಿಯೋಗಳನ್ನು ತೆಗೆದು ಹಾಕಲಾಗಿದೆ ಎಂದು ಪ್ರಸಿದ್ಧ ವಿಡಿಯೋ ಸ್ಟ್ರೀಮಿಂಗ್‌ ಪ್ಲ್ಯಾಟ್‌ಫಾರ್ಮ್‌ ಯೂಟ್ಯೂಬ್‌ ಹೇಳಿದೆ.

19 lakh YouTube videos deleted in India in 3 months akb
Author
First Published Aug 31, 2023, 10:42 AM IST

ನವದೆಹಲಿ: ಮಾರ್ಗಸೂಚಿ ಅಥವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 2023ರ ಜನವರಿಯಿಂದ ಮಾರ್ಚ್‌ವರೆಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಭಾರತದ ಸುಮಾರು 19 ಲಕ್ಷ ವಿಡಿಯೋಗಳನ್ನು ತೆಗೆದು ಹಾಕಲಾಗಿದೆ ಎಂದು ಪ್ರಸಿದ್ಧ ವಿಡಿಯೋ ಸ್ಟ್ರೀಮಿಂಗ್‌ ಪ್ಲ್ಯಾಟ್‌ಫಾರ್ಮ್‌ ಯೂಟ್ಯೂಬ್‌ ಹೇಳಿದೆ.

ಈ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿರುವ ಯೂಟ್ಯೂಬ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜನವರಿಯಿಂದ ಮಾರ್ಚ್‌ವರೆಗೆ 3 ತಿಂಗಳ ಅವಧಿಯಲ್ಲಿ ಜಾಗತಿಕವಾಗಿ ಯ್ಯೂಟ್ಯೂಬ್‌ನಿಂದ 60,48,000 ವಿಡಿಯೋಗಳನ್ನು ತೆಗೆದು ಹಾಕಲಾಗಿದೆ. ಈ ಪೈಕಿ ಭಾರತದ 19 ಲಕ್ಷ ವಿಡಿಯೋಗಳು ಒಳಗೊಂಡಿವೆ ಎಂದು ತಿಳಿಸಿದೆ. ಅಲ್ಲದೇ ಅಮೆರಿಕದ 6,54,968, ರಷ್ಯಾದ 4,91,933 ಮತ್ತು ಬ್ರೆಜಿಲ್‌ನ 4,49,759 ವಿಡಿಯೋಗಳನ್ನು ಡಿಲೀಟ್‌ ಮಾಡಲಾಗಿದೆ.

ಯೂಟ್ಯೂಬ್‌ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ Top-10 ಲೈವ್‌ ಸ್ಟ್ರೀಮ್‌, ಇಲ್ಲಿಯೂ ಇಸ್ರೋ ದಾಖಲೆ!

Youtube Channel ನಲ್ಲಿ ಹಣ ಗಳಿಸಲು ಈ ರೂಲ್ಸ್ ಫಾಲೋ ಮಾಡಿ : ಟ್ಯಾಕ್ಸ್ ಕಟ್ಟೋಕೆ ಮರೀಬೇಡಿ

Follow Us:
Download App:
  • android
  • ios