TikTok ಬೆನ್ನಲ್ಲೇ ಮತ್ತೊಂದು ಜನಪ್ರಿಯ ಆ್ಯಪ್ ಬ್ಯಾನ್?

ಟಿಕ್‌ ಟಾಕ್‌ ಬಳಿಕ ಮತ್ತೊಂದು ಜನಪ್ರಿಯ ಆ್ಯಪ್ ಪ್ಲೇಸ್ಟೋರ್‌ನಿಂದ ಔಟ್‌?| ಡೌನ್‌ಲೋಡ್‌ ತಡೆಯುವಂತೆ ಗೂಗಲ್‌ಗೆ ರಾಜ್‌ಕೋಟ್‌ ಪೊಲೀಸರ ಮನವಿ

After TikTok PUBG Players on Twitter Fear Their Game Could be Next

ರಾಜ್‌ಕೋಟ್‌[ಏ.21]: ಮಕ್ಕಳು ಮತ್ತು ಯುವಸಮೂಹವನ್ನು ಬಹುವಾಗಿ ಆವರಿಸಿಕೊಂಡು ಅನಾಹುತ ಸೃಷ್ಟಿಸುತ್ತಿರುವ ಟಿಕ್‌ ಟಾಕ್‌ ಆ್ಯಪ್‌ ಅನ್ನು ಗೂಗಲ್‌ ಪ್ಲೇಸ್ಟೋರ್‌ ಮತ್ತು ಆ್ಯಪಲ್‌ನಿಂದ ಡೌನ್‌ಲೋಡ್‌ಗೆ ನಿಷೇಧ ಹೇರಿದ ಬೆನ್ನಲ್ಲೇ, ಮತ್ತೊಂದು ಸಾಂಕ್ರಾಮಿಕ ಆಟವಾದ ಪಬ್‌ಜೀಗೂ ಇದೇ ಗತಿ ಕಾಣುವ ಸುಳಿವು ಸಿಕ್ಕಿವೆ.

ಪಬ್‌ಜೀ ಆಡುತ್ತಿದ್ದ ಹಲವರನ್ನು ಇತ್ತೀಚೆಗೆ ಬಂಧಿಸಿದ್ದ ರಾಜ್‌ಕೋಟ್‌ ಪೊಲೀಸರು ಇದೀಗ, ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಐಪಿ ವಿಳಾಸದಿಂದ ಪಬ್‌ಜೀ ಆಟವನ್ನು ಡೌನ್‌ಲೋಡ್‌ ಮಾಡದಂತೆ ನೋಡಿಕೊಳ್ಳಿ ಎಂದು ಗೂಗಲ್‌ ಸಂಸ್ಥೆಗೆ ಮನವಿ ಮಾಡಿದೆ.

ಪಬ್‌ಜೀ ಆಟಕ್ಕೆ ಮಕ್ಕಳು ಮತ್ತು ಯುವಕರು ದಾಸರಾಗುತ್ತಿರುವ ಜೊತೆಗೆ ಆಟವು, ಅವರ ವರ್ತನೆ ಮೇಲೂ ಕೆಟ್ಟಪರಿಣಾಮಗಳನ್ನು ಬೀರುತ್ತಿದೆ. ಈ ಕಾರಣಕ್ಕಾಗಿಯೇ ಈ ಆಟವನ್ನು ನಿಷೇಧಿಸಬೇಕು ಎಂಬ ಭಾರೀ ಬೇಡಿಕೆ ವ್ಯಕ್ತವಾಗಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರದ ಸೂಚನೆ ಅನ್ವಯ ಗೂಗಲ್‌ ಮತ್ತು ಆ್ಯಪಲ್‌ ಸಂಸ್ಥೆಗಳು ಟಿಕ್‌ ಟಾಕ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಸೌಲಭ್ಯ ತೆಗೆದು ಹಾಕಿದ್ದವು.

Latest Videos
Follow Us:
Download App:
  • android
  • ios