ವಾಷಿಂಗ್ಟನ್(ನ.05): ಕನಸು ಕಾಣು, ಅದರ ಸಾಕರಾಕ್ಕೆ ಪರಿಶ್ರಮ ಪಡು, ಸಾಧನೆಯ ಫಲ ಉಣ್ಣು..ಇದಿಷ್ಟೇ ಅಲ್ಲವೇ ಪ್ರಪಂಚದ ತತ್ವಸಾರಗಳೆಲ್ಲವನ್ನೂ ಸೇರಿಸಿ ಕಲಿಸಿದಾಗ  ಸಿಗುವ ಹೂರಣ?

ಅದರಂತೆ 42 ವರ್ಷದ ಹಿಂದೆ ಸೌರಮಂಡಲದ ಅಧ್ಯಯನದ ಕನಸು ಕಂಡು ಉಡಾಯಿಸಲಾಗಿದ್ದ ನಾಸಾದ ವಾಯೇಜರ್-2 ನೌಕೆ, ಇದೀಗ ಸೌರಮಂಡಲವನ್ನೂ ದಾಟಿ ಹೊರನಡೆದಿದೆ.

ಕದ್ದುಮುಚ್ಚಿ ಸೌರಮಂಡಲ ದಾಟಲಿರುವ ವಾಯೇಜರ್-2: ಸೂರ್ಯ ಸುಮ್ನಿರ್ತಾನಾ?

ಸೌರಮಂಡಲದ ಗಡಿ ದಾಟಿ ಬ್ರಹ್ಮಾಂಡದ ಮತ್ತೊಂದು ಮಜಲನ್ನು ತಲುಪಿರುವ ವಾಯೇಜರ್-2 ನೌಕೆ, ಹೊರ ಜಗತ್ತಿನಿಂದ ತನ್ನ ಮೊಟ್ಟ ಮೊದಲ ಸಿಗ್ನಲ್ ರವಾನಿಸಿದೆ.

ಖಗೋಳ ಕ್ಷೇತ್ರದ ಇತಿಹಾಸದಲ್ಲೇ ಮಾನವ ನಿರ್ಮಿತ ನೌಕೆಯೊಂದು, ಸೌರಮಂಡಲದ ಹೊರಗಿನ ಪ್ರದೇಶದಿಂದ ಸಿಗ್ನಲ್ ಕಳುಹಿಸಿರುವುದು ಇದು ಎರಡನೇ ಬಾರಿ. ಈ ಮೊದಲು 2012ರಲ್ಲಿ ಹಿಲಿಯೋಸ್ಪಿಯರ್ ದಾಟಿದ್ದ ವಾಯೇಜರ್-1, ಅಂತರತಾರಾ ವಲಯದಿಂದ ಮೊಟ್ಟ ಮೊದಲ ಸಿಗ್ನಲ್ ರವಾನಿಸಿತ್ತು. 

ಸೌರಮಂಡಲದ ಅಂಚಿನಲ್ಲಿರುವ  ಹಿಲಿಯೋಸ್ಪಿರ್ ಗಡಿ ದಾಟಿ ಅಂತರತಾರಾ ವಲಯವನ್ನು ಪ್ರವೇಶಿಸಿರುವ ವಾಯೇಜರ್-2, ಭೂಮಿಯಿಂದ ಬರೋಬ್ಬರಿ 12 ಬಿಲಿಯನ್ ಮೈಲು ದೂರದಲ್ಲಿದೆ.

ನೌಕೆಯ ಪರಿಕರಗಳು ಸುಸ್ಥಿತಿಯಲ್ಲಿದ್ದು, ಸುಮಾರು 2025ರವರೆಗೂ ನೌಕೆಯಿಂದ ಭೂಮಿಗೆ ಸಂದೇಶ ರವಾನೆಯಾಗಲಿದೆ ಎಂದು ನಾಸಾ ತಿಳಿಸಿದೆ.

ವಾಯೇಜರ್ ಡಿಸ್ಕ್ ಏಲಿಯನ್ ಪಾಲಾದರೆ ಸರ್ವನಾಶ?

ಸೌರ ಮಾರುತದ ಕಣಗಳ ಪರಿಣಾಮವಾಗಿ ಅತ್ಯಂತ ಹೆಚ್ಚಿನ ಒತ್ತಡದ ಪ್ರದೇಶವಾಗಿರುವ ಹಿಲಿಯೋಸ್ಪಿಯರ್ ದಾಟುವುದು ವಾಯೇಜರ್-2 ನೌಕೆಗೆ ಸವಾಲಿನ ಕೆಲಸವಾಗಿತ್ತು ಎಂದು ನಾಸಾ ಹೇಳಿದೆ.

ವಾಯೇಜರ್-2 ನೌಕೆಯ ಅವಳಿ ವಾಯೇಜರ್-1 ಈ ಹಿಂದೆಯೇ ಅಂತರತಾರಾ ವಲಯ ಪ್ರವೇಶಿಸಿದ್ದು, ಇದೀಗ ಹಿಲಿಯೋಸ್ಪಿಯರ್ ದಾಟುವ ಮೂಲಕ ವಾಯೇಜರ್-2 ಕೂಡ ಹೊಸ ಇತಿಃಆಸ ರಚಿಸಿದೆ.