ನವದೆಹಲಿ (ನ. 29): ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇವೆಗಳು ಭಾರತ ಸೇರಿ ವಿಶ್ವದ ಹಲವೆಡೆ ಗುರುವಾರ ಸಂಜೆಯ ಬಳಿಕ ವ್ಯತ್ಯಯಗೊಂಡಿದ್ದು, ಬಳಕೆದಾರರು ಕಿರಿಕಿರಿ ಅನುಭವಿಸುವಂತಾಗಿದೆ.

ಡಿಸೆಂಬರ್‌ನಿಂದ ಏರ್ಟೆಲ್, ಜಿಯೋ ದರದಲ್ಲಿ ಭಾರೀ ಹೆಚ್ಚಳ : ದುಡ್ಡು ಉಳಿಸಲು ಇಲ್ಲಿದೆ ಐಡಿಯಾ

ಭಾರತದಲ್ಲಿ ರಾತ್ರಿ 8 ಗಂಟೆಯ ಬಳಿಕ ಫೇಸ್‌ಬುಕ್ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಕೆಲವರಿಗೆ ಲಾಗ್ ಇನ್ ಆಗಲೂ ಸಾಧ್ಯವಾಗಿಲ್ಲ. ಅದೇ ರೀತಿ ಇನ್‌ಸ್ಟಾಗ್ರಾಮ್ ಸೇವೆ ಕೂಡ ಮಂದಗತಿ ದಾಖಲಿಸಿದೆ. ಇದು ಜಾಲತಾಣಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಟ್ವೀಟರ್ ಮೂಲಕ ದೂರು ದಾಖಸಿದಿದ್ದಾರೆ. ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಲು ಯತ್ನಿಸುತ್ತಿವುದಾಗಿ ಫೇಸ್ ಬುಕ್ ಹಾಗೂ ಇನ್ಸಸ್ಟಾಗ್ರಾಮ್‌ಗಳು ತಿಳಿಸಿವೆ. 

ವಾಟ್ಸಾಪ್ ಬಳಕೆದಾರರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.  ಕೆಲವರಿಗೆ ಮಾತ್ರ ಈ ಸಮಸ್ಯೆ ಕಂಡು ಬಂದಿದೆ.