ಕೈಯಲ್ಲೂ ಸೈ, ಜೇಬಲ್ಲೂ ಜೈ! ಸ್ಯಾಮ್ಸಂಗ್‌ ಹೊಸ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌

  • ಇತ್ತೀಚೆಗೆ ಹೊಸ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಸ್ಯಾಮ್ಸಂಗ್
  • ನೆಕ್ಸ್ಟ್‌ ಜನರೇಶನ್‌ ಮಾದರಿಯ  Galaxy A50, A30 ಹಾಗೂ A10 ಸೀರೀಸ್‌ ಫೋನ್‌ಗಳು
Samsung Galaxy A Series Smartphones Specification Prices

ಯುವ ಜನರಿಗೆ ಇಷ್ಟವಾಗುವಂಥ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ ಸೀರೀಸ್‌ ಅನ್ನು ಸ್ಯಾಮ್‌ಸಂಗ್‌ ಕಂಪೆನಿ ಬಿಡುಗಡೆ ಮಾಡಿದೆ. Galaxy A50, A30 ಹಾಗೂ A10 ಸೀರೀಸ್‌ನ ಮೊಬೈಲ್‌ಗಳು ನೆಕ್ಸ್ಟ್‌ ಜನರೇಶನ್‌ ಮಾದರಿಯಲ್ಲಿವೆ. 

Galaxy A50 6GB RAM, 64 GB ಸ್ಟೋರೇಜ್‌ ಹೊಂದಿದೆ. ಇದೇ ಮಾದರಿಯಲ್ಲಿ 4 GB RAMನ ಮೊಬೈಲ್‌ಗಳೂ ಇವೆ. ಇನ್‌ಫಿನಿಟಿ ಯು ಡಿಸ್ಪ್ಲೇ , ವೇಗವಾದ ಚಾರ್ಜಿಂಗ್‌ ಹಾಗೂ ಅಲ್ಟ್ರಾ ವೈಡ್‌ ಕ್ಯಾಮೆರಗಳು ಈ ಮೊಬೈಲ್‌ನ ಸ್ಪೆಷಲ್‌ ಫೀಚರ್‌ಗಳು. 

ಇದರಲ್ಲಿ ಒಟ್ಟು ಮೂರು ಕ್ಯಾಮೆರಗಳಿವೆ. ಮೇನ್‌ ಕ್ಯಾಮೆರಾ 25 MP ರೆಸೆಲ್ಯೂಶನ್‌ ಹೊಂದಿದ್ದು, F1.7 ಲೆನ್ಸ್‌ ಮೂಲಕ ಕಾರ್ಯಾಚರಿಸುತ್ತೆ. ಮಂದ ಬೆಳಕಿನಲ್ಲೂ ಚೆಂದದ ಫೋಟೋ ಸೆರೆಹಿಡಿಯಬಹುದು. ಇನ್ನೊಂದು ಅಲ್ಟ್ರಾ  ವೈಡ್‌ ಕ್ಯಾಮೆರಾ 8 ಮೆಗಾಫಿಕ್ಸೆಲ್‌ ಸಾಮರ್ಥ್ಯವಿದ್ದು. ಇದರ ಮೂಲಕ 123 ಡಿಗ್ರಿ ಫೀಲ್ಡ್‌ ವ್ಯೂ ಸಿಗುತ್ತೆ. 

ಇದನ್ನೂ ಓದಿ: ವಾಟ್ಸಪ್‌ನಲ್ಲಿ ಮಹತ್ವದ ಬದಲಾವಣೆ; ಬರುತ್ತಿದೆ ಹೊಸ ಫೀಚರ್!

ಅಂದರೆ ಕಣ್ಣಲ್ಲಿ ಕಾಣುವಷ್ಟು ವಿಸ್ತಾರದ ಫೋಟೋಗಳನ್ನು ಕಣ್ಣಲ್ಲಿ ಕಂಡಷ್ಟೇ ಕ್ಲಿಯರ್‌ ಆಗಿ ಕ್ಲಿಕ್ಕಿಸಬಹುದು. ವಿಶಾಲವಾದ 6.4 ಎಫ್‌ಎಚ್‌ಡಿ ಸ್ಕ್ರೀನ್‌ ಇದೆ. ಗೇಮ್‌ ಪ್ರಿಯರಿಗೆ ಇಷ್ಟವಾಗುವ ಮೊಬೈಲ್‌. ಟೆನ್ಶನ್‌ ಇಲ್ದೇ ಕೂಲ್‌ ಆಗಿ ಯಾವುದೇ ನಿರ್ಬಂಧಗಳಿಲ್ಲದೇ ಗೇಮ್‌ ಆಡಬಹುದು. 

Galaxy A30 ಸ್ಮಾರ್ಟ್‌ಫೋನ್‌ನಲ್ಲಿ 16 MP ಮೇನ್‌ ಕ್ಯಾಮೆರಾ ಇದೆ. ಉಳಿದಂತೆ ಹೆಚ್ಚಿನೆಲ್ಲ ಫೀಚರ್‌ಗಳು A50ಯಂತೆ ಇವೆ. Galaxy A10ನ ಸ್ಕ್ರೀನ್‌ನ ಇವೆರಡಕ್ಕಿಂತ ತುಸು ಚಿಕ್ಕದು. 6.2 ಇಂಚಿನದು. ಮೇನ್‌ ಕ್ಯಾಮೆರಾ 13 MP, ಫ್ರಂಟ್‌ ಕ್ಯಾಮೆರಾ 5 MP ಸಾಮಥ್ಯದ್ದು.

ಬೆಲೆ: Galaxy A50-22,990 ರು. (6 GB RAM), 19,990ರು. (4GB RAM) Galaxy A30- 16,990ರು., Galaxy A10-8,490 ರು.

ಇದನ್ನೂ ಓದಿ: ವಾಟ್ಸಪ್‌ನಿಂದ ಈ ಫೀಚರ್ ಮಾಯ! ಟೆನ್ಶನ್‌ನಲ್ಲಿ ಬಳಕೆದಾರರು

Latest Videos
Follow Us:
Download App:
  • android
  • ios