ಮೊಬೈಲ್ ಪ್ರಿಯರಿಗೆ ಸಿಹಿಸುದ್ದಿ, ಮಾರುಕಟ್ಟೆಗೆ ಬಂತು Samsung Galaxy A70; ಬೆಲೆ, ಹೇಗಿದೆ?

Samsungನ ಬಹುನಿರೀಕ್ಷಿತ Samsung Galaxy A70 ಭಾರತೀಯ ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಏನೇನಿದೆ ಈ ಫೋನ್‌ನಲ್ಲಿ? ಬೆಲೆ ಎಷ್ಟು? ಇಲ್ಲಿದೆ ವಿವರ...

Samsung Galaxy A70 Smartphone Launched in India Price Specifications

ಮೊಬೈಲ್ ಪ್ರಿಯರ  ಬಹುನಿರೀಕ್ಷಿತ Samsung Galaxy A70ಯು ಕೊನೆಗೂ ಮಾರುಕಟ್ಟೆಗೆ ಪದಾರ್ಪಣೆ ಮಾಡಿದೆ..

Samsung Galaxy A70 ಹಾಗೂ Samsung Galaxy A80 ಈ ತಿಂಗಳಿನ ಆರಂಭದಲ್ಲಿ ಬ್ಯಾಂಕಾಕ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದುವು. ಈಗ ಭಾರತದ ಮಾರುಕಟ್ಟೆಯಲ್ಲೂ Samsung Galaxy A70 ಲಭ್ಯವಿದೆ.

ಇದನ್ನೂ ಓದಿ: ಈಗ​ಲೂ ಲಕ್ಷಾಂತರ ಜನ​ರ ನೆಚ್ಚಿನ ರಹಸ್ಯ ಪಾಸ್‌​ವ​ರ್ಡ್‌ ಇದು!

Infinity-U ಪರದೆ ಹೊಂದಿರುವ  Samsung Galaxy A70 ಹಿಂಭಾಗದಲ್ಲಿ 3 ಕ್ಯಾಮೆರಾಗಳನ್ನು ಮತ್ತು 32 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಹೊಂದಿದೆ.

ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿರುವ ಈ ಫೋನ್ 6GB RAM ಹಾಗೂ 128GB [ಇನ್ ಬಿಲ್ಟ್] ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. ಮೈಕ್ರೋ SD ಕಾರ್ಡ್ ಮೂಲಕ ಇದನ್ನು 512 GB ವರೆಗೂ ವಿಸ್ತರಿಸಬಹುದು.

ಡ್ಯುಯಲ್ ಸಿಮ್ ಕಾರ್ಡ್, Android Pie , 6.7 (1080x2400 pixels)  ಇಂಚಿನ ಪರದೆ, 20:9 ಆ್ಯಸ್ಪೆಕ್ಟ್ ಅನುಪಾತ, Snapdragon 675 SoC ಪ್ರೊಸೆಸರ್, 6GB RAMನ್ನು ಹೊಂದಿದೆ.  

ಸೂಪರ್ ಫಾಸ್ಟ್ ಚಾರ್ಜಿಂಗ್ ಗೆ ಪೂರಕವಾದ 4500mAh  ಬ್ಯಾಟರಿಯನ್ನು Samsungನ ಹೊಸ ಫೋನ್ ಹೊಂದಿದೆ.

ಅಂದ ಹಾಗೇ ಇದರ ಬೆಲೆ ಎಷ್ಟೆಂಬುದು ತಿಳಿಯುವ ಕುತೂಹಲವೇ? ಈಗ ಮಾರುಕಟ್ಟೆಯಲ್ಲಿ Samsung Galaxy A70 ಯ ಬೆಲೆ  28,990.

Samsung Galaxy A80 ಭಾರತದಲ್ಲಿ ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: TikTok ಬೆನ್ನಲ್ಲೇ ಮತ್ತೊಂದು ಜನಪ್ರಿಯ ಆ್ಯಪ್ ಬ್ಯಾನ್?

Latest Videos
Follow Us:
Download App:
  • android
  • ios