ಪ್ರಸಿದ್ಧ ವಿಶ್ಲೇಷಕ ಮಿಂಗ್ ಚಿ ಕುವೊ ಐಫೋನ್ 15 ಮಾದರಿಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳೊಂದಿಗೆ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ.

iPhone USB Type-C: ಚಾರ್ಜರ್ ಹೊತ್ತುಕೊಂಡು ಪ್ರಯಾಣಿಸುವುದು ಐಫೋನ್ ಬಳಕೆದಾರರ ದೊಡ್ಡ ಸಮಸ್ಯೆ. ಸಾಮಾನ್ಯವಾಗಿ ಆಂಡ್ರಾಯ್ಡ್‌ನಲ್ಲಿ ಬಳಕೆಯಾಗುವ ಚಾರ್ಜರ್‌ಗಳನ್ನು ಐಫೋನ್‌ಗಳಲ್ಲಿ ಬಳಸಲು ಸಾಧ್ಯವಿಲ್ಲ. ಈಗ ಲೇಟೆಸ್ಟಾಗಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನುಗಳು ಯುಎಸ್‌ಬಿ ಟೈಪ್-ಸಿ ಚಾರ್ಜರ್‌ನೊಂದಿಗೆ ಬಿಡುಗಡೆಯಾಗುತ್ತಿವೆ. ಆದರೆ ಆಪಲ್‌ನ ಐಫೋನ್ ಲೈಟ್ನಿಂಗ್ ಪೋರ್ಟ್ ಹೊಂದಿದ್ದು, ಯುಎಸ್‌ಬಿ ಟೈಪ್-ಸಿ ಪೋರ್ಟ್ ಹೊಂದಿಕೆಯಾಗುವುದಿಲ್ಲ. ಹೀಗಾಗಿ ಐಫೋನ್ ಬಳಕೆದಾರರಿಗೆ ಸಾಮಾನ್ಯ ಚಾರ್ಜರ್‌ ಬಳಸಲು ಅವಕಾಶಗಳೇ ಇರುವುದಿಲ್ಲ. ಐಫೋನ್ ಲೈಟಿಂಗ್ ಪೋರ್ಟ್ ಬದಲಿಗೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ನೀಡಿದರೆ ಉತ್ತಮ ಎಂಬುದು ಹಲವರ ಅಭಿಪ್ರಾಯ

ಟೆಕ್‌ ದೈತ್ಯ ಆಪಲ್ ಅಂತಿಮವಾಗಿ ಗ್ರಾಹಕರ ಕೆಲವು ವಿನಂತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ವರದಿಗಳು ಸೂಚಿಸಿವೆ. ಕ್ಯುಪರ್ಟಿನೋ ಮೂಲದ ಕಂಪನಿ ಆಪಲ್ ಲೈಟಿಂಗ್ ಪೋರ್ಟ್‌ಗಳ ಬದಲಿಗೆ ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳೊಂದಿಗೆ ಐಫೋನ್‌ಗಳನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿiPhone, iPadಗಾಗಿ ಫೋಲ್ಡಬಲ್ ಡಿಸ್ಪ್ಲೇ ಪರೀಕ್ಷಿಸಲು ಪ್ರಾರಂಭಿಸಿದ ಆ್ಯಪಲ್‌

ಭವಿಷ್ಯದ ಐಫೋನ್‌ಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಾಗಿ ಲೈಟಿಂಗ್ ಪೋರ್ಟ್ ಮತ್ತು ಸ್ಪಾಟ್ ತೆಗೆದು ಹಾಕಬಹುದು ಆದಾಗ್ಯೂ, ಆಪಲ್ 2023 ರವರೆಗೆ ಈ ಬದಲಾವಣೆ ತರುವುದಿಲ್ಲ ಎಂದು ಬ್ಲೂಮ್‌ಬರ್ಗ್‌ ವರದಿಯಲ್ಲಿ ಮಾರ್ಕ್ ಜರ್ಮನ್ ತಿಳಿಸಿದ್ದಾರೆ. ಇದರರ್ಥ ಮುಂಬರುವ ಐಫೋನ್ 14 ಸರಣಿಯು ಸಾಂಪ್ರದಾಯಿಕ ಲೈಟಿಂಗ್ ಪೋರ್ಟ್ ಹೊಂದಿರುತ್ತದೆ. ಆಪಲ್ ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳಿಗೆ ಬದಲಾಯಿಸುವ ಬಗ್ಗೆ ಲೆಕ್ಕವಿಲ್ಲದಷ್ಟು ವದಂತಿಗಳಿವೆ. 

ಹಿಂದೆ, ಹೆಸರಾಂತ ವಿಶ್ಲೇಷಕ ಮಿಂಗ್ ಚಿ ಕುವೊ ಐಫೋನ್ 15 ಮಾದರಿಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳೊಂದಿಗೆ ಬರಬಹುದು ಎಂದು ಭವಿಷ್ಯ ನುಡಿದಿದ್ದರು. ವದಂತಿಯು ನಂಬಲರ್ಹವಾಗಿದೆ ಏಕೆಂದರೆ ಆಪಲ್ ಈಗ ಐಪ್ಯಾಡ್‌ಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳನ್ನು ಬಳಸಲು ಪ್ರಾರಂಭಿಸಿದೆ, ಇದರಿಂದಾಗಿ ಟೈಪ್‌ ಸಿ ಚಾರ್ಜಿಂಗ್ ವಿಧಾನವು ಆಪಲ್‌ನ ಅಳವಡಿಸಿಕೊಳ್ಳುವ ಸಾಧ್ಯತೆಗಳಿವೆ. 

ಇದನ್ನೂ ಓದಿ: ಈ ಕೆಲಸದಲ್ಲಿ ಐಫೋನ್‌ಗಿಂತ ಆ್ಯಂಡ್ರಾಯ್ಡ್ ಬಳಕೆದಾರರೇ ಬೆಸ್ಟ್ ಅನ್ನುತ್ತೆ ಈ ಇಂಟರಸ್ಟಿಂಗ್ ಅಧ್ಯಯನ

ಯುರೋಪ್‌ ಕಾನೂನು: ಇನ್ನು ಬಳಕೆದಾರರಿಗೆ ಸುಲಭವಾಗಿಸಲು ಆಪಲ್‌ ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳನ್ನು ಅಳವಡಿಸಿಕೊಳ್ಳುತ್ತಿಲ್ಲ, ಆದರೆ ಯುರೋಪ್‌ನಲ್ಲಿ ಕಡ್ಡಾಯಗೊಳಿಸಬಹುದಾದ ಕಾನೂನು ಅವಶ್ಯಕತೆಗಳಿಂದಾಗಿ ಕಂಪನಿಯು ಈ ಬದಲಾವಣೆಯನ್ನು ತರುತ್ತಿರಬಹುದು ಎಂದು ವರದಿಗಳು ಹೇಳಿವೆ. ಯುರೋಪಿಯನ್ ಶಾಸನವು ಯುರೋಪ್‌ನಲ್ಲಿರುವ ಎಲ್ಲಾ ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಏರ್‌ಪಾಡ್‌ಗಳಲ್ಲಿ ಯುಎಸ್‌ಬಿ ಸಿ ಪೋರ್ಟ್ ನೀಡಲು ಕಂಪನಿಯನ್ನು ಒತ್ತಾಯಿಸಿದೆ ಎಂದು ವರದಿಯಾಗಿದೆ. 

ಆಪಲ್‌ಗೆ ಮಾತ್ರವಲ್ಲ, ಎಲ್ಲಾ ಹೊಸ ಸಾಧನಗಳು ಯುಎಸ್‌ ಬಿ ಟೈಪ್-ಸಿ ಪೋರ್ಟ್ ಒಳಗೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ಯುರೋಪ್‌ನಲ್ಲಿ ಸಾಧನಗಳನ್ನು ಮಾರಾಟ ಮಾಡುವ ಎಲ್ಲಾ ಸ್ಮಾರ್ಟ್‌ಫೋನ್ ತಯಾರಕರು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ಡಿಜಿಟಲ್ ಕ್ಯಾಮೆರಾಗಳು, ಹೆಡ್‌ಫೋನ್‌ಗಳು ಮತ್ತು ಇತರ ಸಾಧನಗಳಲ್ಲಿ ಯುಎಸ್‌ಬಿ ಪೋರ್ಟ್‌ಗಳನ್ನು ಸೇರಿಸಲು ಎಲೆಕ್ಟ್ರಾನಿಕ್ ತಯಾರಕರನ್ನು ಕೇಳಲಾಗಿದೆ. ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳೊಂದಿಗೆ ಬಂದರೂ, ಹೊಸ ಆರ್ಡರ್ ನಿರ್ದಿಷ್ಟವಾಗಿ ಆಪಲ್ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. 

ನಿಯಮ ಏನು?: "ಹೊಸ ನಿಯಮಗಳು ಗ್ರಾಹಕರು ಹೊಸ ಸಾಧನವನ್ನು ಖರೀದಿಸಿದಾಗ ಪ್ರತಿ ಬಾರಿ ಹೊಸ ಚಾರ್ಜರ್ ಮತ್ತು ಕೇಬಲ್ ಅಗತ್ಯವಿಲ್ಲ ಎಂದು ಖಚಿತಪಡಿಸುತ್ತದೆ ಮತ್ತು ಅವರ ಎಲ್ಲಾ ಸಣ್ಣ ಮತ್ತು ಮಧ್ಯಮ ಗಾತ್ರದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಒಂದು ಚಾರ್ಜರ್ ಬಳಸಬಹುದು. ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಡಿಜಿಟಲ್ ಕ್ಯಾಮೆರಾಗಳು, ಹೆಡ್‌ಫೋನ್‌ಗಳು ಮತ್ತು ಹೆಡ್‌ಸೆಟ್‌ಗಳು, ಹ್ಯಾಂಡ್‌ಹೆಲ್ಡ್ ವೀಡಿಯೋ ಗೇಮ್ ಕನ್ಸೋಲ್‌ಗಳು ಮತ್ತು ಪೋರ್ಟಬಲ್ ಸ್ಪೀಕರ್‌ಗಳು, ವೈರ್ಡ್ ಕೇಬಲ್ ಮೂಲಕ ಚಾರ್ಜ್ ಮಾಡಬಹುದಾದ‌ ಸಾಧನಗಳು, ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿರಬೇಕು,” ಎಂದು ಮಾರುಕಟ್ಟೆ ಮತ್ತು ಗ್ರಾಹಕ ರಕ್ಷಣೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.