ಹುರ್ರೆ... ಶೀಘ್ರದಲ್ಲೇ ಹೊಸ ಪೀಳಿಗೆಯ ಸ್ಯಾಮ್ಸಂಗ್ ಫೋನ್ ಭಾರತದಲ್ಲಿ ಬಿಡುಗಡೆ!

2 ವರ್ಷಗಳ ಹಿಂದೆ ಮೊಬೈಲ್ ಹೇಗಿತ್ತು? ಎಂಬುವುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಬಳಿಕ ಅದು ತೆಳ್ಳಗಾಗುತ್ತಾ ಹೋಯ್ತು, ಮತ್ತೆ ದಪ್ಪವಾಯಿತು, ಫೋಲ್ಡ್ ಮಾಡೋದು, ಸ್ಲೈಡ್ ಮಾಡೋದು.. ಹೀಗೆ ಬೇರೆ ಬೇರೆ ರೂಪಗಳಲ್ಲಿ ಫೋನ್‌ಗಳು ಬಂದು ಹೋದುವು. ಬಟನ್‌ಗಳು ಹೋಗಿ ಟಚ್ ಸ್ಕ್ರೀನ್ ಬಂತು, ಒಂದು ಕಾಲದಲ್ಲಿ ಮೊಬೈಲ್ ಕ್ಯಾಮೆರಾ ಊಹಿಸುವುದು ಕಷ್ಟವಾಗಿತ್ತು, ಈಗ ಐದೈದು ಕ್ಯಾಮೆರಾಗಳಿವೆ! ಈಗಿನ ಸ್ಮಾರ್ಟ್‌ಫೋನುಗಳಲ್ಲಿ ಏನಿದೆ? ಏನಿಲ್ಲ? ಹೊಸ ಪೀಳಿಗೆಯ ಹೊಸ ತಂತ್ರಜ್ಞಾನದ ಫೋನ್ ಬಿಡುಗಡೆಗೆ Samsung ಸಿದ್ಧವಾಗಿದೆ. 
 

Samsung Galaxy Fold Smartphone Could Launch in India In May

ಸ್ಮಾರ್ಟ್ ಪೋನ್ ಕ್ಷೇತ್ರದಲ್ಲಿ ಸಂಚಲನ ಹುಟ್ಟುಹಾಕಿರುವ Samsungನ ಹೊಸ ಪೀಳಿಗೆಯ ಹೊಸ ಫೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ದವಾಗಿದೆ.   

ಬಟನ್‌ಗಳು ಹೋಗಿ ಟಚ್ ಸ್ಕ್ರೀನ್ ಬಂತು, ಒಂದು ಕಾಲದಲ್ಲಿ ಮೊಬೈಲ್ ಕ್ಯಾಮೆರಾ ಊಹಿಸುವುದು ಕಷ್ಟವಾಗಿತ್ತು, ಈಗ ಐದೈದು ಕ್ಯಾಮೆರಾಗಳಿವೆ! ಈಗಿನ ಸ್ಮಾರ್ಟ್‌ಫೋನುಗಳಲ್ಲಿ ಏನಿದೆ? ಏನಿಲ್ಲ? ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಫೋನ್ ಗಾತ್ರ ಕಿಸೆಯಲ್ಲಿ ಇಡುವಷ್ಟು ಸಣ್ಣದಿರಬೇಕು, ಅಥವಾ ಕೈಯಲ್ಲಿ ಸುಲಭವಾಗಿ ಹಿಡಿಯುವಂತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದ್ರೆ ವಿಡಿಯೋ ವಿಚಾರ ಬಂದ್ರೆ, ಫೋನ್ ಪರದೆ ಟ್ಯಾಬ್‌ನಷ್ಟು ದೊಡ್ಡದಿರಬೇಕು, ಎಂದು ಎಲ್ಲರ ಆಸೆ. ಈಗ ತಂತ್ರಜ್ಞಾನ ಅದಕ್ಕೂ ಪರಿಹಾರ ನೀಡಿದೆ. ಟಚ್ ಸ್ಕ್ರೀನ್ ಫೋನಿನಲ್ಲಿ ಫೋಲ್ಡೇಬಲ್ [ಮಡಚುವ] ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು Samsung ತಯಾರಿ ನಡೆಸಿದೆ.

Samsungನ ಹೊಸ ಫೋನ್  ಬಗ್ಗೆ ನಾವು ಈ ಹಿಂದೆ ವರದಿ ಮಾಡಿದ್ದೆವು. BGR India ವರದಿ ಮಾಡಿರುವ ಪ್ರಕಾರ, Samsung ಹೊಸ ಫೋನ್ ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದರ ಜೊತೆ Samsung Galaxy A80 ಫೋನ್ ಕೂಡಾ ಬಿಡುಗಡೆಯಾಗುವುದು ಎಂದು ನಿರೀಕ್ಷಿಸಲಾಗಿದೆ.

ಈ ಫೋನಿನ ಸೈಜು ಮೊದಲು 4.6 ಇಂಚು ಇರುತ್ತದೆ. ಅದೇ ಫೋನನ್ನು ತೆರೆದರೆ 7.3 ಇಂಚಿನಷ್ಟು ಡಿಸ್‌ಪ್ಲೇ ಕಾಣಿಸುತ್ತದೆ. ಒಂದು ಟ್ಯಾಬ್‌ನಷ್ಟು. ಅಥವಾ ಅದಕ್ಕಿಂತ ದೊಡ್ಡದು. ನೀವು ಫೋನ್‌ ಬಂದರೆ ತೆರೆಯಬೇಕಿಲ್ಲ. ಹಾಗೆಯೇ ರಿಸೀವ್‌ ಮಾಡಿ ಮಾತನಾಡಬಹುದು. ಆದರೆ ಇಂಟರ್‌ನೆಟ್‌ ಬಳಸುವಾಗ ಈ ಫೋನನ್ನು ತೆರೆದರೆ ಕೆಲಸವಿನ್ನೂ ಸುಲಭ.

ಇಂಟರೆಸ್ಟಿಂಗ್‌ ಅಂದ್ರೆ ಮೂರು ಪೇಜನ್ನು ಒಮ್ಮೆಲೇ ತೆರೆಯಬಹುದು. ಉದಾಹರಣೆಗೆ Youtubeನಲ್ಲಿ ಏನೋ ವಿಡಿಯೋ ನೋಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಈ ವಿಡಿಯೋ ಕುರಿತ ಮಾಹಿತಿಯನ್ನು Googleನಲ್ಲಿ ಬ್ರೌಸ್‌ ಮಾಡಬಹುದು. ಅದೇ ವೇಳೆಯಲ್ಲಿ ವಾಟ್ಸಪ್‌ ಓಪನ್‌ ಮಾಡಿ ಚಾಟ್‌ ಕೂಡ ಮಾಡಬಹುದು. ಈ ಮೂರೂ ಆ್ಯಪ್‌ಗಳೂ ತೆರೆದಿರುತ್ತವೆ. ಮಿನಿಮೈಸ್‌ ಮಾಡುವ ಅವಶ್ಯಕತೆಯೇ ಇಲ್ಲ.

ಇದನ್ನೂ ಓದಿ: ನಂಬ್ತೀರೋ ಇಲ್ವೋ ಸಾರ್... 2019ರಲ್ಲಿ ಮಡಚಿ ಕಿಸೆಗಿಡುವ ಫೋನ್‌ಗಳದ್ದೇ ಕಾರುಬಾರ್!

ಇನ್‌ಫಿನಿಟಿ ಫ್ಲೆಕ್ಸ್‌ ಡಿಸ್‌ಪ್ಲೇ ಹೊಂದಿರುವ ಮೊಬೈಲ್‌ ಇದು. ಮಡಚುವ ಮೊಬೈಲ್‌ ಆಗಿದ್ದರೂ ಮಧ್ಯದಲ್ಲಿ ಒಂದು ಸಣ್ಣ ಗೆರೆ ಇರುವಂತೆಯೂ ಕಾಣಿಸುವುದಿಲ್ಲ. ಎರಡು ಬ್ಯಾಟರಿ ಇದೆ. 4380 mAh ಸಾಮರ್ಥ್ಯದ್ದು. ಇನ್ನು ಆರು ಕ್ಯಾಮೆರಾಗಳಿವೆ. ಮೂರು ಹಿಂದೆ, ಎರಡು ಪಕ್ಕದಲ್ಲಿ, ಒಂದು ಮುಂದೆ. ಹೀಗೆಲ್ಲಾ ಸಾಮರ್ಥ್ಯ ಇರುವ ಈ ಮೊಬೈಲ್‌ ಬಳಸುವುದೇ ಹಬ್ಬ. ಅದಕ್ಕೆ ತಕ್ಕಂತೆ ಇದರ ಬೆಲೆಯೂ ಇದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸುವುದರಿಂದ ಇದರ ಬೆಲೆಯೂ ಅಷ್ಟೇ ದುಬಾರಿಯಾಗಿರಲಿದೆ. ಅಮೆರಿಕಾದಲ್ಲಿ ಇದರ ಬೆಲೆ ಽ1980. ಹಾಗಾದ್ರೆ ಭಾರತದಲ್ಲಿ  ಅಂದಾಜು 1.25 ರಿಂದ 1.50 ಲಕ್ಷ ರೂ. ಬೆಳೆಬಾಳಬಹುದು!  
 

Latest Videos
Follow Us:
Download App:
  • android
  • ios