ಆಧಾರ್ ದೃಢೀಕರಣಕ್ಕೆ ಚಿಂತೆ ಬೇಡ! ಬಂದಿದೆ ಹೊಸ ಸೌಲಭ್ಯ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Aug 2018, 8:22 AM IST
UIDAI to roll out face recognition feature
Highlights

-ಮುಖ ಚಹರೆ ಮೂಲಕವೂ ಆಧಾರ್ ದೃಢೀಕರಣ 

- ಯುಐಡಿಎಐನಿಂದ ಹೊಸ ಸೌಲಭ್ಯ 

 

ನವದೆಹಲಿ (ಆ. 19): ಮುಖದ ಚಹರೆ ಮೂಲಕವೂ ಆಧಾರ್ ದೃಢೀಕರಿಸುವ ಸೌಲಭ್ಯಕ್ಕೆ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಮುಹೂರ್ತ ನಿಗದಿಪಡಿಸಿದೆ.

ಮೊದಲ ಹಂತದಲ್ಲಿ ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳು ಸೆ.15 ರಿಂದ ಈ ಸೌಲಭ್ಯವನ್ನು ಕಲ್ಪಿಸಲಿವೆ. ಬಳಿಕ ಹಂತಹಂತವಾಗಿ ಇತರೆಡೆಗೂ ವಿಸ್ತರಣೆ ಆಗಲಿದೆ. 

ಆಧಾರ್ ದೃಢೀಕರಣ ಮೂಲಕವೇ ಮೊಬೈಲ್ ಸಿಮ್‌ಗಳನ್ನು ವಿತರಣೆ ಮಾಡಲು ಬಯಸುವ ದೂರವಾಣಿ ಸೇವೆ ಒದಗಿಸುವ ಕಂಪನಿಗಳು ಆಧಾರ್ ಹೊಂದಿರುವ ವ್ಯಕ್ತಿಯ ಮುಖದ ತಾಜಾ ಚಿತ್ರವನ್ನು ಸೆರೆ ಹಿಡಿದು, ಅದನ್ನು ಇಕೆವೈಸಿ ಜತೆ
ಹೋಲಿಕೆ ಮಾಡಬೇಕು.
 

loader