ನದಿಗೆ ಬಿದ್ದು 10 ತಿಂಗಳಾದ್ಮೇಲೆ ಸಿಕ್ತು ಐಫೋನ್ : ಸ್ವಲ್ಪನೂ ಡ್ಯಾಮೇಜ್ ಆಗಿಲ್ಲ ನೋಡಿ

ಸಾಮಾನ್ಯವಾಗಿ ಫೋನ್‌ಗಳು ನೀರಿಗೆ ಬಿತ್ತೆಂದರೆ ಅವುಗಳ ಕತೆ ಮುಗಿಯಿತು. ಅವು ಎಷ್ಟೇ ದುಬಾರಿ ಫೋನ್‌ಗಳಾದರೂ ಏನಾದರೊಂದು ಎಡವಟ್ಟು ಅಗಿಯೇ ಆಗಿರುತ್ತದೆ. ಆದರೆ 10 ತಿಂಗಳ ಹಿಂದೆ ನದಿಗೆ ಬಿದ್ದು ಕಳೆದು ಹೋಗಿದ್ದ ಐಫೋನ್‌ ಒಂದು ಮರಳಿ ಸಿಕ್ಕಿದೆ. 

UK Man finds iPhone in working condition which he dropped into river 10 months ago akb

ಸಾಮಾನ್ಯವಾಗಿ ಫೋನ್‌ಗಳು ನೀರಿಗೆ ಬಿತ್ತೆಂದರೆ ಅವುಗಳ ಕತೆ ಮುಗಿಯಿತು. ಅವು ಎಷ್ಟೇ ದುಬಾರಿ ಫೋನ್‌ಗಳಾದರೂ ಏನಾದರೊಂದು ಎಡವಟ್ಟು ಅಗಿಯೇ ಆಗಿರುತ್ತದೆ. ಆದರೆ 10 ತಿಂಗಳ ಹಿಂದೆ ನದಿಗೆ ಬಿದ್ದು ಕಳೆದು ಹೋಗಿದ್ದ ಐಫೋನ್‌ ಒಂದು ಮರಳಿ ಸಿಕ್ಕಿದೆ. ಅದೂ ಕೂಡ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ. ಯುಕೆ ಮೂಲದ ವ್ಯಕ್ತಿಯೊಬ್ಬರು ಹತ್ತು ತಿಂಗಳ ಹಿಂದೆ ತನ್ನ ಐಫೋನ್ ಅನ್ನು ನದಿಯಲ್ಲಿ ಬೀಳಿಸಿಕೊಂಡಿದ್ದರು. ಅದನ್ನು ಮರಳಿ ಪಡೆಯುವ ಯಾವುದೇ ಭರವಸೆಯಿಲ್ಲದೆ ಅವರು ಬೇಸರದಿಂದಲೇ ಹಿಂದಿರುಗಿದ್ದರು. ಆದರೆ ಇದಾಗಿ 10 ತಿಂಗಳ ಬಳಿಕ ಒಂದು ದಿನ ಅವರು ಕಳೆದುಹೋದ ಫೋನ್ ಅನ್ನು ನದಿಯಿಂದ ಮೇಲೆತ್ತಲಾಗಿದೆ ಎಂಬ ವಿಚಾರ ತಿಳಿದು ಬಂತು.

BBC ವರದಿಯ ಪ್ರಕಾರ, ಲಂಡನ್‌ ಮೂಲದ ಓವೈನ್ ಡೇವಿಸ್ (Owain Davies), ಆಗಸ್ಟ್ 2021 ರಲ್ಲಿ ಗ್ಲೌಸೆಸ್ಟರ್‌ಶೈರ್ (Gloucestershire) ನ ಸಿಂಡರ್‌ಫೋರ್ಡ್ (Cinderford) ಬಳಿ  ವೈ ನದಿಯ ಬಳಿ ಬ್ಯಾಚುಲರ್ ಪಾರ್ಟಿ (bachelor party)ಮಾಡುತ್ತಿದ್ದಾಗ ತಮ್ಮ ಐಫೋನ್‌ ನದಿಗೆ ಬೀಳಿಸಿಕೊಂಡಿದ್ದರು. ನದಿಗೆ ಬಿದ್ದ ಫೋನ್ ಮರಳಿ ಸಿಗುವುದಿಲ್ಲ ಎಂಬ ಆಲೋಚನೆಯೊಂದಿಗೆ ಅವರು ಮನೆಗೆ ತೆರಳಿದ್ದರು. ಇದಾದ ಸುಮಾರು ಹತ್ತು ತಿಂಗಳ ನಂತರ, ಮಿಗುಯೆಲ್ ಪ್ಯಾಚೆಕೊ (Miguel Pacheco) ಎಂಬುವವರು ಓವೈನ್ ಡೇವಿಸ್ ಅವರನ್ನು ಸಂಪರ್ಕಿಸಿದರು.

ಇನ್ನುಂದೆ ಐಫೋನ್‌ಗಳಲ್ಲೂ ಯುಎಸ್‌ಬಿ ಟೈಪ್-ಸಿ ಪೋರ್ಟ್‌? ಮಹತ್ವದ ಬದಲಾವಣೆಗೆ ಮುಂದಾದ ಆ್ಯಪಲ್‌?
 

ಪ್ಯಾಚೆಕೊ ಅವರು ಅದೇ ನದಿಯಲ್ಲಿ ಅವರ ಕುಟುಂಬದೊಂದಿಗೆ ದೋಣಿ ವಿಹಾರಕ್ಕೆ ಹೋಗಿದ್ದರು. ದೋಣಿ ವಿಹಾರ ನಡೆಸುತ್ತಿರುವಾಗ, ಅವರು ಡೇವಿಸ್ ಅವರ ಐಫೋನ್ ಅನ್ನು ನದಿಯಲ್ಲಿ ನೋಡಿದ್ದು, ಕಳೆದುಹೋದ ಐಫೋನ್‌ ಅನ್ನು ನದಿಯಿಂದ ಎತ್ತಿಕೊಂಡರು. ನಂತರ ಮನೆಗೆ ತಂದು ಫೋನ್ ಅನ್ನು ಸಂಪೂರ್ಣವಾಗಿ ಒಣಗಿಸಿದ್ದಾರೆ, ನಂತರ ಅದನ್ನು ಆನ್‌ ಮಾಡಿದ್ದಾರೆ. ಈ ವೇಳೆ ಅದು ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿ ಅವರು ಅಚ್ಚರಿಗೊಂಡಿದ್ದಾರೆ. ನಂತರ ಇದರ ಮಾಲೀಕನ ಪತ್ತೆ ಮಾಡಲು ಅವರು ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋನ್ ಸಂಪೂರ್ಣ ನೀರಿನಿಂದ ತುಂಬಿತ್ತು. ಇದು ಸರಿ ಇರಬಹುದು ಎಂದು ನಾನು ಯೋಚಿಸಿಯೇ ಇರಲಿಲ್ಲ ಎಂದು ಅವರು ಬಿಬಿಸಿಗೆ ತಿಳಿಸಿದ್ದಾರೆ.

ಭಾರತದಲ್ಲಿ iPhone 14 Max ಬಿಡುಗಡೆ ಯಾವಾಗ? ಬೆಲೆ ಎಷ್ಟಿರಬಹುದು? ಇಲ್ಲಿದೆ ಮಾಹಿತಿ
 

ಫೋನ್ ಮತ್ತೆ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿದಿದ್ದರೂ, ಅವರು ಫೋನ್ ಅನ್ನು ಒಣಗಿಸಿ ಸರಿ ಹೋಗುವುದರ ಬಗ್ಗೆ ಪ್ರಯತ್ನ ಮಾಡಿದ್ದರು. ಏಕೆಂದರೆ ಫೋನ್‌ನಲ್ಲಿ ಸಾಮಾನ್ಯವಾಗಿ ನಮಗೆ ಹತ್ತಿರವಾಗುವ ಅನೇಕ ವಿಚಾರಗಳನ್ನು ನಾವು ಸಂಗ್ರಹಿಸಿಟ್ಟಿರುತ್ತೇವೆ. ಒಂದು ವೇಳೆ ನಾನು ಫೋನ್ ಕಳೆದುಕೊಂಡರು ಅದರಲ್ಲಿ ನನ್ನ ಮಕ್ಕಳ ಸಾಕಷ್ಟು ಫೋಟೋಗಳಿದ್ದವು ಅವುಗಳು ಕಳೆದು ಹೋದರೆ ನನಗೆ ಬೇಸರವಾಗುತ್ತಿತ್ತು. ಅದೇ ರೀತಿ ಈ ಫೋನ್‌ ಮಾಲೀಕರ ಬಗ್ಗೆ ನಾನು ಯೋಚಿಸಿ ಆ ಫೋನ್ ಸರಿ ಮಾಡುವತ್ತಾ ಪ್ರಯತ್ನಿಸಿದೆ.

ಆದಾಗ್ಯೂ, ಫೋನ್‌ ಅನ್ನು ಒಣಗಿಸಿ ಚಾರ್ಜ್‌ಗೆ ಇಟ್ಟಾಗ ಅವರ ಕಣ್ಣನ್ನು ಅವರೇ ನಂಬಲಾಗಲಿಲ್ಲ. ಫೋನ್ ಚಾರ್ಜ್ ಆಗುತ್ತಿತ್ತು.  ಮತ್ತು ಫೋನ್‌ ಸ್ವಿಚ್ ಆನ್‌ ಮಾಡಿದಾಗ ಅದರಲ್ಲಿ ಆಗಸ್ಟ್ 13ರ (ಫೋನ್ ನದಿಗೆ ಬಿದ್ದ ದಿನ) ದಿನಾಂಕದೊಂದಿಗೆ ಪುರುಷ ಮತ್ತು ಮಹಿಳೆಯ ಸ್ಕ್ರೀನ್‌ಸೇವರ್ ಕಂಡುಬಂತು.

ಈ ವಿಚಾರವನ್ನು ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಬಳಿಕ ಪ್ಯಾಚೆಕೊ ಅವರ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ 4000 ಜನ ಶೇರ್ ಮಾಡಿಕೊಂಡಿದ್ದಾರೆ. ಆದರೆ ಫೋನ್‌ ಮಾಲೀಕ ಡೇವಿಸ್ ಸಾಮಾಜಿಕ ಮಾಧ್ಯಮದಲ್ಲಿ ಇರಲಿಲ್ಲ. ಆದಾಗ್ಯೂ, ಡೇವಿಸ್‌ ಅವರ  ಸ್ನೇಹಿತರು ಫೋನ್ ಅನ್ನು ಗುರುತಿಸಿದರು ಮತ್ತು ಡೇವಿಸ್ ಹಾಗೂ ಪಚೆಕೊ ಮಧ್ಯೆ ಸಂಪರ್ಕ ಸಾಧಿಸಲು ಸಹಾಯ ಮಾಡಿದರು.

ನಾವು ಇಬ್ಬರಿದ್ದ ದೋಣಿಯಲ್ಲಿದ್ದೆವು. ಹಾಗೂ ನಾವಿಬ್ಬರು ಕೆಳಗೆ ಬಿದ್ದೆವು. ಈ ವೇಳೆ ನನ್ನ ಫೋನ್‌ ನನ್ನ ಪ್ಯಾಂಟ್‌ನ ಹಿಂದಿನ ಜೇಬಿನಲ್ಲಿತ್ತು. ಅದು ಕೆಳಗೆ ಬಿದ್ದಿತ್ತು. ಫೋನ್ ಕತೆ ಮುಗಿತು ಎಂದು ನಾನು ಭಾವಿಸಿದೆ ಎಂದು ಡೇವಿಸ್ ಬಿಬಿಸಿಗೆ ತಿಳಿಸಿದರು. ಅಲ್ಲದೇ ಪಚೆಕೊ ತನ್ನ ಫೋನ್‌ಗಾಗಿ ತೆಗೆದುಕೊಂಡ ಎಲ್ಲಾ ಪ್ರಯತ್ನಗಳಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಎಲ್ಲಾ ಐಫೋನ್‌ಗಳು IP68 ರೇಟ್‌ನ ಫೋನ್‌ಗಳಾಗಿವೆ. ಈ ಫೋನ್‌ಗಳು 1.5 ಮೀಟರ್ ಶುದ್ಧ ನೀರಿನಲ್ಲಿ 30 ನಿಮಿಷಗಳವರೆಗೆ ಬದುಕಬಲ್ಲವು. ಆದರೆ ಇದು ಆಗಾಗ್ಗೆ ಸಂಭವಿಸಿದ ಅದ್ಭುತವಾಗಿದೆ.

Latest Videos
Follow Us:
Download App:
  • android
  • ios